Home / Tirumalesh KV

Browsing Tag: Tirumalesh KV

ರಾತ್ರಿ ಕಂಡ ಕನಸುಗಳ ಚಿತ್ರಿಸುವುದಕ್ಕೆ ಕುಂಚಗಳೇ ಇಲ್ಲ ಕುಂಚಗಳ ತಂದು ಬಣ್ಣಗಳ ಕಲಸಿ ಕ್ಯಾನ್ವಾಸಿನ ಮುಂದೆ ಕುಳಿತಾಗ ಕನಸುಗಳಿರೋದಿಲ್ಲ ನೆನಪಿನಲ್ಲಿ ಅವು ಎಲ್ಲಿರುತ್ತವೋ? ಬಹುಶಃ ಕಿಟಿಕಿಗಳ ಹಿಂದೆ ಛಾವಣಿಗಳ ಸಂದಿಗಳಲ್ಲಿ ದಾರಂದದಲ್ಲಿ ಅತ್ತಾರದ ...

ಗರ್ಜಿಸು ಹೂಂಕರಿಸು ಘೀಳಿಡು ಕೇಕೆ ಹಾಕು ಗಹಗಹಿಸು ಹೇಷಾರವ ಮಾಡು ಕಿರುಚಾಡು ಕೆನೆ ಬೇಬೇ ಎನ್ನು ಏನು ಬೇಕಾದರೂ ಮಾಡು ಆದರೂ ಕೆಲವು ಸಲ ಮನುಷ್ಯ ಧ್ವನಿಯಲ್ಲಿ ಮಾತಾಡು ಇಲ್ಲದಿದ್ದರೆ ಮರೆತುಬಿಡುತ್ತೀ ಪೂರ್ತಿ ರಸ್ಪುಟಿನ್‌ನ ವಿಷ ಅವನ ಹಲ್ಲುಗಳಲ್ಲಿತ...

ಕೊನೆ ಕೊನೆಯ ಕವಿತೆಗಳು ಕೊನೆ ಕೊನೆಯ ಕನಸುಗಳು ಬೆಳಕು ಕಾಯುವುದೆ ಕತ್ತಲು ಅಟ್ಟದ ಮೇಲೆ ಅಥವಾ ಕೆಳಗೆ ಇದೀಗ ಇದ್ದವು ಈಗೆಲ್ಲಿ ಹೋದವು ಕಿಟಿಕಿ ಮೂಲಕ ಅಥವ ಯಾರು ತೆರೆದರು ಬಾಗಿಲ ಚಿಲಕ ಇಷ್ಟು ಬೇಗ ಮೈಕೈಗೆ ಮಸಿ ಹಿಡಿದವರ ಕೈಗೂ ವಸಿ ಹಿಡಿದವರ ಮನಸಿಗ...

(ಕುವೆಂಪುರವರ ನೆನಪಿನಲ್ಲಿ) ಜಯ ಕನ್ನಡ ಭಾಗ್ಯವಿಧಾತೆ ಜಯ ಹೇ ಕರ್ನಾಟಕ ಮಾತೆ ಜಯ ಕವಿರತ್ನತ್ರಯ ಕಾವ್ಯವಿಖ್ಯಾತೆ ಜಯ ಜನ್ನನ ಪರಿಶುದ್ಧ ಯಶೋ ಚರಿತೆ ಜಯ ಅಲ್ಲಮ ಬಸವ ವಚನ ಮಣಿಖಚಿತ ಜಯ ಮಹಾದೇವಿಯಕ್ಕ ಹೊನ್ನಮ್ಮ ಸಂಪ್ರೀತೆ ಜಯ ಕುಮಾರವ್ಯಾಸ ಭಾಮಿನಿ ...

ಉಧೋ ಮನಸೆ ಉಧೋ ಉಧೋ ಉಧೋ ಮನಸೇ ಬ್ರಹ್ಮಾಂಡದ ಕನಸೇ ವಿಶ್ವಾತ್ಮನ ನೆನಸೇ ಜನ್ಮಾಂತರ ಜೀವವೇ ಅಂತರತಮ ಭಾವವೇ ಓ ಮನಸೇ ಉಧೋ ಉಧೋ ಮನಸೇ ಸಿದ್ಧವಾಗಿರು ನೀನೆಲ್ಲ ಸಾಧ್ಯತೆಗು ಬದ್ಧವಾಗಿರು ನೀನೆಲ್ಲ ಬಾಧ್ಯತೆಗು ಸದಾ ಜಾಗೃತವಾಗಿರು ಮನಸೇ ಸದಾ ಕರ್‍ತೃವಾಗ...

ತೋಟಕ ಬಾರೆ ಬೆಳದಿಂಗಳ ಬಾಲೆ ತೋಟಕೆ ಬಾ ಊಟಕೆ ಬಾ ಕಾದಿರುವೆನು ನಾ ಬೆಳದಿಂಗಳ ಬಾಲೆ ಎಂತು ಅರಳಿವೆ ನೋಡು ಇರುಳ ಹೂವುಗಳು ಗಿಡಗಳ ಮೇಲೆ ನಿಂತು ಕಾದಿವೆ ಅವು ನಿನಗಾಗಿ ಸಂಜೆ ಮಲ್ಲಿಗೆ ರಾತ್ರಿ ಮಲ್ಲಿಗೆ ಇರುಳ ರಾಣಿಯರ ಕಂಪು ಹಗುರವಾಗಿ ಇಬ್ಬನಿಯ ತಂಪ...

ಈ ಸುಮ್ಮನೆ ಕುಳಿತವನೆ ಈ ಬಿಮ್ಮನೆ ಕುಳಿತವನೆ ನನ್ನವನೆ ಕಾಡಿದವನೆ ಬೇಡಿದವನೆ ಆಡಿದವನೆ ಕೂಡಿದವನೆ ನನ್ನವನೆ ಏನಿದ್ದರು ಎಲ್ಲಿದ್ದರು ಇವ ನನ್ನವನೆ ಓ ಶಿವನೆ ಎಂತಾದರು ಏನಾದರು ಇವ ಹೀಗೇ ಇರಲಿ ಇವ ನನ್ನವನೆ ಸಾಗರದಂತೊಮ್ಮೆ ಭೋರ್‍ಗರೆವನು ನೆರೆಯಿಳಿ...

ಎದ್ದರು ನಗುವೆ ನೀ ಬಿದ್ದರು ನಗುವೆ ನೀ ಹೇಗಿದ್ದರು ನಗುವೆ ನೀನು ಇದ್ದರು ನಗುವೆ ನೀ ಇರದಿದ್ದರು ನಗುವೆ ನೀ ಓ ಚಿನ್ನದ ಹೂವೆ ನಗುವೆ ನೀನು ಎಚ್ಚರವಿದ್ದರು ನಿದ್ದೆಯಲಿದ್ದರು ಹೇಗಿದ್ದರು ನಗುವೆ ನೀನು ಮಾತಾಡುತಿದ್ದರು ಮೌನವಾಗಿದ್ದರು ಓ ಚಿನ್ನದ ಹ...

ಅಕ್ಕರೆಯೊಳೊ ಮರುಕದೊಳೊ ನೆನೆದರೆ ಸಾಕು ನೀ ನನ್ನ ಎಂದಾದರು ಒಮ್ಮೆ ನಿದ್ದೆಯೊಳೊ ಅರೆನಿದ್ದೆಯೊಳೊ ಕನವರಿಸಿದರೆ ಸಾಕು ನೀ ನನ್ನ ಎಂದಾದರು ಒಮ್ಮೆ ಮುಂಜಾವದ ಆಗಸದಲಿ ಬೆಳ್ಳಿಯ ನೋಡಿದರೆ ಸಾಕು ಒಮ್ಮೆ ಸಂಜೆಯ ಆಗಸದಲಿ ಅದೇ ಕಂಡರೆ ಸಾಕು ಒಮ್ಮೆ ಎಂದಾದರ...

ರಕ್ಕಸರಿನ್ನೂ ಮುಗಿದಿಲ್ಲ ರಕ್ಕಸರಿನ್ನೂ ಬರುತಿದ್ದಾರೆ ಬರಲೇಬೇಕು ರಕ್ಕಸರಿನ್ನೂ ಬರದಿದ್ದರೆ ಮುಂದುವರಿಯುವುದು ಹೇಗೆ ? ರಕ್ಕಸರಿರ್‍ತಾರೆ ಖಳನಾಯಕರಿರ್‍ತಾರೆ ಚೌಕಿಯಲ್ಲಿ ವೇಷ ತೊಟ್ಟುಕೊಂಡು ಮಲಗಿರ್‍ತಾರೆ ಇಲ್ಲವೆ ಚಕ್ಕಂದ ಆಡಿಹಾಡಿರ್‍ತಾರೆ ಹಾಡ...

1234...63

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....