Home / ನಾನು ಬರುತ್ತೇನೆ ಕೇಳು

Browsing Tag: ನಾನು ಬರುತ್ತೇನೆ ಕೇಳು

ನೀವು ನಗೆ ದೀವಟಿಗೆಗಳನ್ನು ಖರೀದಿಸುತ್ತೀರಾ? ನೀವು ಚಿಗಿತ ಆಸೆಗಳನ್ನು ಖರೀದಿಸುತ್ತೀರಾ? ನೀವು ಕುಪ್ಪಳಿಸುವ ಕನಸುಗಳನ್ನು ಖರೀದಿಸುತ್ತೀರಾ? ಹಾಗದರೆ ನಮ್ಮಲ್ಲಿಗೆ ಬನ್ನಿ. ನಮ್ಮಲ್ಲಿ ಲಾಟರಿ ಟಿಕೇಟು ಮಾರುವ ಪುಟ್ಟ ಹುಡುಗರಿದ್ದಾರೆ. ಕಣ್ಣಲ್ಲೆ ಕ...

‘ಪ್ರೀತಿ’ ಅದೇನು? ಎಂದು ಯಾಕೆ ಕೇಳುತ್ತೀರಿ? ಕಡಲನ್ನು ನೋಡಿದ್ದೀರಾ? ಹಾಗಾದರೆ ಸುಮ್ಮನಿರಿ. ‘ಪ್ರೀತಿ’ ಪರಿಚಯಿಸಿ ಅಂದಿರಾ? ತುಂಬಾ ಸುಲಭ. ಒಮ್ಮೆ ಆಗಸವನ್ನು ಕಣ್ಮುಂದೆ ಕರೆಯಿರಿ. ‘ಪ್ರೀತಿ’ ಪ್ರಿಯವಾಗುತ್ತದೆ. ಯಾಕೆಂದರೆ ಅದಕ್ಕೆ ಬಣ್ಣವಿದೆ, ರ...

(ಪೂರ್ವಾರ್ಧ) ಯಾರಲ್ಲಿ? ಯಾರಿದ್ದೀರಿ? ಬಂದಿದ್ದೇನೆ. ಬಾಗಿಲು ತೆಗೆಯಿರಿ. ಈತನಕ ಇದ್ದಳು, ಈಗಿಲ್ಲ ಎಂದರೆ ಹೇಗೆ ನಂಬಲಿ? ಕಿಟಕಿಗಳ ತೆರೆದುಕೊಳ್ಳಿ ಬಾಗಿಲುಗಳ ತೆರೆದುಕೊಳ್ಳಿ ಬಂದಿದ್ದೇನೆ, ಕರೆದುಕೊಳ್ಳಿ. ಹೌದು, ಇಲ್ಲೆ ಈ ಕಿಟಕಿಯ ಬಳಿ ಕುಳಿತು ...

ಈ ಒಂದು ಕ್ಷಣದ ಹಿಂದೆ…. ನಿನ್ನ ಬಾದಾಮಿ ಕಣ್ಣುಗಳ ಪರಿಚಯ ನನಗಿರಲಿಲ್ಲ. ನಿನ್ನ ಬೆವರಿನ ಪರಿಮಳಕ್ಕೆ ನನ್ನ ಮೂಗು ಅರಳುತ್ತದೆಯೆಂದು ನನಗೆ ಗೊತ್ತಿರಲಿಲ್ಲ. ಈ ಒಂದು ಕ್ಷಣದ ಹಿಂದೆ…. ನಿನ್ನ ಬೆಚ್ಚನೆಯ ಎದೆಯಲ್ಲಿ ಮರೆತ ಸಂಗತಿಗಳಿರುತ್ತವೆ ಎಂದು ನನ...

ಕನಸು, ಕಾಮನಬಿಲ್ಲಿನಲ್ಲಿ, ಜೂಗಳಿಸುವ ಗಿಡಮರ ಬಳ್ಳಿ ಹೂವಿನಲ್ಲಿ, ಚುಕ್ಕಿ ಚಂದ್ರಮರ ನಗೆ ಬೆಳದಿಂಗಳಿನಲ್ಲಿ, ಹೊರಳುವ ಅಲೆಯ ಏರಿಳಿತ ಲಯಬದ್ಧ ಸಂಗೀತದಲ್ಲಿ, ಮಗ್ಗುಲಾದ ಮುಂಜಾವಿನ ಅರಳು ನೋಟದ ಬೆಳಕಿನಲ್ಲಿ, ಚಿಲಿಪಿಲಿ ಸಂಗೀತದಲ್ಲಿ ಮುಕ್ಕಳಿಸಿ ನಗ...

೧ ಅಂಗಳದ ತುಂಬಾ ಮುತ್ತು ಪೋಣಿಸಿದ ಹಾಗೆ ಚುಕ್ಕಿಗಳ ಚಿತ್ತಾರ…. ಚಿತ್ತಾರದಲ್ಲಿನ ಚೌಕಗಳಲ್ಲಿ ನೀಲಿ, ಬಿಳಿ, ಗುಲಾಬಿ, ನೇರಳೆ ರಂಗುಗಳ ಕಲಸು ಮೇಲೋಗರ. ಭಾವಗಳ ಆಳ ಬಣ್ಣಗಳ ಮೇಳ ಚಿತ್ರದ ಜೀವಾಳ. ೨ ಪರಿಕರಗಳ ಅಭಾವ ಚಿತ್ರ ಪೂರ್ಣಗೊಳಿಸಲಾಗಲಿಲ್ಲ. ಮಾ...

ನನ್ನೆಲ್ಲಾ ಪದ್ಯಗಳಲ್ಲಿರುವಂತೆ ಇಲ್ಲೂ ತಾರೆ, ಮೋಡ, ಗಾಳಿ, ಕಡಲು, ಸೂರ್ಯರಿದ್ದಾರೆ. ನಿನಗಿಷ್ಟವಾದರೆ ಓದು ಒತ್ತಾಯವಿಲ್ಲ ಇಷ್ಟವಾಗದಿದ್ದರೆ ಬೇಡ ಕಿಂಚಿತ್ತೂ ಕೋಪವಿಲ್ಲ. ಆದರೆ ನಾನು ಪ್ರೀತಿಸುವ ಗಾಳಿ, ಮೋಡ, ತಾರೆಯರನ್ನು ನಿಂದಿಸಬೇಡ. ಅವರ ಬಗ್...

೧ ಅವನ ಕಣ್ಣಲ್ಲಿ… ಬೆಟ್ಟಗಳು ಬೆಳೆಯುತ್ತಿದ್ದವು ತಾರೆಯರು ಹೊಳೆಯುತ್ತಿದ್ದವು. ಬಣ್ಣಗಳು ಅರಳುತ್ತಿದ್ದವು. ಮೋಡಗಳು ಹೊರಳುತ್ತಿದ್ದವು. ಮಳೆ ಸುರಿಯುತ್ತಿತ್ತು. ಹೊಳೆ ಹರಿಯುತ್ತಿತ್ತು. ಹಗಲು ಉರಿಯುತ್ತಿತ್ತು. ಇರುಳು ತಂಪೆರೆಯುತ್ತಿತ್ತು. ನನಗೊ...

ಆಕಾಶ ಇಬ್ಬನಿಯ ಹಾಗೆ ಕರಗುತ್ತಲಿದೆ. ಸೂರ್ಯ ಬಾವಲಿಯಾಗಿದ್ದಾನೆ. ಬೆಟ್ಟಗುಡ್ಡ, ಕಣಿವೆ-ಕಂದರಗಳು ಚಂದಿರನನ್ನು ನುಂಗುತ್ತಲಿವೆ. ಚುಕ್ಕಿಗಳ ಕಂಗಳಿಗೆ ಪೊರೆ ಬಂದಿದೆ. ಮೋಡಗಳು ರೆಕ್ಕೆ ಕಟ್ಟಿಕೊಂಡು ವಲಸೆ ಹೋಗುತ್ತಿವೆ. ಕಪ್ಪನ್ನು ಹೊದ್ದ ರಸ್ತೆಗಳು...

ಕಡಲ ಕಪ್ಪೊಳಗೆ ನಕ್ಷತ್ರಗಳು ಅರಳಿದ್ದವು ಒಂಟಿ ಮೋಡಗಳು ರೆಕ್ಕೆ ಬೀಸುತ್ತಿದ್ದವು, ಚಂದಿರ ಈಸುತ್ತಿದ್ದ. ಸಾವಿರ ಸಾವಿರ ಹಳ್ಳಕೊಳ್ಳಗಳು ಕಡಲನ್ನು ಹೆಣೆದವು. ಅದೇ ಕಡಲು ಹೊಳೆಯಾಗಿ ಹಾಳೆಯ ಮೇಲೆ ಹನಿದು, ಹರಿದು ಪದ್ಯವಾಯಿತು. ಕಪ್ಪು ಕಡಲ ಮೊಗದಲ್ಲಿ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...