
ಬಿಟ್ಟರಾಯ್ತೆ ದಾಡಿ ತಲೇಲಿರೋದು ರಾಡಿ ಕವಿಯಂತೆ ಕವಿ ಬೀದಿ ಸುತ್ತೋ ರೌಡಿ ಎಂಥ ಕವಿ! ಎಂಥ ಕವಿ! ಹಿಂಡಿರವನ ಕಿವಿ! ಪದ್ಯವಂತೆ ಪದ್ಯ ಬರಿಯೋದು ಬರೀ ಗದ್ಯ ಮತ್ತಿನ್ನೇನು ಮಾಡ್ತಾನಪೋ ತಲೆಗೇರಿದರೆ ಮದ್ಯ ಎಂಥ ಪದ್ಯ! ಎಂಥ ಪದ್ಯ! ನಾಚಿಕೆನಾದ್ರೂ ಇದ್ಯ...
ಎಂಥ ಹೆಣ್ಣು ಎಂಥ ಹೆಣ್ಣು ಕೆನೆ ಹಾಲಿನ ಗಿಣ್ಣು ಕವಿಗಳು ಹೇಳಿದ ದುಂಬಿಯಂತೆ ದೊಡ್ಡ ದೊಡ್ಡ ಕಣ್ಣು ಎಂಥ ರಸಿಕ ಎಂಥ ರಸಿಕ ಎಲಾ ಎಲಾ ನಾಯಕ! ತಿದ್ದಿ ತೀಡಿದ ಹುಬ್ಬು ಯಾರ ತೋಟದ ಕಬ್ಬು ನೋಡಿದರೆ ಸಾಕು ನನ್ನ ಮನಸಿನೊಳಗೆ ಮಬ್ಬು ಎಂಥ ರಸಿಕ ಎಂಥ ರಸಿಕ ...
ಎಲ್ಲರಿಗೂ ನಮಸ್ಕಾರ ಜನರ ಪೂರ್ತಿ ಸಹಕಾರ ಇದ್ದರೇನೆ ಆಗೋದಪೋ ಈ ದೇಶದ ಉದ್ಧಾರ ಎಂಥ ಸರಕಾರ! ಎಂಥ ಸರಕಾರ! ಬಂಗಾರದಂಥ ಸರಕಾರ! ಪ್ರತಿ ಊರಿಗೂ ಸರೋವರ ಬೆಳೆದ ಹೆಣ್ಣಿಗೆ ವರ ತಲಿ ಮೇಲೆ ಸೂರು ವಸೀ ಹೊದಿಯೋದಕ್ಕೆ ಛದ್ದರ ಎಂಥ ಸರಕಾರ! ಎಂಥ ಸರಕಾರ! ಬಂಗಾ...
ಊರಲ್ಲೆಲ್ಲ ಹಾಹಾಕಾರ ಜನರ ಸ್ಥಿತಿ ಭೀಕರ ಹಾಗಿದ್ರೂನೂ ಹಾಕ್ತಾರಪೋ ಕುಂತರೆ ನಿಂತರೆ ಕರ ಎಂಥ ಸರಕಾರ! ಎಂಥ ಸರಕಾರ! ಇಂಥ ಸರಕಾರಕ್ಕೆ ಧಿಕ್ಕಾರ! ಬಿಸಿಲಿಗೆ ನಿಂತಿದೆ ಗಿಡ ಮರ ಕುಡಿಯೋ ನೀರಿಗು ಬರ ಅನ್ನ ಕೇಳಿದರೆ ತಗೋ ಅಂತಾರೆ ಕಂಪೋಸ್ಟ್ ಗೊಬ್ಬರ ಎಂ...
ಸೊಗಸುಗಾರ ಸರದಾರ ಹಗಲುಗನಸುಗಾರ ಎಲ್ಲರಂತಲ್ಲ ಅವನು ಭಾರಿ ಮೋಜುಗಾರ ಗಾಳಿಕುದುರಿ ಏರುತಾನೆ ಏಳು ಕಡಲು ಮೀರುತಾನೆ ಇವನ ಕನಸಿಗೆಷ್ಟೊ ದಾರ ಸಾಗಿದಷ್ಟೂ ದೂರ ಗಾಳಿಗಿರಣಿ ಮಂತ್ರಭರಣಿ ತಲೆಗೆ ಕವಚಿ ಬೋಗುಣಿ ಸೆಣಸಿದರೂ ಎಲ್ಲರೊಡನೆ ಗೆಲುವನೀತನೊಬ್ಬನೆ ಬ...
ಎಂದಿನಂತಲ್ಲ ಈ ದಿನ ನನ್ನ ಪ್ರೀತಿಯ ಮೊದಲ ದಿನ ಹೋಗು ಮನಸೆ ಆಕಾಶಕೆ ಸಾಗು ನೀ ಬಹುದೂರಕೆ ಯಾರ ಹಿಡಿತಕು ಸಿಲುಕದಲ್ಲಿ ನನ್ನೊಲವಿನ ಸಂಗದಲ್ಲಿ ಬೀಸು ಗಾಳಿಯೆ ಕಾಡುಗಳ ಅಪರೂಪದ ನಾಡುಗಳ ಏರು ಬೆಟ್ಟವೆ ಕೋಡುಗಳ ಬಿಳಿ ಮಂಜಿನ ಬೀಡುಗಳ ಮೀರು ಸಾಗರವೆ ತೀರ...
ಬೇಲಿಯೆದ್ದು ಹೊಲವ ಮೆದ್ದು ಹೋಯಿತಂತೆ ಕಂಡಿರ? ಗೂಳಿಯೆತ್ತು ಥರವೆ ಇತ್ತು ಮೆಲ್ಲುತಿತ್ತು ನೋಡಿದೆ ರಾತ್ರಿಯೆಲ್ಲ ತಿಂದಿತಲ್ಲ ಸದ್ದು ನಿಮಗೆ ಕೇಳಿತೆ? ಹೊಡೆದು ಡುರುಕಿ ಮಣ್ಣು ಕೆದಕಿ ಕೂಗುತ್ತಿತ್ತು ಕೇಳಿದೆ ಬತ್ತ ಹುರುಳಿ ಕಬ್ಬು ಕದಳಿ ಎಲ್ಲ ತಿಂ...
ಭಾಗ-೧ ಒಮ್ಮೆ ಒಂದು ಮರಿಪಿಶಾಚಿ ಊರ ಸುತ್ತಲದಕೆ ತೋಚಿ ಪೊಟರೆಯಿಂದ ಇಳಿಯಿತು ಧೈರ್ಯದಿಂದ ನಡೆಯಿತು ನಡೆದು ನಡೆದು ಬರಲು ಕೊನೆ ಬಿತ್ತು ಕಣ್ಣಿಗೊಂದು ಮನೆ ಬಾಗಿಲಿಗೆ ಬೀಗವಿತ್ತು ಕಿಟಕಿ ಮಾತ್ರ ತೆರದೆ ಇತ್ತು ಅರೆ! ಎಂದು ಮರಿಪಿಶಾಚಿ ಇಣುಕಿತಲ್ಲಿ ಕ...














