
ಎಲೆ ಕರ್ಣಾಟದೀಂದ್ರ ಚೂತವನ ಚೈತ್ರ! ಪ್ರೌಢ ಲಕ್ಷ್ಮೀಶ| ಗಾ | ವಿಲನಾದೆನ್ನ ಬಳಲ್ದ ಬಂಜೆ ನುಡಿಯಂ ನೀನಾಲಿಸೈ ಲಾಲಿಸೈ! | ಲಲಿತ ಸ್ಮಾರಕ ಕಂಭದೊಲ್ ಕೃತಿಯೆ ನಿನ್ನಾ ನಾಮಮಂ ಕೀರ್ತಿಸಲ್, | ಹುಲುಮಾತಿಂ ಪೊಗಳಿರ್ಪ ಮೂಢ ಕವಿಯುಂ ಪಕ್ಕಾಗನೇ ನಿಂದೆಗಂ? ...
(ಕೆಳಗಿನ ಚರಣಗಳ ಆರ್ಥವು ಸ್ಪಷ್ಟವಾಗಿ ತಿಳಿವಂತೆಯೂ ಓದುವುದಕ್ಕೆ ತೊಡಕಾಗದಂತೆಯೂ ಪದಗಳನ್ನು ಸೇರಿಸಿಕೊಂಡು ಬರೆಯಲಿಲ್ಲ. ಸಂಧಿಯನು ಮಾಡದಿದ್ದರೂ ಅಲ್ಲಲ್ಲಿ ತಿದ್ದಲು ಅನುಕೂಲವಿದೆ) “ಎಲೆಲೆ! ಕಬ್ಬುನ! ನೀನು ಮಲಿನ ಹಸ್ತದಿ ತುಡುಕಿ, ಪೊಲೆಗೈ...
ಚತುಷ್ಪದಿ ಸಾಧ್ಯವಿಲ್ಲವು ಪರೀಕ್ಷೆಯೊಳನಗೆ ಜಯವು; | ವಿದ್ಯಾಪರೀಕ್ಷಕರಿಗಿಲ್ಲವೈ ದಯವು|| ಆರು ವರ್ಷಗಳಿಂದ ಪೋಗುವೆನು ನಾನು; | ದೂರ ಗುಡ್ಡಕೆ ಬರಿದೆ ಮಣ್ಣ ತುಂಬಿದೆನು. || ತೋರಲಿಲ್ಲವು ಪರೀಕ್ಷೆಯೊಳು ಜಯವಿನ್ನು | ನೀರೊಳಗೆ ಹೋಮ ಗೈದಂತದುದೇನು?...
(ಗೋವಿನ ಕಥೆಯ ಮಟ್ಟು) ಬೆರಗು ಕಣ್ಣಿನ, ಬೆರಳ ಮೀಸೆಯ, ಬೆರಸಿದಾ ನಗುಮೋರೆಯಾ, | ಅರಸನಿದ್ದನು ಡೊಂಬರಾಟಕೆ ಸೆರೆಯ ಸಿಕ್ಕಿದ ಮನದಲಿ. ||೧|| ದಾಟಿ ಪಡು ಹೊಳೆ, ಜನರ ಸಂದಣಿ ಆಟ ನೋಡಲು ಕೂಡಿತು; | ಕೋಟೆಕೊತ್ತಳ ಮಾಡುಮನೆ ಮರಕೊಂಬೆಗಳ ಮೇಲಿದ್ದರು. ||...
(ಚೌಪದಿ) ಎಲ್ಲಿ ಹೋದನು ಅಮ್ಮ ಪುಟ್ಟಣ್ಣ ನಮ್ಮಾ? | ನಿಲ್ಲದವನನು ತರುವೆ ಹುಡುಕಿ ನಾನಮ್ಮಾ| || ಅಲ್ಲಿಲ್ಲ, ಇಲ್ಲಿಲ್ಲ, ಎಲ್ಲಿಹನು ತಮ್ಮಾ? | ತಲ್ಲಣಿಸುತಿದೆ ಮನವು; ಹೇಳು ಸೀತಮ್ಮಾ! ||೧|| “ಹಸೆಯ ಮಗುವನು ಮೊನ್ನೆ ಬಂದವರು ನೋಡಿ, | ಮಸು...














