Home / ವೃತ್ತ

Browsing Tag: ವೃತ್ತ

ಸ್ವಾಮಿ, ಇದೆ ಕಡೆಗೀಟು; ತಲೆತಲಾಂತರದಿಂದ ನಮ್ಮ ನಿಮ್ಮಜ್ಜ ಪಿಜ್ಜಂದಿರೆಲ್ಲರು ಬೆಸೆದ ಎಂಥ ಘನ ಬಾದರಾಯಣ ದೈತ್ಯಬಂಧವೂ ದಾಟಬಾರದ ಕಟ್ಟಕಡೆಗಟ್ಟು ಇದರೀಚೆ ಏನಿದ್ದರೂ ನನ್ನ ಸ್ವಂತ, ಅಪ್ಪಟ ನನ್ನ ಬದುಕು ನನ್ನದೆ ನಾಚು. ಹಾ! ನಿಲ್ಲಿ ನುಗ್ಗದಿರಿ; ಭಂ...

ಕಂಡಿರುವೆ ಮೂರು ಸಲ ಇವನ ಮೋರೆ, ಮನೆಯಂಗಳಕೆ ನುಗ್ಗಿ ಹೀಚು ಹರಿವಾಗ, ನೋಡುವರ ಕೈಕಟ್ಟಿ ಹಗಲೆ ಲೂಟಿಯ ಹೊಡೆವ ದರೋಡೆಕೋರ ಹಂಡೆಯಂಥಾ ಹೊಟ್ಟೆ, ಕಿರುಬೆಂಡುಗಾಲು, ಉಂಡದ್ದು ಉದರ ಸೇರದ ಯಾವ ರೋಗವೋ! ತಿನಿಮೋರೆ ಚಂದವೋ, ಅರಕೆ ಅತೃಪ್ತಿಗಳೆ ತೇದ ಇದ್ದಿಲ...

ಬಯಲ ಹೆಡೆಯಾಗಿ ನೆರಳ ಕೊಡೆಯಾಗಿ ಫಲ ಸುರಿಸಲು ಬಯಸಿ, ಮೊಳಕೆ ಒಡೆಯುತಿರುವಾಗಲೆ ಯಾವುದೊ ನಂಜು ಗಾಳಿ ಬೀಸಿ, ತೊಟ್ಟ ವಸ್ತ್ರವೇ ಜಗುಳಿ ಬಿದ್ದಂತೆ ಎಲೆಯುದುರಿವೆ ಕೆಳಗೆ; ಪ್ರಾಯದ ಗಿಡ ಆಯ ತಪ್ಪಿದಂತಿದೆ ಈ ರೂಪವೆ ಇದಕೆ? ಮೂಳೆಗೈಯಾಗಿ ಮುಗಿಲಿಗೆ ಚಾಚ...

ಆಗಿನಿಂದಲು ಇವನು ಹೀಗೆಯೇ ರೋಗಿಯೇ, ಮಾತಲ್ಲಿ ಮಾತ್ರ ಧನ್ವಂತರೀ ಶೈಲಿಯೇ; ಇಷ್ಟು ದಿನ ಹುಚ್ಚೆದ್ದು ಊದಿರುವ ರಾಗದಲಿ ಶೋಕ ವ್ಯಭಿಚಾರಿ, ಸ್ಥಾಯಿಯು ಮಾತ್ರ ಟೀಕೆಯೇ. ಟೀಕೆ ಪರರಿಗೆ, ಆತ್ಮಾರ್ಚನೆಗೆ ನುಡಿಕೇದಗೆ! ಇವನ ಬೊಜ್ಜು ಪಟಾಕಿ ಸಿಡಿತಕ್ಕೆ ಜಯ...

ಎದೆಯ ಹೊಂಡದಲೆಲ್ಲ ಎಚ್ಚರದಿ ಕೈಯಾಡಿ ಹುಡುಕಿ ಎತ್ತಿದ್ದೇನೆ ನಿನ್ನ, ನಿನ್ನ ಮಲಗಿಸಿ ಮೈಯ ಅಂಗುಲಂಗುಲವನ್ನು ದುರ್ಬೀನುಗಣ್ಣಿನಲ್ಲಿ ಬೆದಕಿ ನೋಡಿದರೆ ಇದೇನು, ಎಲ ನೀನು ಪ್ರತಿ ಕಣದಲೂ ಖುದ್ದು ನಾನು! ಜವಳಿಯಂಗಡಿಯಲ್ಲಿ ಗಂಟೆಗಟ್ಟಲೆ ಹುಡುಕಿ ಬಟ್ಟೆ...

ನಿಂತ ನೆಲವೆ ದ್ವೀಪವಾಗಿ ಕೂಪದಾಳದಲ್ಲಿ ತೂಗಿ ಕಂದಕವನು ಕಾವಲಾಗಿ ತೋಡಿದಂತೆ ನನ್ನ ಸುತ್ತ ಒಂದು ಕಲ್ಲ ವೃತ್ತ. ಹೃದಯ ಮಿದುಳು ಕಣ್ಣು ಕಿವಿ ಉಂಡ ಸವಿ, ಮನದ ಗವಿಯ ತಳದಲೆಲ್ಲೊ ಪಿಸುಗುಟ್ಟುವ ಪಿತಾಮಹರ ಚಿತ್ತ- ಕೊರೆದುದಂತೆ ಈ ವಲಯ ಇದೇ ನನ್ನ ಎಲ್ಲ ...

ನನಗು ನಿನಗೂ ನಡುವೆ ಇಂಥ ಕೊರಕಲು ಇದ್ದು ತಿಳಿಯದಿದ್ದುದು ಹೇಗೆ ಮಾರಾಯ? ಅಡ್ದಬಿದ್ದಿದ್ದ ಈ ಲೊಡ್ಡು ಸಂಕವ ಗಟ್ಟಿ ನೆಲವೆಂದೆ ಭ್ರಮಿಸಿದ್ದೆ ಎಂಥ ಮಡೆಯ! ಇಷ್ಟು ದಿನ ಅದೃಷ್ಟವಿತ್ತು ಆ ಕಡೆ ಬರಲು ಮುರಿದುಬಿದ್ದಿತು ಈಗ ಲೊಡ್ಡು ಹಲಗೆ, ಚಂದ್ರಮಾಯೆಯ...

ನೀನೇನೊ ನಿಜವಾಗಿ ಮಂತ್ರಿ. ಬಿಜ್ಜಗಿಜ್ಜಳರ ಸಭೆಗಲ್ಲ ನಾ ಹೇಳುವುದು, ಕಂತ್ರಿಜನಗಳ ಬಿಡು, “ಇಟ್ಟರೆ ಸಗಣಿಯಾಗಿ, ತಟ್ಟಿದರೆ ಕುರುಳಾಗಿ ಸುಟ್ಟರೆ ನೊಸಲಿಗೆ ವಿಭೂತಿಯಾಗಿ ತಟ್ಟದೇ ಹಾಕಿದರೆ” ಕೊಳವೆ ಗೊಬ್ಬರವಾಗಿ ನಾರಿದರು ಬೀಗಿ ಮೆರೆಯ...

ಸರ್ರನೆ ಜಾರುವ ನುಣ್ಣನೆ ಬುದ್ಧಿಗೆ ಆಗೀಗ ಸಿಕ್ಕಿ ತೊಡಕು, ಅಲ್ಲಲ್ಲಿ ನಿಲ್ಲುವುದು; ನಿಂತಾಗ ಗರಿಬುದ್ದಿ ತೊಲೆಭಾರವಾಗಿ ನಿನ್ನೆ ನೆನಪು- ಸೊಯ್ಯನೆ ಸರಿಯುವ ಸಾಪುಮೈ ಹೊಳೆಯಲ್ಲಿ ಮೇಲೆದ್ದು ಹಾಳೆ ಸೀಳುವ ಚೂಪುಗಲ್ಲು ; ಮಿಸುಕಿದರೆ ಕತ್ತು ಲಟ್ಟೆನು...

ಕೋವಿ ಎತ್ತಿದ್ದೇನು, ಗುರಿಯ ಹೂಡಿದ್ದೇನು ಕಡೆಗೆ ಹೊಡೆದದ್ದೂ ಹೂವಲ್ಲಿ! ಈ ನೀರಲ್ಲಿ ಬಿದ್ದ ತುಂಡುಗಳೆಲ್ಲ ಸಾಗಿ, ಬೆಳೆದದ್ದೆಲ್ಲ ಬಾಗಿ ಹರಿಯುತ್ತಲಿದೆ ಹೀಗೆಯೇ ಹೊರವಾಗಿ. ಒಂದು ಕ್ಷಣ ಹಿಂದೆ ಏನೆಲ್ಲ ಆಡಿದಿರಪ್ಪ! ಅಂದ ಮಾತಿಗೆ ಈಗ ತಾವೆ ನಗುವುದ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...