ಯಾಕೆ?

ಈಗೀಗ ಒಂದೇ ಯೋಚನೆನನ್ನೊಳಗೆ.ಬದಲಾದ ಸಂತೋಷಗಳಲ್ಲಿಬದಲಾದ ನೋವುಗಳಲ್ಲಿನಾನು ಬದಲಾಗಿದ್ದೇನೆಯೆ? ನನ್ನ ಪ್ರೀತಿಯ ಬಗ್ಗೆಯೆಗಾಢ ಅನುಮಾನನಿನ್ನ ಕಣ್ಣೊಳಗಿನ ದುಃಖಗೆಲ್ಲಲಾಗಿಲ್ಲ ಯಾಕೆ? ಬಣ್ಣದ ಹಾಗೆಬೆಳಕಿನ ಹಾಗೆನುಣುಚಿ ಹೋಗುತ್ತಿದ್ದೀಯೆಯಾಕೆ? ಯಾಕೆ? ನೀನು ಕೇವಲಹಸಿ-ಬಿಸಿ ರಕ್ತಮಾಂಸದಮುದ್ದೆಯಾಗಿದ್ದಿದ್ದರೆಎಂದೋ ಹೋಗುತ್ತಿದ್ದೆಹಿಂದಿರುಗಿ ನೋಡದೆ ಆದರೆ ನೀನುಪರಿಮಳಿಸುವ...

ನನಗೆ ಗೊತ್ತಿರಲಿಲ್ಲ….

೧ ನಾವು ಪುಟ್ಟ ಹುಡುಗಿಯಾಗಿದ್ದಾಗ ಆಕಾಶಗೊಳಗೆ ಬೆಂಕಿಯಂತಹ ನೋವಿದೆಯೆಂದು ಗೊತ್ತಿರಲಿಲ್ಲ. ಮಳೆ ಸೂರ್ಯನ ಕಣ್ಣೀರು ಎಂದು ಗೊತ್ತಿರಲಿಲ್ಲ. ಗಡಗಡ ಎಂದು ಭೂಮಿ ನಡುಗುವುದು ಅವಮಾನದಿಂದ ಎಂದು ಗೊತ್ತಿರಲಿಲ್ಲ. ಗೊತ್ತಿದ್ದರೆ…. ಈಡೇರದ ಆಸೆಗಳ ಮೇಲೆ ಅಷ್ಟೊಂದು...

ಪ್ರೀತಿ ಸತ್ತ ಮನೆಯಲ್ಲಿ

ಗಂಡ ಹಳೆಯ ಪ್ರೇಯಸಿಯ ನೆನಪುಗಳನ್ನು ಎದೆಗೊತ್ತಿಕೊಂಡು ಸಂತೈಸುತ್ತಿದ್ದಾನೆ. ಹೆಂಡತಿ- ಒಂಟಿ ಬಾವಲಿಯ ರೆಕ್ಕೆ ಬಡಿತಗಳನ್ನು ಎಣಿಸುತ್ತಿದ್ದಾಳೆ. ಗೋಡೆಗಳು ಪಿಸುಗುಟ್ಟುತ್ತಿವೆ ಗಂಟಲಲ್ಲಿ ಪ್ರೀತಿ ಸತ್ತಿದೆ ಮನೆಯಲ್ಲಿ. ಗಂಡ ಸವೆದ ಕನಸುಗಳನ್ನು ಗುಡ್ಡೆಹಾಕಿ ಬೆಂಕಿ ಹಚ್ಚುತ್ತಿದ್ದಾನೆ. ಹೆಂಡತಿ-...

ಒಳಗೊಂದು ನದಿಯಿದೆ

ನಿನ್ನ ಒಳಗೊಂದು ನದಿಯಿದೆ ನನ್ನ ಕಿವಿ ಹೇಳಿದೆ- ಅದಕ್ಕದರ ಕಲಕಲ ಕೇಳಿಸುತ್ತಿದೆ. ನಿನ್ನ ಒಳಗೊಂದು ನದಿಯಿದೆ ನನ್ನ ನಾಲಗೆ ಹೇಳಿದೆ- ನದಿಯ ನೀರು ಸಿಹಿಯಾಗಿದೆ. ನಿನ್ನ ಒಳಗೊಂದು ನದಿಯಿದೆ ನನ್ನ ಮೂಗು ಹೇಳಿದೆ- ನದಿಯೊಳಗೆ...

ನನ್ನ ಕವಿತೆ

೧ ಕವಿತೆ ಹುಟ್ಟುವುದು ಮಹಲಿನಲ್ಲಲ್ಲ, ಮುರುಕು ಜೋಪಡಿಗಳಲ್ಲಿ. ಕವಿತೆ ಹುಟ್ಟುವುದು ಝಗಝಗಿಸುವ ದೀಪಗಳ ಬೆಳಕಿನಲ್ಲಲ್ಲ ಬುಡ್ಡಿ- ಬೆಳಕಿನ ಮಿಡುಕಿನಲ್ಲಿ. ಕವಿತೆ ಹುಟ್ಟುವುದು ಕಲ್ಪನೆಯ ಮೂಸೆಯಲ್ಲಲ್ಲ ದೈನಂದಿನ ಘಟನಾವಳಿಗಳಲ್ಲಿ. ಕವಿತೆ ಹುಟ್ಟುವುದು ತುಂತುರುಮಳೆಯಲ್ಲಲ್ಲ ನೊಂದವರ ಕಣ್ಣೀರಿನಲ್ಲಿ....

ಹುಡುಗಿ ದಿನಚರಿ ಬರೆಯುತ್ತಾಳೆ

ಹುಡುಗಿ ದಿನಚರಿ ಬರೆಯುತ್ತಾಳೆ. ಸುಂದರ ಹಗಲುಗಳ ಇಂಚಿಂಚನ್ನೂ ವರ್ಣರಂಜಿತ ಪುಟಗಳಲ್ಲಿ ಸೆರೆಹಿಡಿಯುತ್ತಾಳೆ. ನೂರೆಂಟು ಬಾರಿ ಯೋಚಿಸಿದರೂ ಕರಾಳ ರಾತ್ರಿಯ ಬಗ್ಗೆ ಒಂದೇ ಒಂದು ಸಾಲು ಬರೆಯಲಾಗದೆ ಮಿಡುಕುತ್ತಾಳೆ. ಕಪ್ಪೆಲ್ಲವನ್ನೂ ಕಂಗಳಲ್ಲೆ ತುಂಬಿಕೊಂಡು ಶಬ್ದಗಳಿಗಾಗಿ ತಡಕಾಡುತ್ತಾಳೆ....

ಹೇಳಲೇಬೇಕಾದ ಮಾತುಗಳು

ಹೇಳಬಾರದು, ಅಂದುಕೊಂಡರೂ ದಿಗ್ಗನೆ ಎದೆಗೆ ಒದ್ದು ದುಡುದುಡು ಓಡಿಬಂದು ಗಂಟಲಲ್ಲಿ ಗಕ್ಕನೆ ಕೂತು ಹೊರಳಿ-ತೆವಳಿ ನಾಲಿಗೆಯ ತುದಿಗೆ ಬಂದು ನಿಂತಾಗ ಕಿಕ್ಕಿರಿದ ಸಭಾಂಗಣದಲ್ಲಿ ಹೆಜ್ಜೆತಪ್ಪಿದ ನರ್ತಕಿಯಂತೆ ಗೆಜ್ಜೆ ಧ್ವನಿಗಳೂ ಅಸ್ಪಷ್ಟ ಹಾವ ಭಾವಗಳು ಮಾತ್ರ...

ನವ್ಯ

ಅದೇ ನೆಲ ಅದೇ ಜಲ ಎದೆ ಸೀಳಿ ಹೊರಬಂದ ಚಿಗುರುಗಳ ಮತ್ತದೇ ಹಳೆಯ ಬೀಜದ ಫಲ ಅಲ್ಲಿ…. ಇಲ್ಲಿ…. ಗಾಳಿಗುಂಟ ತೇಲಿಬಂದ ಹೊಸತನದ ವಾಸನೆ ಕುಡಿದು ಅಮಲಿನಲ್ಲಿ ತಲೆಕುಣಿಸಿ ತೊನೆದಾಡುವ ಶೈಲಿ- ಹಳೆಯದನ್ನೆ ಹೊಸದಾಗಿ...

ಯುದ್ಧ

ನಾನು ನನ್ನ ದೇಶದ ಗಡಿಯನ್ನು ಕೊಳೆಯದ ಹೆಣಕ್ಕೆ ಹೋಲಿಸುತ್ತೇನೆ. ನಿತ್ಯ ಕಾವಲು ಕಾಯುವ ನೂರು ಕಣ್ಣುಗಳಿಗಾಗಿ ದುಃಖಿಸುತ್ತೇನೆ. ಹಸಿರು ಉಸಿರಾಡದ ಮರಗಳಿಗಾಗಿ ಗೂಡು ಕಟ್ಟದ ಹಕ್ಕಿಗಳಿಗಾಗಿ ಬೇವನ್ನೆ ನೆಚ್ಚಿ ಸಾಯುವ ಕೋಗಿಲೆಗಳಿಗಾಗಿ ದುಃಖಿಸುತ್ತೇನೆ. ನೀರವತೆಯಲ್ಲಿ...

ಕುದುರೆ ಮತ್ತು ಮುತ್ತುಗಳು

ಮುತ್ತಿನಂತಹ ಅಕ್ಕಂದಿರಿಬ್ಬರನ್ನು ಕುದುರೆಯೊಂದು ಕೆಡವಿ ಕಂಗೆಡಿಸಿದ ಸುದ್ದಿ ನಿಮಗೂ ತಲುಪಿರಬಹುದು ಅಕ್ಕಂದಿರೇ ಹುಚ್ಚುತನದಿಂದ ಕುದುರೆಯನ್ನು ಕೆಣಕಿ ಕಂಗೆಟ್ಟರೆಂದು ಹಬ್ಬಿಸಿದ ಸುದ್ದಿಯನ್ನು ನೀವು ನಂಬಿರಲೂಬಹುದು. ಬಯಲೊಳಗೆ ಬಯಲಾದರಂತೆ ಅಕ್ಕಂದಿರು ಧೂಳೊಳಗೆ ಮೈ ಮುಚ್ಚಿಕೊಂಡವರನ್ನು ಮೆರವಣಿಗೆಯಲ್ಲಿ ಕುಣಿಸಿದರಂತೆ...