ಡಿಂಭದೊಳು ಕಾಂಬುದೆಂದಸಮಗ್ರವಲ್ಲವಿದು
ಕುಂಭದೊಳಗಡಗಿದ್ದರೂ ಅಲ್ಪವಲ್ಲ
ತೀರ್ಥ ಪ್ರಸಾದಗಳ ಜೀವಾನುಕರಣದೊಳು
ಅದರಮರಭಾವಕ್ಕೆ ಮಾಲಿನ್ಯವಿಲ್ಲ;
ಕರಣಗಮಸೌಲಭ್ಯವೀ ಮಹಾಭಾವಕೆನೆ
ಎಲ್ಲ ಜೀವಕು ಇದುವೆ ತವರಾದುದೆನ್ನೆ
ವಿವಿಧಾಕೃತಿಯ ಮೆರೆವ ವಿವಿಧವಿಧಿಗಳೊಳೆಸೆವ
ಡಿಂಭ ಕುಂಭಗಳಂತೆ ಪೂಜೆಗಳ ಸನ್ನೆ.
ಪೂರ್ಣದಿಂ ಪೂರ್ಣವನೆ ತೆಗೆದರೂ ಪೂರ್ಣವೇ ಉಳಿವುದೆಂದು
ಪೂರ್ಣಾನುಭೂತಿಯನು ಪಡೆದು ಪೊರೆಯೇರಿದರು ಶಿಷ್ಟ ಸಂತತಿ ಡಿಂಭದಿದಿರು ನಿಂದು.
*****