ನೆನಪಿಡುವಳೆ?

ಅವನನ್ನು ಪ್ರೀತಿಸಿದ ಹುಡುಗಿ ಒಮ್ಮೆ ಅವನೊಳಗೆ ಮತ್ತೊಮ್ಮೆ ಅವನನ್ನು ತನ್ನೊಳಗೆ ಹುದಿಗಿಸಿಕೊಂಡು ಮುತ್ತಿನ ಮಳೆ ಸುರಿಮಳೆ ಅಮೆರಿಕದ ಬಿಳಿಗೊಂಬೆಗೆ ನವಾಬ್, ಗಲ್ಲ ತುಟಿ ಒತ್ತಿ ಮುತ್ತಿ ಮೇಲಕ್ಕೆತ್ತಿ ಸತ್ಯದ ಕತೆ ಬಿಚ್ಚುವಿಕೆಯ ಹೊಯ್ದಾಟ ಏನೂ...

ಎಂಥೆಂಥಾ ಚಿತ್ರಗಳು ಈ ಮೋಡಗಳಲ್ಲಿ….

ಯುರೋಮ್ಯೂಸಿಯಂದ ಬೆತ್ತಲೆ ಚಿತ್ರಗಳ ಉಬ್ಬರಿಳಿತ ಮಾರ್ಬಲ್ಲಿನ ಕೆತ್ತನೆಯ ನರನಾಡಿಗಳು ಮಾರ್ಕೆಟ್ಟಿನ ತುಂಡು ಬಟ್ಟೆಯ ಹುಡುಗಿಯರು ಚೌಕ ಸುತ್ತ ಬಳಿಸಿ ಮುದ್ದಿಸುವ ಪ್ರೇಮಿಗಳು ಪರಿವೆ ಇಲ್ಲದೆ ಬಿದ್ದಿರುವ ಹಾದಿಬದಿಯ ಕಾಮಿಗಳು ಎಂಥೆಂಥಾ ಚಿತ್ರಗಳಿವು... ಬೆಳ್ಳಿ ಚೌಕಟ್ಟಿನೊಳಗೆ...

ಪಂಚ ಕನ್ಯೆಯರು

ಬ್ರಿಟೀಷ್ ಏರ್‌ವೇಸ್ ಪಯಣ ಒಳಗಡೆ ಬಿಳಿಯ ಐದೂ ಹುಡುಗಿಯರ ಕಲವರ; ಇವರು ಪಂಚಕನ್ಯೆಯರೆ..... ಹಾಗೆಂದೇ ಕರೆಯುತ್ತಿದ್ದಾರೆ ಸಹ ಭಾರತೀಯ ಪಯಣಿಗರು. ಜೊತೆಗೆ ಹಸಿರು ಕಣ್ಣಿನ ಕೆಂಪು ತುಟಿಯ ಈಗಷ್ಟೇ ಅರಳಿದಂತಿರುವ ಗುಲಾಬಿ ಸಖಿಯರು. ತೂಗುಬಿಟ್ಟ...

ತೂಗುತಿದೆ ಉಯ್ಯಾಲೆ

ಸಾವಿರ-ಎರಡು ಸಾವಿರ-ಮೂರು ಸಾವಿರ ಆಕಾಶ ಮೆಟ್ಟಿಲುಗಳು ಇನ್ನೂ ಇನ್ನೂ ಎತ್ತರೆತ್ತರಕೇರುತಿದೆ ನನ್ನ ತೂಗುಯ್ಯಾಲೆ ನೋಡು ನೋಡುತ್ತಿದ್ದಂತೆಯೇ ಐದು ಸಾವಿರ ಅಡಿಗಳಿಗೂ ಮೇಲೆ ತೂಗುತಿದೆ ಉಯ್ಯಾಲೆ ಗಂಧರ್ವ ಲೋಕದಲಿ ಒಮ್ಮೊಮ್ಮೆ ಗಾಳಿ ಹೆಚ್ಚು ಕುಡಿದು ಮತ್ತೊಮ್ಮೆ...

ನಿಶ್ಶಬ್ಧ ಮೌನ

ರಾತ್ರಿಯ ಆರೆಂಟು ತಾಸಿನ ವಿಮಾನ ಪ್ರಯಾಣ ಕಿಟಕಿಯಾಚೆ ನೋಡಲೇನಿದ್ದಿತು! ಯಾವಾಗಲೋ ಅಲ್ಲೊಂದು ಇಲ್ಲೊಂದು ಕಾಣುವ ಸಮುದ್ರದ ಹಡಗಿನ ದೀಪಗಳು, ಮರುಭೂಮಿಯಲಿ ಹೊತ್ತಿ ಉರಿಯುವ ಕಚ್ಚಾತೈಲ ಬೆಳಕು ದೊಡ್ಡ ನಗರಗಳಾಗಿದ್ದರೆ ಒಂದಷ್ಟು ರಸ್ತೆ ದೀಪಗಳೋ ಏನೋ!...

ದಾಖಲೆ

ಪ್ರೇಮಿಗಳು ಎಲ್ಲೆಂದರಲ್ಲಿ ತಮ್ಮ ಹೆಸರಿನ ಹಚ್ಚೆ ಕೊರೆದು ದಾಖಲಿಸಿಕೊಳ್ಳುವುದ ನೆನಪಿಸುತ ನಾನೂ..... ಮರುಭೂಮಿಯಲಿ ಹೆಜ್ಜೆ ಮೂಡಿಸಲು ಹಿಮದಲಿ ಅಕ್ಷರ ಕೆತ್ತಲು ಸಮುದ್ರದಲಿ ಪ್ರೇಮ ದೋಣಿ ಬಿಡಲು ಆಕಾಶದಲಿ ಕಾಮನಬಿಲ್ಲು ಮೂಡಿಸಲು ಹೋದೆ..... ಅವು ನಕ್ಕವು...

ಬೂಮ್‌ರಾಂಗ್

ಅವ್ವನ ಸೀರೆ ಮಡಚಲಾರೆ ಅಪ್ಪನ ರೊಕ್ಕ ಎಣಿಸಲಾರೆ ಏನದು? ನೀ ಹೇಳು..... ನೀ ಹೇಳು ಸೀಟಿಗಂಟಿಸಿ ಕೂರಿಸಿದ್ದ ಗಲಾಟೆ ಮಕ್ಕಳು ಮುಖ ಕಿವುಚಿ ಪ್ರಶ್ನೆ ಮರೆಸಲು ಕಪ್ಪು ಆಕಾಶದಲ್ಲಿ ಎಷ್ಟೊಂದು ಹೊಳೆಯುವ ತಾರೆಗಳು ನೋಡಮ್ಮ...

ಧನ್ಯತೆಯ ಕನಸಿಗೆ

ಋಷಿ ಮುನಿಗಳ ಪುಣ್ಯಧಾಮಗಳಲಿ ಸುತ್ತಿ ಗಂಗಾ ಯಮುನಾ ಸರಸ್ವತಿಯರ ಪಾವಣಿಗಳಲಿ ಮುಳುಗಿ ಗಳಿಸಿದ ಲಾಭಗಳೇನೇನು ಗೆಳತಿ "ಭಾರತಿ"? ಹೊರಟಿಹೆ ಗಬ್ಬೆದ್ದ ದೇಹ ಮನಸು ಶುಚಿಗೊಳಿಸಲು ನಿಮ್ಮ ಗಿರಿ ಧಾಮಗಳಿಗೆ- ಬಿಳಿಯಳ ಪ್ರಶ್ನೆಗೆ ತಬ್ಬಿಬ್ಬು. ಪಾಪ...

ಪ್ರಶ್ನೆ

ಮಧ್ಯರಾತ್ರಿ ಸರಿದುಹೋದ ಸಮಯ ನಗರ ನಿದ್ರಿಸಿರಲೇಬೇಕೆಂದು ಕಿಡಕಿಯಿಂದಲೇ ಹಣಿಕಿಕ್ಕಿ ನೋಡಿದೆ ಝಗಮಗಿಸಿ ಹರಿದೋಡುವ ಲೈಟುಗಳು ನಡುರಾತ್ರಿಯ ಏನೇನೊ ಕಾರುಬಾರುಗಳು ಅದೇಕೆ ಮಲಗೀತು ಹಾಲೆಂಡ್ ಗಹಗಹಿಸಿ ನಕ್ಕಿತು ನಿದ್ದೆಗೇಡಿ ನಗರಗಳಲ್ಲಿದೂ ಒಂದು ಕಣ್ಮುಚ್ಚಿ ಮತ್ತೆಮತ್ತೆ ನೋಡಿದೆ...

ಬೇಕಾಗಿತ್ತೆ ಈ ದೂರದ ಹಾದಿ

ಬೆಲ್ಟ್ ಕಟ್ಟಿಕೊಂಡೇ ಗಡದ್ದಾಗಿ ಕುಳಿತದ್ದು ಹೀಗೇ ಮಂಪರಕ್ಕೆ ಸ್ವಲ್ಪ ಒರಗಿರಬೇಕಷ್ಟೆ ಎಲ್ಲೋ ಬುಲ್‌ಡೋಜರ್‌ದ ಸದ್ದು ಜಾಲಾಡಿಸಿದ ಅನುಭವ ಬಿಟ್ಟೂಬಿಡದೆ ಏನೇನೋ ಪೈಲಟ್‌ನ ಮಾತುಗಳು ಗಗನಸಖಿಯ ಒಂದೇ ಸಮನದ ಉಲಿತ "ನಿಮ್ಮ ಖುರ್ಚಿಯ ಪಟ್ಟಿ ಕಟ್ಟಿಕೊಳ್ಳಿ"...