ಬಹುಪತಿತ್ವ
ಹೆಣ್ಣುಗಳಿದ್ದಾಗ – ಹೇರಳ ಬಹುಪತ್ನಿತ್ವ ಹೆಣ್ಣುಗಳಾಗಿವೆ – ವಿರಳ ಬಹುಪತಿತ್ವ *****
ಬೇವುಬೆಲ್ಲ ತಿನ್ನಬೇಕು ಸಮಾಸಮ ಎಂದರೆ ನಲ್ಲ ಬೇವು ನಿನಗಿರಲಿ ಬೆಲ್ಲ ನನಗಿರಲಿ ಅಲ್ಲಿಗೆ ಸಮ ಅನ್ನುವನಲ್ಲ *****
ಬಂದನೆಂದು ನಲ್ಲ ಕೊಬ್ಬಿ ಮರೆಯಬೇಡವೇ ಇಳೆ ನಡುನೀರಲ್ಲಿ ಕೈಬಿಡುವ ಬುದ್ಧಿ ವರುಣನದು ಕೇಳೆ ಹುಶಾರಾಗಿರು ಮರುಳೆ *****
ಒಮ್ಮೊಮ್ಮೆ ಸೂರ್ಯನು ಮಂಕಾಗುತ್ತಾನೆ. ಮರೆಯಾಗುತ್ತಾನೆ ಮೋಡ ಕಪ್ಪಾದಾಗ ತಪ್ಪು ತನ್ನದೆಂದು ಒಪ್ಪಿ, ಪಶ್ಚಾತ್ತಾಪದಿಂದ *****