ಎದ್ದರು ನಗುವೆ ನೀ ಬಿದ್ದರು ನಗುವೆ ನೀ
ಹೇಗಿದ್ದರು ನಗುವೆ ನೀನು
ಇದ್ದರು ನಗುವೆ ನೀ ಇರದಿದ್ದರು ನಗುವೆ ನೀ
ಓ ಚಿನ್ನದ ಹೂವೆ ನಗುವೆ ನೀನು
ಎಚ್ಚರವಿದ್ದರು ನಿದ್ದೆಯಲಿದ್ದರು
ಹೇಗಿದ್ದರು ನಗುವೆ ನೀನು
ಮಾತಾಡುತಿದ್ದರು ಮೌನವಾಗಿದ್ದರು
ಓ ಚಿನ್ನದ ಹೂವೆ ನಗುವೆ ನೀನು
ನಗುತಿರು ನೀ ನಾ ನೋಡುತ ಇರುವೆ
ನಗುತಿರು ನೀ ನಾ ಹಾಡುತ ಇರುವೆ
ನಗುತಿರು ನೀ ನಾ ನಡೆಸುತ ಇರುವೆ
ಸಾಗುತಿರಲಿ ನಮ್ಮ ಬಾಳಿನ ನೌಕೆ
ಬೀಸುತಿರುವುದು ಗಾಳಿ ಏಳುತಿವೆ ತೆರೆಗಳು
ಸಾಗುತಿರುವೆವು ನಾವೆಲ್ಲಿಗೋ
ಆಡಿದರು ಅಲ್ಲಾಡಿದರು ಬಸವಳಿದರು ತಲ್ಲಣಿಸಿದರು
ಹೇಗಿದ್ದರು ನಗುವೆ ನೀನು
ನಗುತಿರು ನೀ ಎಂತಿದ್ದರು ಹೇಗಿದ್ದರು
ನಿನ್ನ ನಗೆಯೇ ಈ ಸಂಸಾರ ಸಾರ ಸರ್‍ವಸ್ವ ಫಲ
ಪಾರ ತಲುಪಿದರು ತಲುಪದಿದ್ದರು
ನಿನ್ನ ನಗೆಯೇ ನನಗಚ್ಛೋದ ಸರೋವರ
*****


















