ಹೊಳೆ ಮಗಳು

#ಕವಿತೆ

ಬೇಡ…

0
ಸವಿತಾ ನಾಗಭೂಷಣ
Latest posts by ಸವಿತಾ ನಾಗಭೂಷಣ (see all)

ಭಯ ಹುಟ್ಟಿಸಬೇಡ… ಬೆಂಕಿಯ ಮುಟ್ಟಿ ನೋಡುತ್ತೇನೆ ತಡೆಯಬೇಡ… ಕಡಲೊಳಗೆ ಧುಮುಕಿ ಈಜುತ್ತೇನೆ ನಗಬೇಡ… ಬಿಸಿಲುಗುದುರೆಯನೇರಿ ಹೋಗುತ್ತೇನೆ ಅಣಕಿಸಬೇಡ… ಮರಳೊಳಗೆ ಗೂಡು ಕಟ್ಟುತ್ತೇನೆ ಎಚ್ಚರಿಸಬೇಡ… ಮೊಟ್ಟೆಗೆ ಕಾವಿಟ್ಟು ಮರಿ ಮಾಡುತ್ತೇನೆ ಮುನಿಯಬೇಡ… ಮಾರನಿಗೊಲಿದು ಮೈ ಮರೆಯುತ್ತೇನೆ ಕೀಳಬೇಡ… ಮೈದುಂಬಿ ಅರಳುತ್ತೇನೆ ಕರೆಯಬೇಡ… ಇಲ್ಲಿರಲು ಆಶೆ ಪಡುತ್ತೇನೆ ಬೇಡ… ಬೇಡ… ಬೇಡ…! ಹಿಂಬಾಲಿಸಬೇಡ ಸುಮ್ಮನೆ… *****

#ಕವಿತೆ

ಮಾತನಾಡಿಸಬೇಕು

0
ಸವಿತಾ ನಾಗಭೂಷಣ
Latest posts by ಸವಿತಾ ನಾಗಭೂಷಣ (see all)

ಹೊರಳುತ್ತಿರುವ ಭೂಮಿಯನ್ನೂ ಉರುಳುತ್ತಿರುವ ಸಾಗರವನ್ನೂ ಮಾತನಾಡಿಸಬೇಕು ಉರಿಯುತ್ತಿರುವ ಬೆಂಕಿಯನ್ನೂ ಮೊರೆಯುತ್ತಿರುವ ಗಾಳಿಯನ್ನೂ ಮಾತನಾಡಿಸಬೇಕು ಮರಳುತ್ತಿರುವ ಹಕ್ಕಿಗಳನ್ನೂ ಅರಳುತ್ತಿರುವ ಹೂವುಗಳನ್ನೂ ಮಾತನಾಡಿಸಬೇಕು ಚಿಗುರುತ್ತಿರುವ ಮರವನ್ನೂ ಕರಗುತ್ತಿರುವ ಮಂಜನ್ನೂ ಮಾತನಾಡಿಸಬೇಕು ಆಕಾಶ-ಕಾಯದೊಳಗೆ ಅವಿನಾಶಿ ಸೂರ್‍ಯ! ದೇವರೆ… ಇವರದ್ದು ಯಾವ ಭಾಷೆ?! ಎಂದಾದರೂ ಕೈಗೂಡುವುದೇ ಆಶೆ? *****

#ಕವಿತೆ

ಕಾಲು ದಾರಿಯೆ ಸಾಕು…

0
ಸವಿತಾ ನಾಗಭೂಷಣ
Latest posts by ಸವಿತಾ ನಾಗಭೂಷಣ (see all)

ಹಸಿವಾಯಿತು ಶರಣಾದೆ ಮರಗಳಿಗೆ ಬಾಯಾರಿತು ತಲೆಬಾಗಿದೆ ನದಿಗಳಿಗೆ ಮನಸೊಪ್ಪಿತು ಸುಲಿಪಲ್ಲ ಗೊರವಂಗೆ ಒಲಿದೆ ಗಿರಿಗಳಿಗೆ ಗವಿಗಳಿಗೆ ಗಿಳಿ ಕೋಗಿಲೆ ನವಿಲುಗಳಿಗೆ ಮಂದ ಮಾರುತಗಳಿಗೆ ಕೈಯ ಮುಗಿದೆ ನಡೆವವಳಿಗೆ ನುಡಿಯ ಹಂಗೇಕೆ? ಕಡೆಯ ನುಡಿಯನೂ ಕೊಡವಿ …ಮುನ್ನಡೆದೆ ಕೂಡಿ ಬಂದಿರಲು ಗಳಿಗೆ ಕಾಲು ದಾರಿಯೆ ಸಾಕು ಕರೆದೊಯ್ಯಲು ಕದಳಿಗೆ… ಇದನರಿಯದಿಹನೆ ಚೆನ್ನಮಲ್ಲಿಕಾರ್‍ಜುನ? *****

#ಕವಿತೆ

ಮೋಂಬತ್ತಿ

0
ಸವಿತಾ ನಾಗಭೂಷಣ
Latest posts by ಸವಿತಾ ನಾಗಭೂಷಣ (see all)

ಒಂದು ಗಂಟೆ ಪುಟ್ಟ ಕೋಣೆಯ ಬೆಳಗಿದೆ ಗೋಡೆಯ ಮೇಲೆ ಸುಂದರಿಯ ಪಟವಿತ್ತು ಪರಿಶೀಲಿಸಿದೆ ಹೂದಾನಿಯಲ್ಲಿ ತಾಜಾ ಹೂಗುಚ್ಚವಿತ್ತು ಆಘ್ರಾಣಿಸಿದೆ ಮರುಳೆ… ಬೂದಿಯಾಗಿರು ಎಂದು ಬೆಂಬತ್ತಿದ ಪತಂಗಕ್ಕೆ ತಿಳಿಯ ಹೇಳಿದೆ ಮೂಲೆಯಲ್ಲಿ ಮುದುಡಿ ಮಲಗಿದ್ದ ಮುದುಕನ ಮರಣಕ್ಕೂ ಸಾಕ್ಷಿಯಾದೆ ಉರಿದೂ ಉರಿದೆ ಕೊನೆವರೆಗೆ ದೇಹದೊಂದಿಗೆ ಆತ್ಮನೊಂದಿಗೆ. *****

#ಕವಿತೆ

ಎಲ್ಲಿ ಹೋದವೋ….

0
ಸವಿತಾ ನಾಗಭೂಷಣ
Latest posts by ಸವಿತಾ ನಾಗಭೂಷಣ (see all)

ಮುಡಿಯ ಸಿಂಗರಿಸಿದ ಹೂವುಗಳು…. ಕೆನ್ನೆಯ ನುಣುಪಾಗಿಸಿದ ಬಣ್ಣಗಳು… ಮೂಗನು ಸೆಳೆದ ಸುಗಂಧಗಳು… ನಾಲಗೆಯ ಮುದಗೊಳಿಸಿದ ರಸಗಳು… ಕಿವಿಯ ತಣಿಸಿದ ಸ್ವರಗಳು… ಕಣ್ಣನು ಅರಳಿಸಿದ ನೋಟಗಳು… ಎಲ್ಲಿ ಹೋದವೋ? ಎಣ್ಣೆ ತೀರಿದೆ ಎಂದು ತೋರುವುದು… ಬೆಂಕಿಯ ಕರುಣೆ ಬತ್ತಿ ಮತ್ತೂ ಉರಿಯುವುದು. *****

#ಕವಿತೆ

ವ್ಯತ್ಯಾಸ

0
ಸವಿತಾ ನಾಗಭೂಷಣ
Latest posts by ಸವಿತಾ ನಾಗಭೂಷಣ (see all)

ರೆಕ್ಕೆಗಳಿಲ್ಲ ಎಂದು ಆಕಾಶ ಅವಮಾನಿಸಲಿಲ್ಲ ಗಿಡದೆತ್ತರ ಎಂದು ಮರ ಮೂದಲಿಸಲಿಲ್ಲ ಏನು ನಡೆಯೊ ಎಂದು ನದಿ ಅಣಕವಾಡಲಿಲ್ಲ ಸಣ್ಣವಳೆಂದು ಶಿಖರ ತಿರಸ್ಕರಿಸಲಿಲ್ಲ ಕೃಷ್ಣೆ ಎಂದು ಬೆಳದಿಂಗಳು ನಗೆಯಾಡಲಿಲ್ಲ ಮಾತು ಬರುವುದಿಲ್ಲ ಎಂದೇನೂ ಅಲ್ಲ ಮತ್ತೆ? ಎದೆಯಲ್ಲಿ ವಿಷವಿಲ್ಲ ನಾಲಗೆಯು ಮುಳ್ಳಲ್ಲ ಪ್ರೀತಿಗೆ-ಮೈತ್ರಿಗೆ ಮಿಗಿಲಿಲ್ಲ. *****

#ಕವಿತೆ

ತಾರುಣ್ಯ

0
ಸವಿತಾ ನಾಗಭೂಷಣ
Latest posts by ಸವಿತಾ ನಾಗಭೂಷಣ (see all)

ತುಂಬಿದ ಹೊಳೆ ಸುಡುವ ಬೆಂಕಿ ಮಿಂಚುವ ಕಣ್ಣು ಕತ್ತಿಯ ನಾಲಗೆ ಕುದಿಯುವ ರಕ್ತ ಮಣಿಯದ ತೋಳು ಚಿರತೆಯ ನಡೆ ಹದ್ದಿನ ನೋಟ ಒನಪು-ವಯ್ಯಾರ ಆರ್‍ಭಟ-ಆವೇಶ ಅಗಾಧ ಹಸಿವು ಅಚಲ ವಿಶ್ವಾಸ ಪುಟ್ಟ ಹೃದಯ ದೊಡ್ಡ ಆಶೆ. *****

#ಕವಿತೆ

ನಿವೇದನೆ

0
ಸವಿತಾ ನಾಗಭೂಷಣ
Latest posts by ಸವಿತಾ ನಾಗಭೂಷಣ (see all)

ದೀಪದ ಕುಡಿ ನಿಶ್ಚಲವಾಗಿ ಉರಿದಿರಲು ಅಗರಬತ್ತಿಯು ಘಮಘಮಿಸಿ ಸುವಾಸನೆಯ ಬೀರಿರಲು ಕುಂಕುಮದ ಬೊಟ್ಟಿಟ್ಟು ಹೂಗಳನೇರಿಸಿ ಹಾಲು-ಸಕ್ಕರೆಯನಿರಿಸಿ ನನ್ನ ಕಷ್ಟಗಳ ಕಟ್ಟು ಬಿಚ್ಚಿದೆ ನಾನು ಹೇಳುತ್ತಾ ಹೋದೆ ಅವನು ಕೇಳುತ್ತಾ ಕೂತ ಸಮಯ ಸರಿದದ್ದೆ ತಿಳಿಯಲಿಲ್ಲ ಅವನೂ ಕೂತಲ್ಲಿಂದ ಕದಲಲಿಲ್ಲ ಕೊನೆಕೊನೆಗೆ ನನ್ನ ಕಂಠವೂ ತುಂಬಿ ಬಂದಿತ್ತು ಅವನ ಕಣ್ಣಿಂದಲೂ ನೀರು ತುಳುಕಿತ್ತು. *****

#ಕವಿತೆ

ದೇವರಿಗೆ

0
ಸವಿತಾ ನಾಗಭೂಷಣ
Latest posts by ಸವಿತಾ ನಾಗಭೂಷಣ (see all)

ಕರುಳು ಬಳ್ಳಿಯಲಿ ಹರಿದು ಬಂದವನು ರಕ್ತಗತನಾಗಿಹನು ನರನಾಡಿಯಲಿ ಸಂಚರಿಸಿ ಉಸಿರು ಕೊಟ್ಟಿಹನು ಆಶೆ ಬೆಂಕಿಯನಿಕ್ಕಿ ಎಚ್ಚರವಾಗಿಹನು ಈಗವನ ಕಣ್ಣಿಂದಲೆ ನಾನವನ ನೋಡುವೆನು ಹಣ್ಣಲ್ಲಿ ಬೇರೂರಿದಂತೆ ನನ್ನಲ್ಲಿ ಅವನು. *****

#ಕವಿತೆ

ಯಾರು ನೀನು?

0
ಸವಿತಾ ನಾಗಭೂಷಣ
Latest posts by ಸವಿತಾ ನಾಗಭೂಷಣ (see all)

ಏಯ್! ಯಾರು ನೀನು? ನಾನು ಹೂಗಿಡಗಳ ಮಿತ್ರ ಏಯ್! ಯಾರು ನೀನು? ನಾನು ನದಿಯ ಪಾತ್ರ ಏಯ್! ಯಾರು ನೀನು? ನಾನು ಅಗ್ನಿ ನೇತ್ರ ಏಯ್! ಯಾರು ನೀನು? ನಾನು ಉಲ್ಲಾಸ ಚೈತ್ರ ಏಯ್! ಯಾರು ನೀನು? ನಾನು ಪದ್ಮ ಪತ್ರ ಏಯ್! ಯಾರು ನೀನು? ನಾನು ನಾಟಕದ ಪಾತ್ರ ಏಯ್! ಯಾರು ನೀನು? ನಾನು […]