Home / ಮಾಂದಳಿರು

Browsing Tag: ಮಾಂದಳಿರು

ಸ್ಥವಿರ ಗಿರಿಯ ಚಲನದಾಸೆ, ಮೂಕ ವನದ ಗೀತದಾಸೆ, ಸೃಷ್ಟಿ ಹೊರೆಯ ಹೊತ್ತ ತಿರೆಯ ನಗುವಿನಾಸೆ ನಾ. ಬಾಳ್ವೆಗೆಲ್ಲ ನಾನೆ ನಚ್ಚು, ಲೋಕಕೆಲ್ಲ ಅಚ್ಚುಮೆಚ್ಚು, ನಾನೆ ನಾನೆ ವಿಧಿಯ ಹುಚ್ಚು, ಹೊನಲ ರಾಣಿ ನಾ. ಕಿರಣ ನೆಯ್ದ ಸರಿಗೆಯುಡಿಗೆ, ಇರುಳು ಕೊಟ್ಟ ತಾ...

ದಾನವಹೃತ ಮೇದಿನಿಯಂ ದಂಷ್ಟಾಗ್ರದೊಳಿರಿಸಿ, ಭೂದಾರಂ ಪಾತಾಳವ- ನುಳಿದೆದ್ದನೋ ಎನಿಸಿ, ದೂರದಿಗಂತದೊಳೊಪ್ಪಿದೆ- ರವಿ ಮಂಡಿತ ಶೃಂಗಂ, ನೀಲಾಚಲಮುದ್ದೀಪಿತ ಪೂರ್ವೋದಧಿಸಂಗಂ. ಕನ್ನೆಯ ನಿದ್ದೆಯು ಸಡಿಲಲು ಮುತ್ತಿಟ್ಟನೋ ಧೀರಂ! ಹೊಲ್ಲಳ ಶಾಪಂ ತೊಲಗಿತೊ ಬ...

ರಾಜ್ಯನೀಗಿ ಪಲಿತ ಮಾಗಿ ನಡೆದ ವಾನಪ್ರಸ್ಥನಾಗಿ; ಹೇಽಮಂತ ತಪಸ್ಸಾರ ಚೈತ್ರ ಗಾದಿಗಿನ್ನೂ ಬಾರ; ಅಂಥ ಸಂಽದಿಗ್ಧ ಸಮಯ. ಆಳ್ವರಿಲ್ಲದಿಳೆಯ ಪರಿಯ- ನೆಂತು ಪೇಳ್ವೆ? ಬಾನೊ ಬಯಲು, ಶಿಶಿರಶರಣವಾದ ನೆಳಲು, ದಹನನಿಪುಣ ಕಠಿನತಪನ, ನೀರಸತರು ನಿಬಿಡ ವಿಪಿನ, ಹ...

ಚಂದ್ರಚುಂಬಿತ ಯಾಮಿನೀ ನವವಿರಹಿ ಚಿತ್ತೋನ್ಮಾದಿನೀ, ಜಾರುತಿದೆ ಕಲನಾದಿನೀ, ಅದೊ! ಹಾಡುತಿರುವಳು ಕಾಮಿನೀ. ತರುಣಿ ವೀಣೆಯ ಮಿಡಿವಳು ತಚ್ಛ್ರುತಿಗೆ ವಾಣಿಯನೆಳೆವಳು- ಮಧುರಗೀತದ ನುಡಿಯೊಳು ತನ್ನೆದೆಯ ಭಾವವ ಮೊಗೆವಳು: ಒಲುಮೆ ಹೃದಯವ ಹೊಗಲು ಬಯಸಲು ಆರ...

೧ ಕೂಸಿಗಂದು ಏನು ಬೇಡ, ತಿಂಡಿ ಗೊಂಬೆ ಮುದ್ದು ಬೇಡ. ಏನೊ ಅರಕೆ, ಏನೊ ಬೇನೆ, ಅತ್ತು ಸೊರಗಿತು : “ಅಮ್ಮ ಎಲ್ಲಿ ಹೋತು” ಎನುತ ಅತ್ತು ಸೊರಗಿತು. ಅಳುವ ಕೇಳಿ ಬಂದ ತಾಯ ಅಮೃತಸ್ಪರ್‍ಶಕಾರೆ ಗಾಯ, ತೊಯ್ದ ಕಣ್ಣ ಬಿಚ್ಚಿ, ಸುಳಿಸಿ, ತೊಂದ...

ಹಗಲ ಕಣ್ಣನು ಮಂಕು ಕವಿಯಿತು, ಮುಗಿಲ ಬಾಣದ ಬಿರುಸು ಹೆಚ್ಚಿತು, ನೆಗೆದು ನೊರೆಯನು ಕೀಳುತೋಡಿತು ಮಲೆಯನಾಡಿನ ಹೇಮೆಯು. ಕರೆಯ ಮಂಟಪದೊಳಗೆ ಕುಳಿತು, ಬೆರಗುಮಾಡುವ ಪ್ರಕೃತಿಯಂದಿನ ಇರವ ನೋಡುತ ಮೂಕರಾದೆವು ನಾನು ರಾಮ ಇಬ್ಬರೂ. ಮುಗಿಲಿನಾರ್‍ಭಟ, ಗಾಳಿ...

ನಿನ್ನ ನಾನರಿಯೆನೈ ಅರಿಯೆ ಅರಿಯೆ, ಎನ್ನ ಮೋಹವ ಮೀರಿ ನಿಂದಿರುವೆ ಹರಿಯೇ. ನಿನ್ನಿರವು ನನ್ನಿರವಿನೊಳಗೆಂದು ನೆಚ್ಚುವೆನು, ಇನ್ನೊಮ್ಮೆ ಶಂಕಿಸುವೆ ಕೆದಕಿ ಬೆದಕಿ. ನನ್ನಿ ರವ ಜಗದಿರವನೆಲ್ಲವನು ಮೀರಿರುವ ನಿನ್ನಿರವ ಮರ್‍ಮವನು ಎಂತರಿವೆ ಹರಿಯೇ? ನಿನ...

ಮುದವಾರಲು, ಅಳಲೇರಲು, ಭಯ ಮಸಗಲು- ತುಡಿದು, ಮನ ದೇವಗೆ ಮೊರೆಯಿಡುವುದು ನರನೊಲುಮೆಯ ಜರೆದು. ಹರುಷವಿದ್ದರೆ ದೇವನೇತಕೆ? ಹರಕೆಯಾತ್ರೆಗಳೇಕೆ? ಮನುಜಗಾಸೆಗಳಿಂಗಿಹೋದರೆ ಹರಿಯ ಹಂಗವಗೇಕೆ? ಸ್ವಾರ್‍ಥತ್ಯಾಗದ ನಲವನರಿಯಲು ಮೋಕ್ಷದೊಳು ನೆಚ್ಚೇಕೆ? ಮರ್‍ತ...

ಸರಸಿಯ ದಡದೊಳು ಹೊಂಗೆಯ ನೆಳಲೊಳು ಗರುಕೆ ಮೆತ್ತೆಯ ಮೇಲೆ ಉರುಳಿ, ಹರುಷದ ಮುದ್ದೆಯೆ ತಾನೆಂಬ ತೆರದೊಳ- ಗಿರುವನು ರಾಮಿಯ ಗಂಡು. ಹೊಲ್ಲಳು ರಾಮಿ; ಇಂದವಳಿಗೆ ಮನೆಯಿಲ್ಲ- ಇಲ್ಲ ಬಾಂಧವ್ಯದ ಅಂಟು. ಎಲ್ಲವು ಆ ಕಂದನೊಬ್ಬನೆ ಬಾಳಿನೊ- ಳುಲ್ಲಸ ಹೂಡುವ ನಂ...

ವರ್‍ಷದ ನಿಶಿಯೊಳು ಮುಗಿಲಿನ ಮರೆಯೊಳು ಇಣಿಕುವ ಚಂದ್ರನ ಜೊನ್ನದೊಲು, ಹರ್‍ಷವು ಮೂಡಿತು ಚಿಂತೆಯ ಸದನದಿ ಹೊಳೆಯಲು ಆಂಡಾಳಿನ ನಗೆಯು. ಜಾಜಿಯ ಮುಗುಳನು ಮುತ್ತಿಡೆ ನುಸುಳಿದ ಕಿರಣದ ಚೆಲುವಿನ ಹೊಸ ನಗೆಯು, ವ್ಯಾಜವೆ ಇಲ್ಲದೆ ಸೋಜಿಗಪಡುವಾ ಬಲು ಬಲು ಸೊ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....