ಸ೦ಧ್ಯಾ
ದಿವಸಾವಸಾನದೊಳು ಬುವಿಯ ನುತಿಗೆಚ್ಚರಿಸೆ ‘ಮುನಸ್ಸೀನ’ನಂದದೊಳು ಅಸ್ತಗಿರಿಯ ರವಿಯಡರಿ ರಂಜಿಸಿಹ- ನವನ ಪಾವನ ಕಾಂತಿ ಅವತರಿಸಿ ಹರಸುತಿದ ಅಂಜುವಿಳೆಯ. ಇನಿಯನೊಲಿಯಲಿ ಎಂದೊ ಮನದಾಸೆ ಸಲಲೆಂದೊ- ಎನಗರಿಯದಾ ಹರಕೆ-ಮುಗಿಲ ಕರೆಯ […]
ದಿವಸಾವಸಾನದೊಳು ಬುವಿಯ ನುತಿಗೆಚ್ಚರಿಸೆ ‘ಮುನಸ್ಸೀನ’ನಂದದೊಳು ಅಸ್ತಗಿರಿಯ ರವಿಯಡರಿ ರಂಜಿಸಿಹ- ನವನ ಪಾವನ ಕಾಂತಿ ಅವತರಿಸಿ ಹರಸುತಿದ ಅಂಜುವಿಳೆಯ. ಇನಿಯನೊಲಿಯಲಿ ಎಂದೊ ಮನದಾಸೆ ಸಲಲೆಂದೊ- ಎನಗರಿಯದಾ ಹರಕೆ-ಮುಗಿಲ ಕರೆಯ […]
ಯೋಜನಗಳಾಚೆಯೊಳು ಎಲ್ಲಿಯೋ ಜನಿಯಾಂತು ಮಿಂಚಿನಣುಗಳನೇರಿ ಸಕಲ ದಿಙ್ಮಂಡಲವ ಸಂಚರಿಸುತಂತರದಿ ಮೌನದಿಂ ಮಿಡಿಯುತಿಹ ಸೋಜಿಗದ ಗೀತವನ್ನು ಹಿಡಿದು, ಉಜ್ಜ್ವಲಗೊಳಿಸಿ, ಶ್ರೋತೃಪಥವೈದಿಸುವ ಯಂತ್ರದೊಲು,-ಹೇ ಕವಿಯೆ, ಬಾಳುಬಾಳುಗಳಾಚೆ ಬ್ರಹ್ಮಾಂಡ ಹೃದಯಾಂತ- ರಾಳದೊಳು […]
ಸೃಷ್ಟಿ ಸ್ವಯಂಪ್ರಭೆಯಗುಹೆಯ ದಾರಿಗನಾಗಿ ಚೇತನಂ ನಡೆಯುತಿರೆ, ವಿಸ್ಮಯಂಗೊಳಿಸಿತಿದ ನೂತನದ ನಸುಕೊಂದು ಒಂದೆಡೆಯೊಳ್ ; ಅದರಿಂದ ಸ್ಪಷ್ಟ ಮಂದದಕಾಯ್ತು ಅಹಮಸ್ಮಿ ಎಂಬರಿವು. ನಾನುಂಟು’ ಎನ್ನುತಿದು ಹಿಗ್ಗಿ ಕಣ್ಮನ ತೆರೆಯ- […]
೧ ಹಿಮಂತದೆಳೆದಿನ ಕಳಕಳಿಸಿತ್ತು, ಬಿಸಿಲೋ ಬೆಚ್ಚನೆ ಬಿದ್ದಿತ್ತು; ಬಿಡುವೆಲ್ಲೆಲ್ಲಿಯು ಮೈದೋರಿತ್ತು, ಸದ್ದೋ ಮೌನದಿ ಕೆಡೆದಿತ್ತು. ಹೊಲದೊಳು ತೋಟದಿ ಗದ್ದೆಯ ಬಯಲೊಳು ಅನ್ನ ಸಮೃದ್ಧಿಯ ಸಿರಿಯಿತ್ತು, ತಿರೆಯಂದಿನ ಆ […]
ಪಡುವ ಮಲೆಯ ಕಣಿವೆಯಾಚೆ ಹೊತ್ತು ಹಾರಿಹೋಗುತಿತ್ತು, ಮೂಡ ಮಲೆಯ ಹಲ್ಲೆ ಹತ್ತಿ ಇರುಳ ದಾಳಿ ನುಗ್ಗುತಿತ್ತು; ಬಿದ್ದ ಹೊನ್ನ ಕೊಳ್ಳೆ ಹೊಡೆದು ಕಳ್ಳಸಂಜೆಯೋಡುತಿತ್ತು, ತಲೆಯ ಬಾಗಿ ಪುರದ […]
ಜಗವೆ ಯಾತ್ರಿಕನಾಗೆ ಚೆಲುವ ದೇವಿಗೆ ಹರಸಿ, ಚೇತನದ ಸೌಂದರ್ಯದೀಪ್ಸಿತವ ಸಲಿಸುವೀ ಪಾತದದ್ಭುತ ಭೀಮಕಾಂತ ಕಮನೀಯತೆಗೆ ಬಗೆ ಸೋತುದಂತಿರಲಿ, ಕಣ್ಣಾಸೆ ಮಿಕ್ಕಿರಲಿ; ಆಲಿಸಾದೊಡೆ, ಕೆಳೆಯ, ನಿನ್ನಾತ್ಮವರಳುವೊಡೆ, ಈ ನದಿಯ […]
ಬೇಡದೆ ಬಿಸುಡಿದ ವಸ್ತುವೊಲಾಯ್ತಿಳೆ ಕೆಳ ಕೆಳಗಾಳದ ಕಣಿವೆಯೊಳು; ಕಪ್ಪೆಯ ಗೂಡೋ, ಹುತ್ತವೊ ಇದು ಎನೆ ನಗೆಗೇಡಾಯಿತು ನೆರೆಹೊಳಲು; ಕೆರೆಯೋ ಕೊಚ್ಚೆಯೊ, ಪೈರೋ ಪಾಚೆಯೊ, ಹಳುವೋ ಹುಲ್ಗಾವಲ ಹರಹೋ? […]
ಕನಸಿಗರಿಗೆ ಮಾಸವೇಕ ಕಣಸುತರುವ ಕಾರ್ತಿಈಕ! ನಿಯತಿ ತನ್ನ ಬಿಡುವಿಗೆಂದು ಮೀಸಲಿಡುವ ಕಾಲವಿಂದು. ನಿಗಿ ನಿಗಿ ನಿಗಿ ನಗುವ ಹಗಲು, ಝಗಿ ಝಗಿ ಝಗಿ ಝಗಿಸುವಿರಳು. ಬಹು ಮನೋಜ್ಞ […]
ಬುವಿಬಾನಳೆದುರವಣಿಸಿದ ಹರಿ ಪಾದಕೆ ತಲೆಯೊಡ್ಡುತ ಕೆಳ ಲೋಕಕೆ ತೆರಳುತ್ತಿಹ ಬಲಿದೊರೆಯಂದದೊಳು, ಮಿಗುವಿರುಳಿನ ನಿಡು ನೀಟಿದ ದೆಸೆ ಮೆಟ್ಟಿದ ಮುಗಿಲಡಿಯಡಿ ಮರೆಯಾದುದು ಪಗಲೈಸಿರಿ ಪಡುವಣ ಕಮರಿಯೊಳು ಹಿಮವದ್ಗಿರಿಗಹ್ವರದೆಡೆ ತಪವೆಸಗುವ […]
ಚಾರು ಶಾರದ ಸಂಧ್ಯೆ, ನೀರ ನೀಲಾಕಾಶ ಪೇರಾಳದರ್ಣವವ ಹೋಲುತಿತ್ತು. ಜಲಸಸ್ಯ ನಿವಹದೊಲು ಜಲದವಂಚಿನೊಳಿತ್ತು, ಎಳೆಯ ಪೆರೆ ಪಾತಾಳ ಯಾನದಂತೆ. ಬಾನಿನಂತರದಲ್ಲಿ ಮೀನಂತೆ ತೇಲಿದುವು ವೈನತೇಯಗಳೆರಡು ಗರಿಯಲುಗದೆ. ಅಡಿಯೊಳಗೆ […]