ಬಯಲ ಬಯಕೆ

#ಕವಿತೆ

ಕೂಸು ಎಲ್ಲಿ ಹೋಯಿತೇ

0
Latest posts by ವೃಷಭೇಂದ್ರಾಚಾರ್‍ ಅರ್ಕಸಾಲಿ (see all)

ಎಲ್ಲಿ ಹೋಯಿತೇ ಕೂಸು ಎಲ್ಲಿ ಹೋಯಿತೇ ಅವ್ವ ಎಲ್ಲಿ ಹೋಯಿತೇ ಅಕ್ಕ ಎಲ್ಲಿ ಹೋಯಿತೇ ಮೊನ್ನೆ ಮೊನ್ನೆ ಹುಟ್ಟಿ ಬಂತು ಸ್ವರ್ಗವನ್ನೇ ಮುಟ್ಟಿ ನಿಂತು ಪೂರ್ಣ ಚಂದ್ರ ಹಾಲುಗೆನ್ನೆ ಬೆಳದಿಂಗಳ ಹಾಲು ನಗುವು ಮಳೆಯ ಜೊಲ್ಲು ಸುರಿಸಿ ಅಂಗ ತೋಯಿಸಿದ್ದನು ನನ್ನ ಎದೆಯ ನೆಲವ ಕೂಡ ಮೀಯಿಸಿದ್ದನು ಬಸ್ಸು ಲಾರಿ ಸದ್ದು ಕೇಳಿ  ಭಯವ ತಾಳಿ […]

#ಕವಿತೆ

ನಾನಿನ್ನ ಕರೆವೆ

0
Latest posts by ವೃಷಭೇಂದ್ರಾಚಾರ್‍ ಅರ್ಕಸಾಲಿ (see all)

ನಾನಿನ್ನ ಕರೆವೆ ನೀ ಬರದೆ ಇರುವೆ | ಏಕೆ ನೀ ಬಾರದಿರುವೆ ನಿನಗಾಗಿ ತಪಿಸಿ ಬಿಸಿಲಲ್ಲಿ ಜಪಿಸಿ | ಸುಖವನ್ನು ಸಾರದಿರುವೆ ಒಳಗೆಲ್ಲ ಬೆಂಕಿ ಮೇಲೆಲ್ಲ ಬೆಂಕಿ | ಉರಿ ಉರಿಯ ಬೆಂಕಿಯಾದೆ ಆರಿಸುವ ನೀರೆ ನೀನೇಕೆ ಬಾರೆ | ಬಹು ಸಮಯ ಕಾದೆ ಕಾದೆ ಮೋಡಗಳ ಕನಸು ಕೂಡಿಹುದು ಮನಸು | ಭಾವುಕತೆ ಆವಿಯಾಗಿ […]

#ಕವಿತೆ

ಚೆಲುವು

0
Latest posts by ವೃಷಭೇಂದ್ರಾಚಾರ್‍ ಅರ್ಕಸಾಲಿ (see all)

ಸೃಷ್ಟಿಯಲಿ ಚೆಲುವು ದೃಷ್ಟಿಯಲಿ ಚೆಲುವು ಕಳೆಯಲ್ಲಿ ಚೆಲುವು ಬೆಳೆಯಲ್ಲಿ ಚೆಲುವು ಮರಮರವು ಚಿಗುರು ನಗುತಿರುವ ಚೆಲುವು ಮೈತುಂಬ ಸೀರೆಯಂತೆ ಬಿಳಿಹಳದಿ ಕೆಂಪು ತರತರದ ಕಂಪು ಮುಖವರಳಿ ನಗುವಳಂತೆ ಆಕಾಶದಲ್ಲಿ ನೀರನ್ನು ಹೊತ್ತು ಮೋಡಗಳು ಸಾಗುತಿಹವು ತಲೆ ಮೇಲೆ ನೀರ ಹೊತ್ತಂಥ ನೀರೆ ಬಳುಕುತ್ತ ನಡೆವ ಚೆಲುವು ಸಂಜೆಯಲಿ ಮುಗಿಲು ಕೆಂಬಣ್ಣವಾಗಿ ಆರಕ್ತ ಹೂವು ಕೆನ್ನೆ ಮುಂಜಾವ […]

#ಕವಿತೆ

ಹೊಸ ಹಾಡು

0
Latest posts by ವೃಷಭೇಂದ್ರಾಚಾರ್‍ ಅರ್ಕಸಾಲಿ (see all)

ಹಾಡೆಲೆ ಹೃದಯದ ಹಕ್ಕಿಯೆ ಹಾಡು ನವ ಜೀವನ ಸುಮಧುರ ಗಾನ ಕೊರಡು ಕೊನರುತಿದೆ ಚೆಲುವು ಹರಡುತಿದೆ ಉದಿಸಲಿ ಚೇತನ ತಂತಾನ ರಾತ್ರಿ ಸರಿಯುತಿದೆ ಉಷೆಯು ಬರುತಲಿದೆ ಓಹೋ ಎಂಥಹ ಸುರ ಚೆಲುವು ಇದನ್ನು ಕಾಣಲು ಉಂಡದ್ದಾಯಿತು ಓ ಹಾ ಇರುಳಿನ ಕಡು ನೋವು ಜಗವೆ ಸುಂದರಾ ಬಾಳು ಸುಂದರಾ ಕಾಣೋ ನಗುತಿಹ ಸೃಷ್ಟಿಯನು ನೀನೂ ಕೂಡಾ […]

#ಕವಿತೆ

ಅಮರ

0
Latest posts by ವೃಷಭೇಂದ್ರಾಚಾರ್‍ ಅರ್ಕಸಾಲಿ (see all)

ನಾನು ಪ್ರಕೃತಿ ಶಿವ ಸತ್ಕೃತಿ ನನ್ನ ಗುಣವ ಹೇಳುವೆ ನೀನು ವಿಕೃತಿಯಾಗಿ ಬಂದೆ ದುಃಖಗಳನು ತಾಳುವೆ ಭೂಮಿಯೊಳಗೆ ನಾನು ಆಳ ಬೇರು ಬಿಟ್ಟು ನಿಂತಿಹೆ ಗಗನದಲ್ಲಿ ತಲೆಯನೆತ್ತಿ ಚೆಲುವನೆಲ್ಲ ಹೊತ್ತಿಹೆ ಮಣ್ಣಿನೊಳಗೆ ಒಡಬೆರೆಯುತ ಭದ್ರವಾಗಿ ಬೆಳೆದಿಹೆ ಸಣ್ಣಪುಟ್ಟ ಗಾಳಿಯಲ್ಲಿ ಬೆದರದಂತೆ ಉಳಿದಿಹೆ ನಾನು ಒಂದೇ ಇದ್ದರೂ ನೂರು ಕೈಗಳಿರುವುವು ಬಾನಿನಲ್ಲಿ ಹರಡಿಕೊಂಡು ಹೂವು ಹಣ್ಣು ಕೊಡುವುವು […]

#ಕವಿತೆ

ನೆಮ್ಮದಿಯೆಲ್ಲೆಡೆಗೆ

0
Latest posts by ವೃಷಭೇಂದ್ರಾಚಾರ್‍ ಅರ್ಕಸಾಲಿ (see all)

ನೆಮ್ಮದಿಯು ಸರ್ವರಿಗೆ ನೆಮ್ಮದಿಯು ಎಲ್ಲೆಡೆಗೆ ನೆಮ್ಮದಿಯು ಭೂತಳದ ದೇಶಗಳಿಗೆಲ್ಲ ಆನಂದವೆಲ್ಲರಿಗೆ ಆನಂದವೆಲ್ಲೆಡೆಗೆ ಆನಂದವಿರಲೆಲ್ಲ ರಾಷ್ಟ್ರಗಳಲೆಲ್ಲ ನೆಮ್ಮದಿಯು ಚೆಂಗುಲಾಬಿಯ ಬೆಳಗಿನಂತೆ ಆನಂದ ನಸುನಗುವ ವಸಂತನಂತೆ ಒಬ್ಬನಿಗೆ ಎಲ್ಲರೂ ಪ್ರತಿಯೊಬ್ಬನೆಲ್ಲರಿಗೆ ಇದುವೆ ಬಾಳುವೆಯಲ್ಲೆ ಬಂಗಾರ ನಿಯಮ ಜೀವನವು ಬೆಳಕು ಮೇಣ್ ಪ್ರೀತಿಗಳು ಎಲ್ಲರಿಗೆ ಜೀವಿಗಳಿಗೆಲ್ಲರಿಗೆ ಪ್ರೇಮ ನಿಸ್ಸೀಮ ಎಲ್ಲರಿಗೆ ಕಾಯಕವು ಅನ್ನ ಬಟ್ಟೆಗಳಿರಲಿ ಸರಿಸಮತೆ ನೆಲಗೊಳ್ಳಲೆಲ್ಲರಲ್ಲಿ ಮನೆ ಶಾಲೆ […]

#ಕವಿತೆ

ಸೌಂದರ್ಯಂತಾದ ಮಣ್ಣು

0
Latest posts by ವೃಷಭೇಂದ್ರಾಚಾರ್‍ ಅರ್ಕಸಾಲಿ (see all)

ಸೌಂದರ್ಯಂತಾದ ಕಣ್ಣು ಇದಕೆ ಸೌಂದರ್ಯಂತಾದ ಮಣ್ಣು            ||ಪ|| ಘಮಾ ಘಮಾ ಮೂಗಿಗೆ ವಾಸನೆ ಹಳದಿ ಕೆಂಪು ಬಣ್ಣದ ಹೂವ ಉಬ್ಬೂ ತಗ್ಗು ಸೀರೆ ಮುಚ್ಚಿದ ಬಳ್ಳೀಹಂಗೆ ಬಳಕೋ ಮೈನ ಮಾಂಸದಂಥ ಹಣ್ಣಿನ ಮಣ್ಣಿನ ಗೂಂಬೇನ್ನೋಡಿ ಜೊಲ್ಲು ಸುರಿಸಿ  ||ಸೌಂ|| ಕಾಲಗೆಜ್ಜೆ ಹೆಜ್ಜೆ ನುಡಿಗೆ ಕೈಯಿಬಳೆ ಮೋಡಿದನಿಗೆ ಬೆಚ್ಚಿ ಬಿದ್ದು ಹುಚ್ಚಾಗೆದ್ದು ಕಣ್ಣಿಂದ್ತಲೆಗೆ ತಲೆಯಿಂದ್ಮೈಗೆ ಮೈಮನಕೆಲ್ಲಾ ಮದಿರೆ […]

#ಕವಿತೆ

ಇಲ್ಲೇ ಇರಬೇಕನಸತೈತೆ

0
Latest posts by ವೃಷಭೇಂದ್ರಾಚಾರ್‍ ಅರ್ಕಸಾಲಿ (see all)

ಇಲ್ಲೇ ಇರಬೇಕನಸತೈತೆ, ಇಲ್ಲೇ ಬಾಳಬೇಕನಸತೈತೆ ಎಳೇ ಬಿಸಿಲು ಕಾಸಿಗೊಂತ, ಬೆಳೆಯೋ ಪೈರು ನೋಡಿಕೊಂತ ಹೂವು ಹೂವು ಮೂಸಿಗೊಂತ, ಹಣ್ಣ ರಸವನಿಂಟಿಗೊಂತ ಮ್ಯಾಲಿನ ಸಿಪ್ಪೆ ಸುಲಕೋಂತ, ಬಾಳೇ ಹಣ್ಣ ನುಂಗಿಕೊಂತ ಮಲೇ ಮಲೇನೇರಿಕೊಂತ ಹಳ್ಳಕೊಳ್ಳದಾಗ ಹಾವಾಡಿಕೊಂತ ಹಸರ ಹಾಸಿಗೀ ಒರಗಿಕೊಂತ ಹಳದೀ ಕೆಂಪು ಹೊದ್ದುಕೊಂತ ಪಕಳೆ ಪಕಳೆ ಬಿಚ್ಚಿಗೊಂತ ಹೂವಿನ ಹುಡಿ ಹಚ್ಚಿಗೊಂತ ಮೈಯಲಿ ಮನಸು ಹೊಸೆದುಕೊಂತ […]

#ಕವಿತೆ

ಏನೋ ಬೇಡ್ತಾದ ಜೀವಾ

0
Latest posts by ವೃಷಭೇಂದ್ರಾಚಾರ್‍ ಅರ್ಕಸಾಲಿ (see all)

ಉಣ್ಣಾಕ್ಕೆತೆ ಉಡಾಕೈತೆ ತಿನ್ನಾಕೈತೆ ತೊಡಕೈತೆ ಏನೋ ಬೇಡ್ತಾದ ಜೀವಾ ಸಾಲ್ದು ಅಂತಾದ ಜೀವಾ || ನೋಡಾಕೈತೆ ಕೂಡಾಕೈತೆ ಮುಟ್ಟಾಕೈತೆ ಮೂಸಾಕೈತೆ ದುಡಿಯಾಕೈತೆ ಪಡೆಯಾಕೈತೆ ಇಡಾಕೈತೆ ಕೊಡಾಕೈತೆ ಗಟ್ಟಿ ಮುಟ್ಟಾ ಗೂಳ್ಯಂಗೈತೆ ಸ್ವತಂತ್ರೈತೆ ಗಾಳ್ಯಂಗೈತೆ ನಕ್ಕೂ ನಕ್ಕೂ ಅರಳತೈತೆ ಅತ್ತು ಅತ್ತು ಮಂಚಗೊಂತೈತೆ || ಏನೋ || ಓದಾಕೈತೆ ತಿಳಕೊಂದೈತೆ ವಾದಕ್ಕೈತೆ ಬೋಧಕೈತೆ ಬಂಧು ಬಳ ಎಲ್ಲಾ […]

#ಕವಿತೆ

ಪ್ರೇಮ ದೂತ

0
Latest posts by ವೃಷಭೇಂದ್ರಾಚಾರ್‍ ಅರ್ಕಸಾಲಿ (see all)

ಯಕ್ಷಿಯನ್ನು ತೊರೆದಂದು ಯಕ್ಷ ಕಳಿಸಿದ್ದ ಮೇಘ ದೂತ ಪತ್ರ ಒಯ್ಯಲಿಕೆ ದಾರಿಯಿಲ್ಲದಿತ್ತಾಗ ಭಾವ ದೂತ ಅಕ್ಷರಕ್ಷದ ಯಕ್ಷ ಲೋಕವನು ಪತ್ರ ತೋರದೇನು ರಕ್ತ ರಕ್ತ ಉಸಿರಿಸುವ ರಾಗ ಅನುರಕ್ತಿ ಹರಿಸದೇನು ದೇಹ ದೂರದಲಿ ಇದ್ದರೇನು ಈ ದಾಹಕೆಲ್ಲಿ ದೇಹ ಮನೋಲೋಕದಲಿ ಬರೀ ಭಾವ ಬೆಳದಿಂಗಳ ಪ್ರಭಾವ ಭಾವ ಲೋಕದಲಿ ವಿಹರಿಸುವುದು ಕೆಲ ಭಾವುಕರಿಗೆ ಸಾಧ್ಯ ದೇಹತೃಷೆಯ […]