ತೀ ನಂ ಶ್ರೀ

ಕತ್ತೆತ್ತಿ ನೋಡಿದಲ್ಲದೆ ಕಾಣರೆಂಬಷ್ಟು ಎತ್ತರಕೆ ಬೆಳೆದಂಥ ಸತ್ಯಕಾಮರು ನೀವು. ನೀವೆತ್ತಿದರೆ ನಿಮ್ಮ ಬುದ್ಧಿಭುಜದಲಿ ನಿಂತು ಹೆದ್ದಲೆಯ ನೆಮ್ಮಿ ಏನೆಲ್ಲ ನೋಡಿದೆವು! ಹಳೆಮಾತಿನೊಡಲಲ್ಲಿ ಕುದಿವ ಜೀವನರಸದ ಕಡಲ ಚಿತ್ರವನು ಕಣ್ಣಾಗಿ ಈಜಿದೆವು. ಪ್ರಕ್ಷೇಪ ಲೋಪ ಲಿಪಿಕಾರನಕ್ಷರಪಾಪ...