ಬೇಡ…
- ಬೇಡ… - January 23, 2021
- ಮಾತನಾಡಿಸಬೇಕು - January 16, 2021
- ಕಾಲು ದಾರಿಯೆ ಸಾಕು… - January 9, 2021
ಭಯ ಹುಟ್ಟಿಸಬೇಡ… ಬೆಂಕಿಯ ಮುಟ್ಟಿ ನೋಡುತ್ತೇನೆ ತಡೆಯಬೇಡ… ಕಡಲೊಳಗೆ ಧುಮುಕಿ ಈಜುತ್ತೇನೆ ನಗಬೇಡ… ಬಿಸಿಲುಗುದುರೆಯನೇರಿ ಹೋಗುತ್ತೇನೆ ಅಣಕಿಸಬೇಡ… ಮರಳೊಳಗೆ ಗೂಡು ಕಟ್ಟುತ್ತೇನೆ ಎಚ್ಚರಿಸಬೇಡ… ಮೊಟ್ಟೆಗೆ ಕಾವಿಟ್ಟು ಮರಿ ಮಾಡುತ್ತೇನೆ ಮುನಿಯಬೇಡ… ಮಾರನಿಗೊಲಿದು ಮೈ ಮರೆಯುತ್ತೇನೆ ಕೀಳಬೇಡ… ಮೈದುಂಬಿ ಅರಳುತ್ತೇನೆ ಕರೆಯಬೇಡ… ಇಲ್ಲಿರಲು ಆಶೆ ಪಡುತ್ತೇನೆ ಬೇಡ… ಬೇಡ… ಬೇಡ…! ಹಿಂಬಾಲಿಸಬೇಡ ಸುಮ್ಮನೆ… *****