ಏಯ್! ಯಾರು ನೀನು?
ನಾನು ಹೂಗಿಡಗಳ ಮಿತ್ರ

ಏಯ್! ಯಾರು ನೀನು?
ನಾನು ನದಿಯ ಪಾತ್ರ

ಏಯ್! ಯಾರು ನೀನು?
ನಾನು ಅಗ್ನಿ ನೇತ್ರ

ಏಯ್! ಯಾರು ನೀನು?
ನಾನು ಉಲ್ಲಾಸ ಚೈತ್ರ

ಏಯ್! ಯಾರು ನೀನು?
ನಾನು ಪದ್ಮ ಪತ್ರ

ಏಯ್! ಯಾರು ನೀನು?
ನಾನು ನಾಟಕದ ಪಾತ್ರ

ಏಯ್! ಯಾರು ನೀನು?
ನಾನು ಅಣುಸೂತ್ರ

ಏಯ್! ಯಾರು ನೀನು?
ನಾನು ಬ್ರಹ್ಮಾಂಡ ಗಾತ್ರ

ಏಯ್! ಯಾರು ನೀನು?
ನಾನು ನೀನು ಮಾತ್ರ
*****

ಸವಿತಾ ನಾಗಭೂಷಣ
Latest posts by ಸವಿತಾ ನಾಗಭೂಷಣ (see all)