ಯಾರೊ ಕಟ್ಟಿದ ಮನೆಯ ನಾನು ಮುರಿಯುವುದೀಗ ನನ್ನ ಕರ್‍ಮ, ಜಳ್ಳು ಕಾಳೆಲ್ಲ ಕಣ್ಮುಚ್ಚಿ ಬಾಚಿದೆನೇಕೆ? ಕೇರುತಿದೆ ಈಗ ಕೆರಳಿದ ಮನೋಧರ್‍ಮ. ಸುಬ್ಬಮ್ಮ, ನಾಣು, ಪಟಗುಪ್ಪೆ ರಾಮಾಜೋಯ್ಸ ಹರಿಕಥಾಂಬುಧಿ ಚಂದ್ರ ನರಸಿಂಹದಾಸ ಚಿಕ್ಕಂದಿನಿಂದ ನನಗೆಂದೆ ಕನಿಕರಿಸಿ...
ದೈವನಂಬಿಕೆಯೊಂದು ದಿನ್ನೆ, ಏರುವ ಜನಕ್ಕೆ. ಹತ್ತಿನಿಂತರೆ ದಿನ್ನೆನೆತ್ತಿಯಲಿ ಸುತ್ತಲಿನ ಹತ್ತು ವಿಷಯಗಳೆಲ್ಲ ಕಣ್ಣತೆಕ್ಕೆಗೆ ಸಿಕ್ಕಿ ನೋಟ ಕೂರಾಗುವುದು, ನಿಲವು ದೃಢವಾಗುವುದು, ತುಂಬಿ ಹರಿಯುವ ಗಾಳಿ ಬಗೆ ಸೋಸಿ ಮುಖದಲ್ಲಿ ನೊಂದ ನೆನಪಿನ ಬಿರುಸು ಹರಿದು...