ಕಳೆದು ಹೋದವನು

ನಾಲ್ಕು
ದಾರಿಗಳು ಸೇರುವ ಇಲ್ಲಿ
ಬಹುದಿನಗಳಿಂದ ಒಬ್ಬ
‘ಮುದುಕ’
ಕೋಲು ಹಿಡಿದು ನಿಂತಿದ್ದಾನೆ

ವೃತ್ತ
ಸುತ್ತಿಕೊಂಡು ಹೋಗುವ
ಜನ
ಯಾರನ್ನೂ ಗಮನಿಸುವುದಿಲ್ಲ
ಅವಸರದಲಿ
ನಡುವೆ ನಿಂತ ಅರೆ ಬೆತ್ತಲೆ
ಫಕೀರನನು
ಅಲ್ಲೇ ಮಲಗಿರುವ
ದನಗಳನೂ…

ಮುರುಕು ಚಾಳೀಸು
ಹರಕು ಪಂಚೆ
ನಿಂತ ಗಡಿಯಾರ
ಕದ್ದೊಯ್ದವರ
ಹಿಡಿದು ತರಲಿ ಎಲ್ಲಿಂದ
ನಡಿಯಲು ಸಾಕ್ಷಿ
ಕಿವಿ ಕಣ್ಣಿರದ ಕಟಕಟೆಗೆ?

ಖಾದಿ ಖದರಿನ
ಟೋಪಿ
ಜನಗಳ ನಡುವೆ
ಕಾಣೆಯಾಗಿರುವ ಮುದುಕ
ಹುಡುಕಿಕೊಡಿ
ನಿಮ್ಮ ಎದೆಯ ಮೂಲೆಯೊಳಗೆ
ಎಲ್ಲಾದರೂ
ಅವಿತುಕೊಂಡಿದ್ದರೆ

ನೆನಪಿರಲಿ
ಅವನ ಕೈಯೊಳಗೊಂದು
ಕೋಲಿದೆ!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕಟ್ಟಿದ್ದೇನು ಕುಣಿದಿದ್ದೇನು!
Next post ಅಮ್ಮ ನಿನ್ನ ಕರುಣೆಯ

ಸಣ್ಣ ಕತೆ

  • ನಿಂಗನ ನಂಬಿಗೆ

    ಹೊಸಳ್ಳಿ ನೋಡುವದಕ್ಕೆ ಸಣ್ಣದಾದರೂ ಕಣ್ಣಿಗೆ ಅಂದವಾಗಿದೆ. ಬೆಳವಲ ನಾಡಿನಲ್ಲಿ ಬರಿ ಬಯಲೆಂದು ಟೀಕೆ ಮಾಡುವವರಿಗೆ ಹೊಸಳ್ಳಿ ಕೂಗಿ ಹೇಳುತ್ತಿದೆ - ತಾನು ಮಲೆನಾಡ ಮಗಳೆಂದು ! ಊರ… Read more…

  • ಮರೀಚಿಕೆ

    ನಂಬಿದರೆ ನಂಬಿ ಬಿಟ್ಟರೆ ಬಿಡಿ ನನ್ನೆಲ್ಲಾ ಭಾವನೆಗಳೂ ತಬ್ಬಲಿಗಳಾಗಿಬಿಟ್ಟಿವೆ. ಪ್ರೇಮವೆಂದರೆ ತ್ಯಾಗವೆ, ಭೋಗವೆ, ಭ್ರಮೆಯೆ ಆಥವಾ ಕೇವಲ ದಾಸ್ಯವೆ? ಮನಸ್ಸಿಗಾದ ಗ್ಯಾಂಗ್ರಿನ್ ಕಾಯಿಲೆಯೆ? ಇಂತಹ ದುರಾರೋಚನೆಗಳು ಹುಟ್ಟಲು… Read more…

  • ಕತೆಗಾಗಿ ಜತೆ

    ರಾಜರ ಮನಿಲಿ ವಂದ್ ಮಡವಾಳವ ಬಟ್ಟೆ ಶೆಳೀಲಿಕ್ಕಿದಿದ್ದ. ಅವನಿಗೆ ನೆಂಟ್ರ ಮನಿಗೆ ವಂದಿವ್ಸ ಹೋಗಬೇಕು ಹೇಳಿರೆ ಸೌಡಾಗುದಿಲ್ಲ. ನಿತ್ಯೆ ಬಟ್ಟೆ ಶೆಳುದ್ ವಂದೇಯ. ವಂದಾನೊಂದ ದಿವಸ ಇವತ್… Read more…

  • ಮಾದಿತನ

    ಮುಂಗೋಳಿ... ಕೂಗಿದ್ದೆ ತಡ, ಪೆರ್‍ಲಜ್ಜ ದಿಡಿಗ್ಗನೆದ್ದ. ರಾತ್ರಿಯೆಲ್ಲ... ವಂದೇ ಸಮ್ನೆ ಅಳುತ್ತಾ, ವುರೀಲೋ... ಬ್ಯಾಡೋ... ಯಂಬಂತೆ, ದೀಪದ ಬುಡ್ಡಿ, ನಡ್ಮುನೆ ಕಂಬ್ಕಂಟಿ, ಸಣ್ಗೆ ವುರಿತಿತ್ತು. ಯದೆವಳ್ಗೆ ಮಜ್ಗೆ… Read more…

  • ಮನೆಮನೆಯ ಸಮಾಚಾರ

    ಪ್ರಮೋದನಗರದ ಸಮೀಪದಲ್ಲಿ ಹೂವಿನಹಳ್ಳಿಯೆಂಬದೊಂದು ಗ್ರಾಮವಿರುವದು. ಅಲ್ಲಿ ಪ್ರೌಢರಾಯನೆಂಬ ದೊಡ್ಡ ವೃತ್ತಿವಂತನಾದ ಗೃಹಸ್ಥನಿದ್ದನು. ಪ್ರೌಢರಾಯರಿಗೆ ಇಬ್ಬರು ಗಂಡುಮಕ್ಕಳೂ, ಒಬ್ಬ ಹೆಣ್ಣು ಮಗಳೂ ಇದ್ದರು. ರಾಯರ ಹಿರಿಯ ಮಗನಾದ ರಾಮಚಂದ್ರರಾಯನು… Read more…