Home / ಬಯಲ ಬಯಕೆ

Browsing Tag: ಬಯಲ ಬಯಕೆ

ಈ ಮಂದಿಯಾಗೆ ಹೋಗಲಾರೆನೇ ತಾಯೀ ಕಣ್ಣ ಬಾಣ ಬಿಟ್ಟು ಬಿಟ್ಟು | ನೋವ ಮಾಡತಾರೆ ತಾಯಿ ಹುಟ್ಟಿದಾಗ ತೊಟ್ಟಿಲಾಗೆ | ಕೆಟ್ಟ ಕಣ್ಣು ಮುಟ್ಟದ್ಹಾಂಗೆ ದಿಟ್ಟಿಯಿಟ್ಟು ಕಾಯುತಿದ್ದ | ನೆಟ್ಟಗಿದ್ದೆನೇ ತಾಯಿ ಹತ್ತು ವರುಷ ಬೆಳೆದೆ ನಾನು | ಮುತ್ತಿನಂಗಿ ಲಂಗ ...

ಪರೆಯು ಪರೆಯು ತಾ ಹರಿಯುತಿಹುದು ಪರವಾದ ನೋಟದೀಟಿ ತೆರೆಯು ತೆರೆಯು ತಾವೋಡುತಿಹವು ಹರವಾಗೆ ಕಡಲದೋಟಿ ಹೆಜ್ಜೆ ಹೆಜ್ಜೆ ಸಜ್ಜಾಗುತಿಹವು ಬೆಳೆ ಬೆಳೆವ ಒಜ್ಜೆ ಹೊರಲು ಚರ್ಮ ಮರ್ಮದೊಳಕಡೆಗೆ ತೂರಿ ತುತ್ತೂರಿಯೇನೊ ಬರಲು ಪೆಟ್ಟು ಪೆಟ್ಟು ಬಡಿದಾಗ ಹಾವ ಭಾ...

ಹಬ್ಬಾ ಮಾಡ್ತಾರಪ್ಪಾ ಇವ್ರು ಹಬ್ಬಾ ಮಾಡ್ತಾರೆ ಗಬ್ಬು ಗಬ್ಬು ನಾತಾ ಹೊಡೆಯೊ ಹಬ್ಬಾ ಮಾಡ್ತಾರೆ ಗಂಟೆಗಟ್ಲೆ ದಿವಸಗಟ್ಲೆ ಆಯುಷ್ದಾಗೆ ವರುಷಗಟ್ಲೆ ಪೂಜಾ ಪುನಸ್ಕಾರ್ ಮಾಡಿ ಮಾಡಿ ಕಾಲ ಕೊಲ್ತಾರೆ ಹೂವು ಪತ್ರೀ ಹರದು ತರದು, ಗಿಡಗಳ ಕೊಂದು ಪೂಜೆಗೆಂದು ...

ಒಂದು ಚಣದ ಆವೇಶದಲ್ಲಿ ಮೇಲಿಂದ ಇಳಿದು ಬಂದು ತುಂಬಿಯೊಡಲು ಜೇನಾಗಿ ಹೂವಿನಲಿ ಮಧುರ ಮಧುವ ತಂದು ಬಿಂದು ಬಿಂದು ಸಿಹಿ ನೀರ ಧಾರೆ ಅದಕಾಯ್ತು ದಿನದ ಅನ್ನ ಕುಂದು ಕೊರತೆಗಳ ನಗೆಯ ಅಲೆಗಳಲಿ ತೇಲಿಸಿತು ತನ್ನ ಎಲೆಯ ಗಾಳಿಯುಲಿಯಾಗಿ ತೇಲಿ ನಲಿದಾಡಿ ಹೂವ ಹ...

ಮಾಸಿದ ಜನತೆಯ ತೊಳೆಯುತ್ತ ಸನ್ಮಾರ್ಗ ತೋರಲು ಬರುವಂಥ ಬೆಳಕು ಸಂತರು ಬಾಳನು ಬೆಳಗುವ ಬೆಳಕು ಬಸವ ಬುದ್ಧರಂತೆ ರಾಮಕೃಷ್ಣರಂತೆ ಸರ್ವಜ್ಞನೀ ಹುಟ್ಟಿ ಬಂದೆ ಮಲಗಿದ್ದ ನಾಡವರನೆಬ್ಬಿಸ ಬಂದೆ ತುಂಡುಗಂಬಳಿ ಹೊದ್ದು ಕರದಿ ಕಪ್ಪರ ಹಿಡಿದು ವೀರಕೇಸರಿಯಂತೆ ತ...

ರಾಗ ರಂಜನೆಯ ಭೋಗ ಭಂಜನೆಯ | ಓಜೆ ಬಂದಿಹುದು ಒಳಗೆ ಯೋಗ ಭೂಮಿಯಲಿ ತೂಗುದೀಪದೊಲು | ತೇಜ ಸಿಂಚಿಸಿದೆ ಎದೆಗೆ ಯಾವ ಲೋಕದೊಳೂ ಭಾವ ಮಂಜರಿಯ | ಹಾವಭಾವ ಚೆಲುವು ನೋವು ನಂಜುಗಳ ಬೇವುಬೇಲಿಗಳ | ಸೋವುತಿರುವ ಬಲವು ಧಾರೆಧಾರೆಯಲಿ ನೀರೆ ಜಾರಿದೊಲು | ಭೀಮ ಬ...

ಮರಮರವನು ಸುತ್ತಿಮುತ್ತಿ ಕೊಂಬೆ ರೆಂಬೆ ಸವರಿ ಏರಿ ಎಲೆ‌ಎಲೆಯನು ಎಣಿಸುವಂಥ ಹುಚ್ಚು ಹಂಬಲಾ ಹೂವ ಹೂವ ಮೂಸುವಂಥ ಆಶೆ ಬೆಂಬಲಾ ಗುಡ್ಡ ಗುಡ್ಡ ಏರಿ ಇಳಿದು ಸೆಡ್ಡು ಹೊಡೆದು ಸೆಟೆದು ನಿಂತು ಅಡ್ಡ ಹಾದಿಯಲ್ಲಿ ಬಹರ ತರಿವ ಆಶಯಾ ಕಡ್ಡಿಯೆ ಬ್ರಹ್ಮಾಸ್ತ್ರ...

ಕಾದೇ ಕಾದೂ ಕಾದೇ ಕಾದೂ ಬೆಂಕಿಯೆ ಆಗೀನಿ ಒಳಹೊರಗೆ ಹತ್ಕೊಂಡು ಉರಿಯಾಕ ಹತ್ತೆಯ್ತೆ ಹೇಗೋ ಸಾಗೀನಿ ಬಾರೇ ಬಾರೇ ನೀರೇ ಬಾರೇ ಉರಿಯನು ನಂದಿಸು ಬಾ ಮನೆ ಹೊತ್ತಿ ಉರಿದರೆ ನಿಲ್ಲಲುಬಹುದು ಮನದುರಿಯನಾರಿಸು ಬಾ ಕರೆಯದೆ ಕೊರಗುತ ನರಕದಿ ಕೂಳೆಯುತ ಏಸೊಂದು ...

ಜನನದಿಂದ ಆ ಮರಣದವರೆಗೆ ಜೀವನದ ಮಧ್ಯ ಮಹಜಾಲದುಡಿಗೆ ಭೂಮ್ಯೋಮ ಭೂಮ ವಿನ್ಯಾಸವಿಹುದು ಸಂಸಾರ ಮತ್ತು ಸನ್ಯಾಸವಿಹುದು ಮನಮೊನೆಯ ಮೇಲೆ ಕುಳಿತಿಹುದು ಹರಣ ಹಾರುವುದೆ ಅದರ ಅತ್ಯಂತ ಧ್ಯಾನ ಹನಿಹನಿಯು ಕೂಡಿ ಹಗರಣದ ಹಣವು ಸೋರುವುದೆ ಅದರ ಚಿರನವ್ಯ ಗುಣವು ...

ಕತ್ತಲಲ್ಲಿ ನಡುರಾತ್ರಿಯಲ್ಲಿ ಸುಡುಗಾಡಿನಲ್ಲಿ ನಡೆವ ಬೆತ್ತಲಾಗಿ ಬರಿ ಹುಚ್ಚನಂತೆ ಸುತ್ತಾಡಿ ನೋಡಿಬಿಡುವ ಹರಕು ಅಂಗಿಯಲಿ ಪರಕು ಮೈಯಿಯಲಿ ಭಿಕ್ಷೆ ಬೇಡಲೆಂಬ ಸರಕು ಗಿರಕುಗಳ ತುತ್ತ ತೂರಿ ಕುಣಿದಾಡಿ ನಲಿಯಲೆಂಬ ಜನರ ಜಾತ್ರೆಯಲಿ ನೂರು ವೇಷಗಳ ತೊಟ್ಟ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....