ಜನನದಲ್ಲಿ
ಮರಣದಲ್ಲಿ
ಹೂವು
ಜತೆಯಾಗುವುದು

ಸಂತೋಷದಲ್ಲಿ
ದುಃಖದಲ್ಲಿ
ಹೂವು
ಭಾಗಿಯಾಗುವುದು

ಮಿಕ್ಕವರು
ಮರಳಿದರೂ
ಮಸಣದಲ್ಲಿ
ಹೂವು
ಉಳಿದೇ
ಉಳಿಯುವುದು

ಆಳಿದವನ
ಆತ್ಮವನ್ನು
ಪರಮಾತ್ಮನೆಡೆ
ಕೊಂಡೊಯ್ಯುವುದು.
*****