ಕಿಕ್ಕಿರಿದಿದ್ದವು ಮರದಲ್ಲಿ ಹೂವುಗಳು
ಇಡೀ ಮರವು ಒಂದು ಹೂವು
ಇಡೀ ಹೂದೋಟವು ಒಂದು ಹೂಗೊಂಚಲು
ಇಡೀ ಭೂಮಂಡಲವು ಒಂದು ಹೂ ಬುಟ್ಟಿಯು
ಹೂಭಾರಕ್ಕೆ ಪರಿಮಳಕೆ ಪಕ್ಕಾಗಿ
ಹೂವಾಡಗಿತ್ತಿಯು ತೂಗಿರಲು-

ನೋಡು… ಬ…
ಎಂದವನ ಕರೆದೆ

ಅವನೋ…
ಮತ್ತನಾಗಿ ಮೈದುಂಬಿ
ಮಲಗಿದ್ದ
ಹೂವಿನೆದೆಯೊಳಗೆ.
*****

ಸವಿತಾ ನಾಗಭೂಷಣ
Latest posts by ಸವಿತಾ ನಾಗಭೂಷಣ (see all)