
ನಮ್ಮೆಲ್ಲರ ಪಯಣದ ದಾರಿ ತುಂಬ ಗಿಡಮರ ಹಕ್ಕಿ ಚಕ್ಕಿ ವಿಸ್ಮಯಗಳ ನೋಟ ಕೂಟದಲ್ಲಿ ನಾನೀನಾಗಿ ನೀನಾನಾಗಿ ಬಿಟ್ಟು ಬಂದ ನಡೆದ ದಾರಿ ಹಸಿಬಿಸಿ ಎಲ್ಲವೂ ಇದ್ದು ಒಮ್ಮೆ ತಿರುಗಿ ನೋಡಿ ನರಳೋಣ ಇದು ಇರಬಹುದು ಬದುಕು ಏನೇನೋ ಹುಡುಕಾಟ ತಲ್ಲಣ ಶೃತಿ ಅಪಶೃತಿಗಳ...
ಕರಿ ಎರಿ ಹೊಲದಲ್ಲಿ ಘಮ್ಮೆಂದು ಕೆಂಪು ಹಾಯ್ದ ಬಳಿಜೋಳದ ತೆನೆ ತೆನೆಗಳಲಿ ಹಕ್ಕಿಹಿಂಡು ಹಾಡು ಬಿಚ್ಚಿ ಕೊಂಡ ಅನವು ಹೆಚ್ಚಾಗಿ ಹರಡಿತು ಭೂಮಿ ಎದೆ ಕುಬುಸ ಬಿಚ್ಚಿಕೊಂಡ ಉಲಿತ. ಮಾಗಿದ ಚಳಿಯ ಪದರಲಿ ಸೋಸಿ ಸೂಸಿದ ಚಿಗುರ ಗಂಧಗಾಳಿ ತೂರಿ ಜಿಗಿದವು ಕನಸು...














