ಮೂಲ: ಭಾಸ್ಕರ ಚಕ್ರವರ್ತಿ
ಇಪ್ಪತ್ತೊಂದನೆ ಶತಮಾನದ
ಪ್ರಿಯಜನಗಳೇ
ದಯವಿಟ್ಟು ನಮ್ಮನ್ನು ಮರೆತುಬಿಡಿ ನೀವು.
ಸ್ವಾರ್ಥಿಗಳಿದ್ದೆವು ನಾವು
ಅಸ್ವಸ್ಥರಿದ್ದೆವು,
ಹಿಂಸೆಯಲ್ಲಿ ಪಳಗಿಯೂ
ವಿಷಣ್ಣರಾಗಿದ್ದೆವು ನಾವು.
ನಾವು ಬದುಕಿದ್ದದ್ದು
ಅಣುಬೂದಿ ಆಕಾಶದಲ್ಲಿ ಈಜುತ್ತಿದ್ದಾಗ,
ನಮ್ಮ ಮಹಾನಗರಗಳು
ಕುಸಿದು ಹುಡಿಯಾಗಲು
ಕಾತರಿಸಿದ್ದಾಗ.
*****
















