Home / Vrushabendrachar Arkasali

Browsing Tag: Vrushabendrachar Arkasali

ಅಂಗಿಯೊಳ ಅಂಗಿಯಲ್ಲಡಗಿರುವ ಇವನು ಒಂದೊಂದೇ ಪದರ ಕಳಚಿ ತನ್ನ ಬೆಳ್ಳುಳ್ಳಿ ಮುಖವನ್ನು ತೋರಿಸಲಿಲ್ಲ ಅಥವಾ ಬಿಚ್ಚೀ ಬಿಚ್ಚೀ ಉಳ್ಳಾಗಡ್ಡೆಯಂತೆ ಬಟ್ಟ ಬಯಲಾಗಲಿಲ್ಲ ಬರೀ ಕಲ್ಲು ಕೆಸರುಗಳೇ ತುಂಬಿದ ಸರೋವರದ ತಳದಲ್ಲಿ ರತ್ನ ಮುತ್ತುಗಳು ಹೊಳೆಯಲೆ ಇಲ್ಲ ...

ಇನ್ನೂ ಅರ್ಥಾಗಲಿಲ್ಲೇನ್ನಿನ್ಗೆ? ನಾಕಕ್ಸರಾ ಬಾಯಾಗಿಟಗಂಡು ನಾಕ ಸಾಲು ತಲಿಯಾಗಿಟಗಂಡು ನಾಕ ಕಾಸು ಕೈಯಾಗಿಟಗಂಡು ಯಾಕ ಮೆರೀತಿಯಲೇ! ಬಾಯಾಗೇ ಅಂತ್ರಕ್ಕೇಣೀ ಹಾಕಿ ಸಮತಾ ಸೋದರತಾ ಗಾಂಧೀತಾತಾ ಅಂತಾ ಒಳ್ಳೇ ನಾಣ್ಣೆಗಳನ್ನ ಒದರಿ ಒದರಿ ಒಡಕು ಬೋಕೀ ಮಾಡಿ...

ಹಡೆದ ತಾಯಿ ಒಡಲುಂಡ ನೋವೆಷ್ಟೊ? ಈ ಪುಣ್ಯಫಲವನ್ನಿಲ್ಲಿ ಬಿಟ್ಟು ಎಲ್ಲಿ ಹೋದಳೊ? ಚೆಂದದ ಕಂದನ ನೋಡಿ ಅಬ್ಬ ಆಹಾ ಎಂದು ಕೆಲ ಮಂದಿ ಸುತ್ತಮುತ್ತಿ ಅದನ್ನು ಪೋಷಿಸುವ ಪಣತೊಟ್ಟರು ಒಡವೆ ವಸ್ತ್ರಗಳಿಂದಲಂಕರಿಸಿದರು ಕುತ್ತಿಗೆ ಮಟ ಉಸಿರು ಕಟ್ಟುವವರೆಗೆ ತ...

ಯಾವುದಕ್ಕೂ ಬಗ್ಗದ ಕುಗ್ಗದ ಕಲ್ಲಾದರೆ ನೀನು ಮಳೆಗೆ ಬಳಿದು ಹೋಗುವ ಬಿಸಿಲಿಗೆ ಬೂದಿಯಾಗುವ ಮಣ್ಣು ನಾನು ನೀನು ನಿರ್ವಿಕಾರ ಅಚಲ ನಾನು ನೀರಿನೊಡನೆ ವಿಕಾರವಾಗುವ ಕೆಸರು ಹುಡಿಯಾಗಿ ಗಾಳಿಯಲ್ಲಿ ಸಂಚಲ ನೀನು ನೆನೆದುಕೊಂಡು ಗಟ್ಟಿಯಾದೆ ನಾನು ಒತ್ತಡಗಳಿ...

ಕೈಯಾರೆ ಬೆಳೆಸಿಕೊಂಡು ತಿದ್ದಿತೀಡಿ ಗಳಿಸಿಕೊಂಡ ಈ ತೋಟದಲ್ಲಿ ಸಹಜ ಸಮೃದ್ಧಿ ಇಲ್ಲ, ನೈಜ ಸಂಸಿದ್ಧಿ ಇಲ್ಲ, ಬೇರಿಳಿಸಿಕೊಂಡ ಪುಣ್ಯವಿಲ್ಲ, ಪವಿತ್ರವಾದ ಪಾಪವಿಲ್ಲ ಗಾಳಿಗೊಡ್ಡಿ ಬಾಹುಗಳು ಬಯಲ ತಬ್ಬಿ ಸುಖಿಸಲಿಲ್ಲ ಎಲರಿನಲ್ಲೆಲೆಗಳು ಎಲ್ಲೆ ಮೀರಿದ ಮ...

ಲೇ ಮೈತೊಳದ ಬಸವಣ್ಣ ನಿಮ್ಮಪ್ಪ ಶಿವಪ್ಪನ ಕೂಡ ನೀನು ಬೋಳಿಸಿಗೊಂಡ್ಯಾ, ಅವನಂತೂ ಹೇಳೀಕೇಳಿ ಸುಡುಗಾಡಿಗೊಡೆಯ ಅವಂಗೆ ಬೂದಿ ಬಡಿಯ ಮಾತೆತ್ತಿದ್ರೆ ತೋರಸ್ತಾನೆ ಮಸಣಾ, ಉರೀಬೇಡ ನೀ ಆಗ್ತೀ ಹೆಣಾ! ಅಂತಾ ಹೆದರಸ್ತಾನೆ ಉಣ್ಣೋರುಣ್ಲಿ ತಿನ್ನೋರ್ತಿನ್ಲಿ ಅಂ...

ಕಣ್ಣು ಕುಕ್ಕಿಸಿ ಮಣ್ಣಾಗುವ ಬೆಳಕೋ ಬೆಳಕನಾಯೆಂದು ನುಂಗಿ ನೊಣೆವ ಕತ್ತಲೋ ಯಾವುದು ಪ್ರಬಲ ಯಾವುದು ನಿತ್ಯಸತ್ಯ ಎಂಬುದು ನನಗಿನ್ನೂ ಅನುಮಾನ ತೊಳೆಯ ಬಂದ ತೊರೆಗಳೆಲ್ಲ ಸಂದುಗೊಂದುಗಳಲ್ಲಿ ಬತ್ತಿಹೋಗುತ್ತವೆ ನಿಂತ ಕೆಲವು ಕಡೆ ಹಳಸಿ ನಾತವಾಗಿ ಯಾರಿಗೂ...

ದಿನ ತುಂಬುವ ಮೊದಲೇ ತಾಯ ಕುತೂಹಲ ಕೆರಳಿಸಿ ತತ್ತಿಯೊಡೆದು ರಕ್ತಹರಿಸಿ ಮಾಂಸ ಮುದ್ದೆಯುರುಣ ಒಡಮೂಡಿದಂತೆ ಇವನು ಹುಟ್ಟಿದ್ದೇ ಹಸಿಬಿಸಿಯಾಗಿ ಯಾರಿಗೆ ತನ್ನ ಮೊದ್ದು ಮುಖವ ತೋರಿಸುವವಸರವೋ ಕೈಕಾಲು ಪೂರಾ ಅರಳದ ಮೊದಲೇ ಗರ್ಭದೊಳು ಹಳಹಳಿಸಿ ಭೂಮಿಗವತರಿ...

ಆಕಿ ನನ ಕಣ್ಮುಂದೆ ಬಿಳಿಪರೆ ಎಳೀತಾಳೆ ನೀಸೋ ಸೆರಗಿನ್ಯಾಗ ಮುಚಿಗೆಂಡು ಜೋಗಳಾ ಹಾಡತಿ ಆಕಿ ಕಲಕಿ ರಾಡಿಯೆಬ್ಬಸ್ತಾಳೆ ನೀನು ತಿಳಿಗಲಸ್ತೀ ಆಕಿ ಉಬ್ಬಿಸಿ ಒಡಸ್ತಾಳೆ ನೀನು ಕುಗ್ಗಿಸಿ ಕುದುರುಸ್ತಿ ಆಕಿ ಮಕಾಡಾಹಾಕಿ ಬಣ್ಣ ಹಚಿಗೆಂಡು ಬಯಲಾಟ ಆಡಿದ್ರೆ ನ...

ರೆಕ್ಕೆ ಬಲಿಯುವ ಮೊದಲೇ ಕತ್ತರಿಸಿ ಉಗುರು ಕೊಯ್ದು ಕೊಕ್ಕ ಬಂಡೆಗೆ ಕುಕ್ಕಿಸಿ ಮೊಂಡಾಗಿಸಿ ಹೀಗೆ ಬೆಳೆಸಿ ಬಿಟ್ಟರು-ಬೆಳೆಯ ಬಿಟ್ಟರು ಕಣ್ಣು ಕಟ್ಟಿ ಕಾರಡವಿಯಲ್ಲಟ್ಟಿ ಬಿಟ್ಟರು ಹೂಮಾಂಸವನರಳಿಸಿಕೋ ಎಂದು ಹದ್ದುಗಳಿಗಿಟ್ಟರು ಹುಲ್ಲಂತೆ ಬಾಗೆಂದು ಬೆನ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...