Home / ಹೊಳೆ ಮಗಳು

Browsing Tag: ಹೊಳೆ ಮಗಳು

ಹೊರಳುತ್ತಿರುವ ಭೂಮಿಯನ್ನೂ ಉರುಳುತ್ತಿರುವ ಸಾಗರವನ್ನೂ ಮಾತನಾಡಿಸಬೇಕು ಉರಿಯುತ್ತಿರುವ ಬೆಂಕಿಯನ್ನೂ ಮೊರೆಯುತ್ತಿರುವ ಗಾಳಿಯನ್ನೂ ಮಾತನಾಡಿಸಬೇಕು ಮರಳುತ್ತಿರುವ ಹಕ್ಕಿಗಳನ್ನೂ ಅರಳುತ್ತಿರುವ ಹೂವುಗಳನ್ನೂ ಮಾತನಾಡಿಸಬೇಕು ಚಿಗುರುತ್ತಿರುವ ಮರವನ್ನ...

ಹಸಿವಾಯಿತು ಶರಣಾದೆ ಮರಗಳಿಗೆ ಬಾಯಾರಿತು ತಲೆಬಾಗಿದೆ ನದಿಗಳಿಗೆ ಮನಸೊಪ್ಪಿತು ಸುಲಿಪಲ್ಲ ಗೊರವಂಗೆ ಒಲಿದೆ ಗಿರಿಗಳಿಗೆ ಗವಿಗಳಿಗೆ ಗಿಳಿ ಕೋಗಿಲೆ ನವಿಲುಗಳಿಗೆ ಮಂದ ಮಾರುತಗಳಿಗೆ ಕೈಯ ಮುಗಿದೆ ನಡೆವವಳಿಗೆ ನುಡಿಯ ಹಂಗೇಕೆ? ಕಡೆಯ ನುಡಿಯನೂ ಕೊಡವಿ &#...

ಒಂದು ಗಂಟೆ ಪುಟ್ಟ ಕೋಣೆಯ ಬೆಳಗಿದೆ ಗೋಡೆಯ ಮೇಲೆ ಸುಂದರಿಯ ಪಟವಿತ್ತು ಪರಿಶೀಲಿಸಿದೆ ಹೂದಾನಿಯಲ್ಲಿ ತಾಜಾ ಹೂಗುಚ್ಚವಿತ್ತು ಆಘ್ರಾಣಿಸಿದೆ ಮರುಳೆ… ಬೂದಿಯಾಗಿರು ಎಂದು ಬೆಂಬತ್ತಿದ ಪತಂಗಕ್ಕೆ ತಿಳಿಯ ಹೇಳಿದೆ ಮೂಲೆಯಲ್ಲಿ ಮುದುಡಿ ಮಲಗಿದ್ದ ಮ...

ಮುಡಿಯ ಸಿಂಗರಿಸಿದ ಹೂವುಗಳು…. ಕೆನ್ನೆಯ ನುಣುಪಾಗಿಸಿದ ಬಣ್ಣಗಳು… ಮೂಗನು ಸೆಳೆದ ಸುಗಂಧಗಳು… ನಾಲಗೆಯ ಮುದಗೊಳಿಸಿದ ರಸಗಳು… ಕಿವಿಯ ತಣಿಸಿದ ಸ್ವರಗಳು… ಕಣ್ಣನು ಅರಳಿಸಿದ ನೋಟಗಳು… ಎಲ್ಲಿ ಹೋದವೋ? ಎಣ್ಣ...

ರೆಕ್ಕೆಗಳಿಲ್ಲ ಎಂದು ಆಕಾಶ ಅವಮಾನಿಸಲಿಲ್ಲ ಗಿಡದೆತ್ತರ ಎಂದು ಮರ ಮೂದಲಿಸಲಿಲ್ಲ ಏನು ನಡೆಯೊ ಎಂದು ನದಿ ಅಣಕವಾಡಲಿಲ್ಲ ಸಣ್ಣವಳೆಂದು ಶಿಖರ ತಿರಸ್ಕರಿಸಲಿಲ್ಲ ಕೃಷ್ಣೆ ಎಂದು ಬೆಳದಿಂಗಳು ನಗೆಯಾಡಲಿಲ್ಲ ಮಾತು ಬರುವುದಿಲ್ಲ ಎಂದೇನೂ ಅಲ್ಲ ಮತ್ತೆ? ಎದೆ...

ತುಂಬಿದ ಹೊಳೆ ಸುಡುವ ಬೆಂಕಿ ಮಿಂಚುವ ಕಣ್ಣು ಕತ್ತಿಯ ನಾಲಗೆ ಕುದಿಯುವ ರಕ್ತ ಮಣಿಯದ ತೋಳು ಚಿರತೆಯ ನಡೆ ಹದ್ದಿನ ನೋಟ ಒನಪು-ವಯ್ಯಾರ ಆರ್‍ಭಟ-ಆವೇಶ ಅಗಾಧ ಹಸಿವು ಅಚಲ ವಿಶ್ವಾಸ ಪುಟ್ಟ ಹೃದಯ ದೊಡ್ಡ ಆಶೆ. *****...

ದೀಪದ ಕುಡಿ ನಿಶ್ಚಲವಾಗಿ ಉರಿದಿರಲು ಅಗರಬತ್ತಿಯು ಘಮಘಮಿಸಿ ಸುವಾಸನೆಯ ಬೀರಿರಲು ಕುಂಕುಮದ ಬೊಟ್ಟಿಟ್ಟು ಹೂಗಳನೇರಿಸಿ ಹಾಲು-ಸಕ್ಕರೆಯನಿರಿಸಿ ನನ್ನ ಕಷ್ಟಗಳ ಕಟ್ಟು ಬಿಚ್ಚಿದೆ ನಾನು ಹೇಳುತ್ತಾ ಹೋದೆ ಅವನು ಕೇಳುತ್ತಾ ಕೂತ ಸಮಯ ಸರಿದದ್ದೆ ತಿಳಿಯಲಿಲ...

ಕರುಳು ಬಳ್ಳಿಯಲಿ ಹರಿದು ಬಂದವನು ರಕ್ತಗತನಾಗಿಹನು ನರನಾಡಿಯಲಿ ಸಂಚರಿಸಿ ಉಸಿರು ಕೊಟ್ಟಿಹನು ಆಶೆ ಬೆಂಕಿಯನಿಕ್ಕಿ ಎಚ್ಚರವಾಗಿಹನು ಈಗವನ ಕಣ್ಣಿಂದಲೆ ನಾನವನ ನೋಡುವೆನು ಹಣ್ಣಲ್ಲಿ ಬೇರೂರಿದಂತೆ ನನ್ನಲ್ಲಿ ಅವನು. *****...

ಏಯ್! ಯಾರು ನೀನು? ನಾನು ಹೂಗಿಡಗಳ ಮಿತ್ರ ಏಯ್! ಯಾರು ನೀನು? ನಾನು ನದಿಯ ಪಾತ್ರ ಏಯ್! ಯಾರು ನೀನು? ನಾನು ಅಗ್ನಿ ನೇತ್ರ ಏಯ್! ಯಾರು ನೀನು? ನಾನು ಉಲ್ಲಾಸ ಚೈತ್ರ ಏಯ್! ಯಾರು ನೀನು? ನಾನು ಪದ್ಮ ಪತ್ರ ಏಯ್! ಯಾರು ನೀನು? ನಾನು ನಾಟಕದ ಪಾತ್ರ ಏಯ...

ಕಡಲ ಕರುಳು ಬಳ್ಳಿಯಲ್ಲರಳಿದ ಹೂ-ಮಗನೆ ಎಲೆ ಎಲೆ ಅಲೆಯೊಳಗಣ ನಿತ್ಯ ಹರಿದ್ವರ್‍ಣನೆ ಅಂಬಿಗನೆ- ಹೇಳು ಆ ದಂಡೆಯಲ್ಲೇನಿದೆ? ಹುಟ್ಟಿನ ಹರಿಕಾರನೆ ಮತ್ಸ್ಯಕನ್ನಿಕೆಯ ಪ್ರಿಯಕರನೆ ಅಂಬಿಗನೆ- ಹೇಳು ಆ ದಂಡೆಯಲ್ಲೇನಿದೆ? ಸುಳಿಗಾಳಿಯ ಸನ್ಮಿತ್ರನೆ ಮಳಲ ಮಾನ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...