ಮಡಿಲ ತುಂಬ ತುಂಬಿ ಕಾವ
ದೈನ್ಯಭಾವ ತುಂಬಿ ಮನದೊಳು
ನೀ ಹ್ಯಾಂಗೆ ಹೊರುತಿ ನೀ ಗರತಿ
ನಿನ್ನ ಮರ್ಮವ ತಿಳಿಯದೇ ಗೆಳತಿ||

ಕಡಲ ತುಂಬಿ ಹರಿವ ನೀರಿನಂತೆ
ನೀರಲ್ಲಿಹ ಮೀನಿನಂತೆ
ಬಲೆಯ ಬೀಸಿದವನ ಗಾಳಕೆ ಸಿಲುಕಿ
ಪರಿತಪಿಸಿ ಮೌನವಾಗಿ
ನೀ ಹ್ಯಾಂಗೆ ಇರುತಿ ಗೆಳತಿ|| ನೀ ||

ಮುಳ್ಳಲ್ಲಿಹ ಗುಲಾಬಿಯಂತೆ
ಪಾಚಿಯಲ್ಲಿಹ ಕಮಲದಂತೆ
ಸಂಸಾರವೆಂಬ ಸಾಗರದಲಿ ಸಿಲುಕಿ
ಸೋಲಿನ ಸೆರೆಯಲ್ಲಿ ಗೆಲುವ ಕಾಣುತಿ
ನೀನು ಹ್ಯಾಂಗೆ ಇರುತಿ ಗೆಳತಿ|| ನೀ ||
*****