ಹಣತೆ ಆರುವುದು ಬೇಡ

ಮುಚ್ಚಿದ ಕದವು ಕೇಳಿತು ಕಾತುರದಿ ಎಂದು ಬರುವೆಯೆಂದು ಒಳಗಿದ್ದ ಮನವು ಬೇಡಿತು ನೋವಿನಲಿ ಎಂದು ಬರುವೆಯೆಂದು ಖಾಲಿ ಬಿಳಿ ಹಾಳೆಯಂತಿದ್ದ ಎದೆಯು ನುಡಿಯಿತು ನೊಂದು ಗೋಡೆಯ ಸುಣ್ಣ ಬೇಡಿತು ಮಮತೆಯಲಿ ಎಂದು ಬರುವೆಯೆಂದು ಒಣ...

ಹರಿದ ಜೋಳಿಗೆ ತುಂಬ

ಮಸಿ ಬಟ್ಟೆ ಆ ಹುಡುಗ ಆ ಹುಡುಗ ಮಸಿ ಬಟ್ಟೆ ಬರಿಗಾಲಲಿ ಬೀದಿ ಬೀದಿ ಸುತ್ತುತ್ತಾ ‘ಸಾಕು’ ಎಂದೆಸೆದದ್ದ ಎತ್ತಿಕೊಳ್ಳುತ್ತಾನೆ ಹುಡುಕಿ ತುತ್ತಿನಂತೆ ಕುಡಿದು ಬಿಸುಟ ಖಾಲಿ ಬಾಟಲು ಕತ್ತರಿಸಿ ಒಗೆದ ‘ಡೈರಿ’ ಹಾಲಿನ...

ಕಳೆದು ಹೋದವನು

ನಾಲ್ಕು ದಾರಿಗಳು ಸೇರುವ ಇಲ್ಲಿ ಬಹುದಿನಗಳಿಂದ ಒಬ್ಬ ‘ಮುದುಕ’ ಕೋಲು ಹಿಡಿದು ನಿಂತಿದ್ದಾನೆ ವೃತ್ತ ಸುತ್ತಿಕೊಂಡು ಹೋಗುವ ಜನ ಯಾರನ್ನೂ ಗಮನಿಸುವುದಿಲ್ಲ ಅವಸರದಲಿ ನಡುವೆ ನಿಂತ ಅರೆ ಬೆತ್ತಲೆ ಫಕೀರನನು ಅಲ್ಲೇ ಮಲಗಿರುವ ದನಗಳನೂ......

ಇನ್ನೆಷ್ಟು ದಿನ ಹೀಗೆ?

ಇನ್ನೆಷ್ಟು ದಿನ ಹೀಗೆ? ಗಾಣಕ್ಕೆ ಕಟ್ಟಿದ ಎತ್ತಿನಂತೆ ಸುಮ್ಮನಿರುವುದು ಗೆದ್ದಲು ಕಟ್ಟದ ಹುತ್ತದೊಳಗೆ ಹಾವೊಂದು ಬೆಚ್ಚಗೆ ನಿದ್ರಿಸುವುದು ಕಾಗೆ ಇಟ್ಟ ಮೊಟ್ಟೆಗಳ ನಡುವೆ ಕೋಗಿಲೆಯೊಂದು ತಣ್ಣಗೆ ಮರಿಯಾಗುವುದು ರೊಟ್ಟಿ ಕದ್ದು ಓಡಿಹೋದ ನಾಯಿಯನ್ನು ತೋಳವೊಂದು...

ನಾಳೆಗಳಿಗಾಗಿ

ಆಟವಾಡಿ ಸಾಕಾಯ್ತೆ? ಸರಿ ಸರಿಸಿ ಬಿಡು ಪಕ್ಕಕ್ಕೆ ಹರಿದವು ಮುರಿದವು ಬಣ್ಣ ಮಾಸಿದವು ನುಡಿದ ನನ್ನಿಯ ಮಾತು ಕುಣಿದು ಹಾಡಿದ ಹಾಡು ಹಂಚಿಕೊಂಡ ಹಾಲುಗೆನ್ನೆಯನುಭವ ಕಟ್ಟಿಕೊಂಡ ಹಸಿ ಕನಸು ಇರಲಿ ಮಾಸದಂತೆ ಎಂದಾದರೊಮ್ಮೆ ಎತ್ತಿಕೊಂಡಾಗ...

ಸುಮ್ಮನಿದ್ದದ್ದು ಸಾಕು

ಗೊತ್ತಿರಲೇ ಇಲ್ಲ ಫಲವತ್ತಾದ ಕಪ್ಪು ನೆಲವೆಂದು ನೀನು ಬಂದು ಬೇರೂರಿ ಆಕಾಶದೆತ್ತರ ಬೆಳೆದು ನಿಲ್ಲುವವರೆಗೂ ಯಾರು ತಂದು ಬಿಸುಟರು ನಿನ್ನ ನನ್ನ ಎದೆಯಾಳದಲಿ? ಹುಲ್ಲಿನ ಜೊತೆ ಹುಲ್ಲಿನಂತೆ ಬೆಳೆದು ಹುಲ್ಲಾಗಿ ಒಣಗಿ ಹೋಗದೆ ಮರವಾಗಿ...

ಹಸಿದವರಿಗೂ ಎರಡು ಎಲೆಯಿರಲಿ

ಎಲ್ಲ ಪ್ರೀತಿಯ ಮನಸ್ಸುಗಳೇ ನನ್ನದೊಂದು ಮಾತು ಸಾವಧಾನವಿರಲಿ ಬೇಡಲು ಬಂದಿಲ್ಲ ನಿಮ್ಮ ಅನ್ನ ಬಟ್ಟೆ ಬರೆ ಕೇಳುವುದಿಲ್ಲ ನಿಮ್ಮ ಹಣ ಒಡವೆ ವಸ್ತು ಲಪಟಾಯಿಸಲಾರೆ ನಿಮ್ಮ ಆಸ್ತಿ ಅಂತಸ್ತು ಅಹಮಿಕೆ ವಂಚಿಸುವುದೇ ಇಲ್ಲ ನಿಮ್ಮ...

ದಾಹ

ನಿಮ್ಮ ದಾಹಕ್ಕೆ ಎಳೆ ನೀರು ನಾವು ಕೊಚ್ಚಿ ಕುಡಿದಿರಿ ನಮ್ಮನ್ನು ನಮ್ಮ ಮಕ್ಕಳನ್ನು ನಿಮ್ಮ ದಾಹಕ್ಕೆ ಸಿಹಿ ಕಬ್ಬು ನಾವು ಹಿಂಡಿ ಕುಡಿದಿರಿ ನಮ್ಮನ್ನು ನಮ್ಮ ಮಕ್ಕಳನ್ನು ನಿಮ್ಮ ದಾಹಕ್ಕೆ ನಿಂಬೆ ಹಣ್ಣಿನ ಶರಬತ್ತು...

ಭೂಮಿ ಆಟದ ಮೈದಾನ

ಸುತ್ತಲೂ ಕತ್ತಲು ನಂಬುವಂತಿಲ್ಲ ಯಾರೊಬ್ಬರನೂ ಕತ್ತಿ ಹಿಡಿದು ಮೇಲೇರಿ ಬಂದಂತೆ ಕಡ್ಡಿ ಗೀರಿದೆ ಮೆಲ್ಲಗೆ ದೀಪ ಹಚ್ಚಿದೆ ಬೆಳೆಯುತ್ತಾ ಹೋಯಿತು ಬೆಳಕು ಮುಟ್ಟಿದರೆ ಎದೆಯಾಳಕ್ಕೆ ಚುಚ್ಚಿಕೊಳ್ಳುವ ಮುಳ್ಳು ಪ್ರತಿ ಕೊಂಬೆಗೂ ತುದಿಯಲೊಂದು ಸಣ್ಣ ಮೊಗ್ಗು...

ನಮ್ಮವರ ಬಣ್ಣ

ನಮ್ಮವರ ಬಣ್ಣ ರೊಕ್ಕ ಇದ್ದ ಧಣಿಗಳ ತಾಕ ಜೀತಕ್ಕಿಟ್ಟೈತಿ ಮಹಡಿ ಮನೆಗಳ ಮಂದಿಗೆ ಮೆಟ್ಟಿಲಾಗೈತಿ ದೊಡ್ಡದೊಡ್ಡ ಅಧಿಕಾರಸ್ಥರ ಕಾಲ ಕಸವಾಗೈತಿ ನಮ್ಮವರ ಬಣ್ಣ ಸೋಗಲಾಡಿ ರಾಜಕಾರಣಿಗಳ ಸೊಂಟದ ಲಂಗೋಟಿಯಾಗೈತಿ ನೀತಿ ಹೇಳೋ ಜಾತ್ಯಸ್ತರತಾಕ ಸುತ್ತಿಗೊಂಡು...
cheap jordans|wholesale air max|wholesale jordans|wholesale jewelry|wholesale jerseys