Home / Hamsa R

Browsing Tag: Hamsa R

ತನು ಮನ ಸೆಳೆಯುವ ಬೃಂದಾವನಕೆ ಹೋಗುವ ಬಾರೆ ಸಖಿ ಕರೆಯೋಲೆಯನಿತ್ತು ಕರೆಯುತಿದೆ ಬೃಂದಾವನ || ನವರಸ ಶೃಂಗಾರ ರಸದೌತಣ ನವ ಚೈತನ್ಯ ಮೈತಾಳಿತ್ತು ರಾಧೆ ಕೃಷ್ಣೆಯರ ಗೋಪಿಕೆಯರ ವನ ಬೃಂದಾವನ || ಕಿನ್ನರ ಲೋಕದ ಕಿನ್ನರಿಯ ನರ್‍ತನ ಜಲದಿನಿಂದು ಮೆರೆವ ಸ್ವ...

ಹಾಡಿನಂದ ರೂಪ ನಾನು ಕಲಿಯಲಿಲ್ಲ ಕಲಿಸಿದಾದರೇನು ನಾನು ಕಲಿಯಲಿಲ್ಲ || ಹೃದಯವಂತಿಕೆಯ ಪ್ರೀತಿ ಯಾರು ತೋರಲಿಲ್ಲ ಯಾರಿಗೂ ಯಾರೆಂದನರಿತು ಮನವು ತಿಳಿಯಲಿಲ್ಲ || ಹಾಡು ಬರಿದಾದರೇನು ನನ್ನ ಭಾವಗಳು ಬರಿದಾಗಲಿಲ್ಲ ಭಾವನಂದದ ರೂಪ ಕಲಿಸಿದಾದರೇನು ನಾನು ಕ...

ಭಯವೇತಕೆ ಮನವೇ ಬದುಕು ಬಯಲಿನಾಟದ ನಿಲುವು || ಹುಟ್ಟಿರಲು ಭಯಕಾಡಲಿಲ್ಲ ಮೆಟ್ಟಿರಲು ಭಯವೆಂಬುದಿಲ್ಲ ಬರಲು ಮುಪ್ಪು ಭಯವೇತಕೆ ಸಾವು ನೇರಳಿನಾಟದೆ ಬೆಪ್ಪನಾದೆ ನೀನು || ಪಾಪಿ ನಾನು ಪುಣ್ಯ ಧಾರೆ ಎರೆದು ಧರ್‍ಮಕರ್‍ಮ ಪಕಳೆ ತೆರೆದು ತಾನು ಆನು ನೀನು ...

ಮೋಡ ಕವಿದಿದೆ ಬೆಳ್ಳಿ ಕಿರಣಕೆ ಕವಿದ ಮೋಡವ ಸರಿಸುವರಾರು || ಕರಗಿದೆದೆಯಾ ತೆರೆಯ ಹಾಸುವ ಬೆಳ್ಳಿ ಕಿರಣಕೆ ಏಳು ಬಣ್ಣ ತುಂಬಿ ನೆಲದೆದೆಯಾ ತಂಪಾಗಿರಿಸಿ ವರ್‍ಷನಲ್ಲಿ ಅನಂತವಾಗಿ ತಲ್ಲಣಗೊಳಿಸುವರಾರು || ತುಂತುರು ಹನಿಗಲ್ಲ ಸವರಿ ತುಟಿಯಂಚಿನ ನಗುವನಿ...

ಸ್ನೇಹವೆ ಜೀವನ ಪಾವನ ಭಾವನ ಚೇತನ ಕಿರಣ ಆನಂದ ವಿತಾನವು || ಸ್ನೇಹವೆ ಸೆಲೆಯು ಮನದಾ ಅಲೆಯು ಬಲೆಯ ಬೀಸಿದಾ ಅಂಬಿಗನ ಆಹ್ವಾನವು || ಸ್ನೇಹವೆ ಸರಸ ವಿರಸ ವಿರಹ ನೋವಲಿ ಕಾಣುವ ಮಂದಾರ ಸುಮಬಾಣವು || ಸ್ನೇಹವೆ ನೆಲವು ಅಳಿವು ಉಳಿವು ಹಸಿರಾ ಉಸಿರಾಗಿ ಬೆ...

ಭವ್ಯ ಭಾರತ ಭೂಮಿ ನಮ್ಮದು ನವ್ಯ ಭಾರತ ಭೂಮಿ ನಮ್ಮದು ಶಾಂತಿ ಸಹನೆ ನೀತಿ ನೇಮ ಗಣ ಭಾವೈಕ್ಯತೆಯ ಗೂಡು ನಮ್ಮದು || ಜನನಿ ಜನುಮ ಭೂಮಿ ಸ್ವರ್‍ಗ ತಾಳ ಮುಗಿಲ ಕಾನನದೊಳಗಣಾ ಸಮೃದ್ಧಿ ಚೆಂದ ಗಂಧ ಮೆರೆದ ಭಾವೈಕ್ಯತೆಯ ಗೂಡು ನಮ್ಮದು || ಕನಕ ದೃಷ್ಟಿ ವನಿ...

ನನ್ನದಲ್ಲ ಈ ಕವಿತೆ ನನ್ನ ಮನಸಿನದು ನನ್ನ ಭಾವದ ಅಲೆಗಳದು ಹರಿಗೋಲ ಲೀಲೆಯದು || ದೋಣಿಯಲಿ ಸಾಗುತ ಬೀಸಿ ತಂಗಾಳಿಯಲಿ ಕಲರವಗೀತೆ ಚಿತ್ರ ಚಿತ್ತದೆ ದಡವ ಸೇರುವದೊಂದಾಸೆಯಲಿ ನನ್ನ ಮನವು || ಗೋಧೂಳಿಯ ಹೊಂಬೆಳಕಿನಲಿ ಸುಂದರ ಕನಸ ಎಳೆಯಲಿ ಭಾವನೆಗಳ ಜೊತೆ...

ಮಡಿಲ ತುಂಬ ತುಂಬಿ ಕಾವ ದೈನ್ಯಭಾವ ತುಂಬಿ ಮನದೊಳು ನೀ ಹ್ಯಾಂಗೆ ಹೊರುತಿ ನೀ ಗರತಿ ನಿನ್ನ ಮರ್ಮವ ತಿಳಿಯದೇ ಗೆಳತಿ|| ಕಡಲ ತುಂಬಿ ಹರಿವ ನೀರಿನಂತೆ ನೀರಲ್ಲಿಹ ಮೀನಿನಂತೆ ಬಲೆಯ ಬೀಸಿದವನ ಗಾಳಕೆ ಸಿಲುಕಿ ಪರಿತಪಿಸಿ ಮೌನವಾಗಿ ನೀ ಹ್ಯಾಂಗೆ ಇರುತಿ ಗೆ...

ಸುಗ್ಗಿ ಕಾಲ ಬಂದೈತೆ ಹಿಗ್ಗನ್ನು ತಂದು ಕೊಟ್ಟೈತೆ ಸಂಕ್ರಾಂತಿ ಮೇಳ ಹಿಂಗೊಂದು ತಾಳ ಹೆಜ್ಜೆಯ ಗೆಜ್ಜೆಗೆ ಕಟ್ಟೈತೆ || ತಂದಾನಿ ತಾನೊ ತಾನಿ ತಂದಾನೋಽಽಽಽ ಮಲ್ಲಯ್ಯನ ನೆನೆದು ಸೋನೆ ಮುತ್ತಲ್ಲಿ ಮುತೈದೆ ಕುಂತು ರಾಶಿ ರಾಶಿ ರಾಗೀಯ ಬೀಸೈತೆ ರಾಗ ತಂದು...

ಸುಂದರ ಸ್ವಪ್ನ ಸುಧೆಯಲ್ಲಿ ನಿನ್ನ ನೆನಪಿನಾ ಅಲೆ ತುಂಬಿ ತೇಲಿ ಬರುತಿದೆ ಪ್ರತಿಬಿಂಬ ನಿನ್ನ ಪ್ರತಿಬಿಂಬ || ಕಾಣದಾ ನಿನಾದ ಸೆರೆಯಲ್ಲಿ ಸ್ವಚ್ಛಬಾಂದಳ ಮೋಡದಲಿ ತೂಗುತಲಿದೆ ಎನ್ನ ಮನಸು ನನ್ನ ಮನಸು || ಚದುರಿ ಚಿತ್ತ ಚದುರಂಗ ಬಾಳ ಪುಟದಾ ಅಂತರಂಗ ಕ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...