ಪೊಸಗಾರ

ಮೋಡನ ಮನೆಯೊಳಗೆ ಸರಿಗಮ ಸ್ವರ ಏರಿಳಿತ ಕಪ್ಪು ಬಿಳಿ ಚಿತ್ತಾರ ಆಗಾಗ ನೇಸರನ ಕಣ್ಣು ಮುಚ್ಚಾಲೆ ಕೆಂಬಣ್ಣ ರಾಚಿದ ಚಿತ್ರದಲಿ ಭೂಮಿ ವಧು ಸುಳಿಗಾಳಿ ಬೀಸುತಿದೆ ಬಿಸಿಲ ಕಾವಿಗೆ ಹುಡಿ ನೆಲ ಗರ್ಭದಿ ಏರಿ...

ಮೊದಮೊದಲು

ಮೊದಮೊದಲು ನನ್ನಕ್ಕನ ಕೂಡ ನಾ ಪಾಟಿ ಚೀಲವ ಹೊತ್ತು ಶಾಲೆ ಮೆಟ್ಟಿಲು ಹತ್ತಿದ ಕ್ಷಣ ಮಣಿ ಪಾಟಿಯಲ್ಲಿ ಒಂದೆರಡು ಕಾಗುಣಿತ ಕಲಿತ ದಿನ ಮೊದಮೊದಲು ನನ್ನಪ್ಪನ ಕೈಯಲ್ಲಿ ಕೈಯಿಕ್ಕಿ ನಡೆದು ದೊಡ್ಡ ದೇವನ ಜಾತ್ರೆ...

ಮಕ್ಕಳೆಂದರೆ

ಮಕ್ಕಳೆಂದರೆ ಮಾತೆಯೊಡಲಿಗೆ ತಂಪು ನೀಡಿ ಸೆರಗಂಚಿನಲಿ ಜಗದ ವಿಸ್ಮಯಕೆ ಭಾಷ್ಯ ಬರೆದವರು ಸರಳತೆ ಮುಗ್ಧತೆ ನಿಷ್ಕಪಟತೆಗೆ ಸಾಟಿಯಾದವರು ಹೂ ನಗೆಯ ಮಿಂಚು ಹರಿಸಿ ವ್ಯಥೆಯ ಬದುಕಿಗೆ ಬೆಳಕಾಗುವವರು ಮಕ್ಕಳೆಂದರೆ ತುಂಟಾಟ ಮೊಂಡಾಟಕ್ಕೆ ಏಣೆಯಾದವರು ಮೈಮನಕ್ಕೆ...

ಹೊಣೆ

ಈಗೀಗ ಅವಳು ನಾಚಿಕೊಳ್ಳುವುದಿಲ್ಲ ಮೊದಲಿನಂತೆ ನೀರಾಗುವುದಂತೂ ದೂರದ ಮಾತೇ ಸರಿ ಮೂಗುತಿಯ ನತ್ತು ಅವಳೀಗೀಗ ಭಾರವೆನಿಸುತ್ತಿಲ್ಲ ಮುಂಗುರುಳು ನಲಿದು ಮುತ್ತಿಕ್ಕುವುದಿಲ್ಲ ಗಲ್ಲಗಳ ಚುಂಬಿಸಿ ಅವಳ ನುಡಿಯಲ್ಲಿ ಅಂದಿನ ಹುಡುಗಾಟವಿಲ್ಲ ಕಣ್ಣುಗಳಲ್ಲಿ ಆಗೀನ ಚಂಚಲತೆಯಿಲ್ಲ ನೆಟ್ಟ...

ನನ್ನ ತಂದೆ

ಎಲ್ಲರಂತಿರಲಿಲ್ಲ ನನ್ನ ತಂದೆ ಹೆಣ್ಣ ಕರುಳ ಗಂಡು ಜೀವ ಮಕ್ಕಳೆಂದರೆ ಅವಗೆ ಮರಳು ಮಾಯೆ ಗುರಿಯ ತತ್ವದ ತಿಳಿಸಿ ದಿಟ್ಟತನವನು ಕಲಿಸಿ ಬದುಕು ಚಾತುರ್ಯ ಬೆರೆಸಿ ಬೆಳಸಿದನು ಪುಟ್ಟ ಕೈಗಳ ಹಿಡಿದು ಭರವಸೆಯ ಒತ್ತಿದನು...

ಲೆಕ್ಕ ಹಾಕಿಲ್ಲ ಎಷ್ಟು?

ಲೆಕ್ಕ ಹಾಕಿಲ್ಲ ಎಷ್ಟು? ಲೆಕ್ಕಕ್ಕೆ ಸಿಗದವುಗಳೆಷ್ಟೋ? ಹೆತ್ತ ಕಂದಮ್ಮಗಳನ್ನೆ ಹೆಣ್ಣೆಂದು ಜರೆದು ಹೆರಳು ಹಿಡಿದು ಕುಟುಕಿದ ಹೆಂಬೇಡಿಗಳೆಷ್ಟು? ಮುಗ್ಧ ಪ್ರೇಮದ ಗೀತೆಗೆ ಮದಿರೆ ಹಾಡನು ಕೂಡಿಸಿ ಮಂಚಕ್ಕೆ ಎಳೆದು ಮಾನ ಪ್ರಾಣ ಮರ್ಧಿಸಿದ ನಯವಂಚಕರೆಷ್ಟು?...

ಏಣಿ

ಮೇಲೇರಬೇಕು ಮುಟ್ಟಬೇಕಿದೆ ಗುರಿಯ ಮತ್ತೆ ನಿಲುಕಂತಿದೆ ಎತ್ತರದಿ ಏರಲೇಬೇಕು ಏಣಿ ಏಣಿಗೆ ಹತ್ತಿರಕೆ ಬಂದವರ ಎತ್ತರಕೆ ಏರಿಸುವುದೆಂದರೆ ಏನೋ ಉಮೇದು ಧೂಳಿನ ರಾಡಿ ಗಲೀಜುಗಳ ಸಹಿಸಿಕೊಳ್ಳುತ್ತದೆ ಕ್ರೋಧಗೊಳ್ಳದೆ ಮುಗ್ಧತೆಯ ಕಣ್ಣುಗಳ ಅರ್ಥೈಸಿಕೊಂಡು ಗದರದೇ ಮಜಲುಗಳ...

ಬಾಲ ಗೋಪಾಲ

ಹಾಲು ಗಲ್ಲದ ಮೇಲೆ ಗುಳಿ ಬಿದ್ದ ಚೆಂದ ನೋಡುಗನೆ ಕಣ್ಮನವ ತೆರೆದು ಸವಿ ಆನಂದ ಮುಗ್ಧ ನಗೆಯಲಿ ಗೋಪಿಗೆ ಕಚಗುಳಿಯ ಇಟ್ಟವನು ಎಳಸು ತೋಳಲಿ ಮೈಯ ಬಳಸಿ ಬಂದವನು ನೂಪುರದ ಇಂಪಿನಲಿ ಹೆಜ್ಜೆನಾದದ ಪೆಂಪಿನಲಿ...

ಹದ

ಪರರ ಜಾಡನು ಹಿಡಿದು ಪರದಾಡಬೇಡ ಪ್ರೌಢಿಮೆಯ ಪರಿಪೂರ್ಣತೆಯಲ್ಲಿ ಪರವಶನಾಗು ಮನವೇ ಅಪಸ್ವರವು ನುಡಿಯೆಂದು ಅವಮಾನ ಬೇಡ ಅವಿರತದ ಸಾಧನೆಗೆ ಅವಸರಿಸು ಮನವೇ ದುಡ್ಡನ್ನು ಗಳಿಸುವಲಿ ದೌರ್ಜನ್ಯ ಬೇಡ ದರ್ಪವನ್ನು ತ್ಯಜಿಸಿ ದಯಾಮಯಿಯಾಗು ಮನವೇ ತಮವೆಂದು...

ಸೀಮಾತೀತ ಹೆಜ್ಜೆಗಳು

ಪರದೆಯೊಳು ಪರಿಪಕ್ವ ವಾಗುವುದು ಕಷ್ಟವೆಂದು ಪರಿಧಿಯಾಚೆ ಜಿಗಿಯಲೆಣಿಸುತ್ತಿದೆ ಭಾವ ಪ್ರಪಂಚ ಸ್ತ್ರೀ ಲಾಂಚನಗಳು ಬಣ್ಣ ಕಳೆದುಕೊಳ್ಳುತ್ತಿವೆ ತಾಳಿ ಕಾಲುಂಗುರ ಪರ್ಮಿಟ್ಟುಗಳು ಪೆಟ್ಟಿಗೆ ಸೇರುವ ಕಾಲ ಸನ್ನಿಹಿತವಾಗುತ್ತಿದೆ ಸೀಮಾತೀತ ಪರಿಕಲ್ಪನೆಯ ವ್ಯಾಪ್ತಿ ಹೆಚ್ಚಿದಂತೆಲ್ಲ ಗೋಡೆಯೊಳಗಿನ ಸಣ್ಣ...