ದೇಹದೊಳಗಿನ ಮೂಳೆ, ರಕ್ತನಾಳ, ಇತರೆ ಚರ್‍ಮಕ್ಕೆ ಸಂಬಂಧಿಸಿದಂತೆ ಅಂಗಾಂಗಳು ಸಿಥಿಲಗೊಂಡಾಗ ಅವುಗಳ ಬದಲಿಗೆ ಬೇರೆ ಅಂಗಗಳನ್ನು ಜೋಡಿಸುವ ಪರಿಕರಗಳಿಗೆ ಸ್ಮಾರ್ಟ್ ಮೆಟೀರಿಯಲ್ಸ್, ಎಂದು ಕರೆಯುತ್ತಾರೆ. ಕೆಲವರಿಗೆ ಧ್ವನಿನಾಳಗಳನ್ನು ತೆಗೆದು ಹಾಕಲಾಗುತ್ತದೆ. ಅಂತವರಿಗೆ ಕೃತಕ ಧ್ವನಿನಾಳ ವರವಾಗಿ ಬಂದಿದೆ. ಮಾನವನ ದೇಹದ ಅಳವಡಿಕೆ ಅಥವಾ Implant ಗಳು ಗಟ್ಟಿಮುಟ್ಟಾಗಿರಬೇಕು. ದೇಹಕ್ಕೆ ಅದರಿಂದ ಯಾವದೇ ದುಷ್ಪರಿಣಾಮ ಆಗಬಾರದು. ಅದು ದೇಹಕ್ಕೆ ಲಗತ್ತಾಗಿ ಹೊಂದಿಕೊಂಡು ಕಾರ್ಯ ನಿರ್ವಹಿಸಬೇಕಾಗುತ್ತದೆ. ಇದರಲ್ಲಿ “ನಿಟಿಲಾನ್’ ಎಂಬ ಮಿಶ್ರವು ವಿಶೇಷವೆನಿಸಿದೆ. ಕೋಣೆಯ ತಾಪಮಾನಕ್ಕೆ ಮಾನವ ದೇಹದ ಶಾಖಕ್ಕೂ ಗಣನೀಯವಾಗಿ ಆಕಾರ ಬದಲಾಯಿಸುತ್ತದೆ. ಆದ್ದರಿಂದ ಮಾನವನ Intravascular stent ಗಳಿಗೆ ಇದನ್ನು ಬಳೆಸುವುದು ಸೂಕ್ತವೆಂದು ಬಗೆದು ಇದರಿಂದ ದೇಹದೊಳಗಿನ ಶಿಥಿಲ ಅಂಗಗಳನ್ನು ತಯಾರಿಸಿ ಸೇರಿಸಲಾಗುತ್ತದೆ. ಟೈಟಾನಿಯಮ್, ಎಂಬ ಧಾತು ಕೃತಕ ಹಲ್ಲು ಜೋಡಣೆಗೆ ಸೂಕ್ತವೆಂದು ಕಂಡುಕೊಳ್ಳಲಾಗಿದೆ. ದಂತ ಅಳವಡಿಕೆಗಾಗಿ ಇದು ವ್ಯಾಪಕ ಬಳಕೆಯಲ್ಲಿದೆ. ಇದರಂತೆ ಮಂಡಿಚಿಪ್ಪು, ಕೀಲುಗಳು ಇತರೆ ದೇಹದೊಳಗಿನ ಅಂಗಾಂಗಗಳು ರೋಗ ಗ್ರಸ್ಥವಾದರೆ ಅವುಗಳನ್ನು ತೆರವುಗೊಳಿಸಿ ಈ ಸ್ಮಾರ್ಟ್ ಮೆಟೇರಿಯಲ್ಸ್ ಗಳನ್ನು ಜೋಡಿಸಲಾಗುತ್ತದೆ.
*****
