Home / Vrushabendrachar Arkasali

Browsing Tag: Vrushabendrachar Arkasali

ಕಚ್ಚಾ ಸ್ವಾಮೀ ಬಹಳ ಕಚ್ಚಾ ಕಚ್ಚಾ ಬರೀ ಕಚ್ಚಾ ತೆರೆದು ನೋಡಿದರೂ ಕಚ್ಚಾ ಅರೆದು ನೋಡಿದರೂ ಕಚ್ಚಾ ಕೊರೆದು ನೋಡಿದರೂ ಕಚ್ಚಾ ಬರೆದು ನೋಡಿದರೂ ಕಚ್ಚಾ ಆಕಾಶ್ದಾಗೆ ಚುಕ್ಕೀ ಎಣಿಸಾಕ ಸೃಷ್ಟೀ ಚೆಂದಾ ಬಣ್ಣಿಸಿ ಗುಣಿಸಾಕ ಬಾಗಿಲು ಬಾಗಿಲು ಬಡಿದು ಕರೆದ...

ಹಾಲಿದ್ದರೂ ಪಾತ್ರೆ ಇಲ್ಲವಲ್ಲಾ ಪಾತ್ರೆ ಇದ್ದರೂ ಗಾತ್ರವಿಲ್ಲವಲ್ಲಾ ಸಕಲ ಸಂಬಾರವಿದೆ ಅಡಿಗೆಯವರಿಲ್ಲ ಒಲೆಯೇಸೋ ಇದೆ ಉರಿಯೇ ಇಲ್ಲವಲ್ಲಾ. ಕಟ್ಟಿಗೆಗಳಿದ್ದರೂ ಕಡ್ಡಿ ಇಲ್ಲವಲ್ಲಾ ಭಾವಗಳಿದ್ದರೂ ಬಂಥುರ ಇಲ್ಲವಲ್ಲಾ. ರಾಗವಿದ್ದರೂ ಮಧುರ, ತಾಳತಪ್ಪಿ...

ಹಣ್ಣೊಂದು ಇತ್ತು ಮರದಿಂದ ಬಿತ್ತು ಮಣ್ಣಿನಲಿ ಬಿದ್ದು ಹೋಯ್ತು ಸಣ್ಣಾಗಿ ಸೋತು ಸುದ್ದಾಗಿ ಮತ್ತೆ ಕಣ್ಣಿನಲಿ ನೀರು ಬಂತು ಬೆಳೆದಂತೆ ಕಾಯಿ ತಾ ಭಾರವಾಯ್ತು ಬೆಳೆದದ್ದೆ ಮುಳುವದಾಯ್ತು ತಳೆದೀತೆ ಭಾರ ತೆಳ್ಳನೆಯ ತುಂಬು ಕಳವಳದಿ ತಡೆಯದಾಯ್ತು ತೊಯ್...

ಆಗಾಗ ಬರ್ತೀರು ರೋಗಣ್ಣಾ ನಿಜವಾದ ಗುರುವೆ ನೀನಾಗಣ್ಣಾ ಜೀವದಾಗ ಭಯವನ್ನು ಹುಟ್ಸೀ ಮನಸ್ಸನ್ನು ದೇವ್ರಕಡೆ ಮುಟ್ಸೀ ಮೈಯನ್ನು ಮೆತ್ತಗೆ ಮಾಡ್ತಾ ಮತಿಯನ್ನ ಜೊತೆಯಲ್ಲಿ ಕಾಡ್ತಾ ಹಮ್ಮನ್ನ ಬಿಮ್ಮನ್ನ ಕಳದೂ ಮನಸ್ಸಾಗೆ ಜೀವಸೂತ್ರ ಹೊಳದು ಮುಂದೋಡೋ ವೇಗ...

ಎಲೆ ಮಾನವ ನವಮಾನವ ಆಥುನಿಕತೆ ದಾನವಾ ಎತ್ತ ನಿನ್ನ ಪಯಣ ಮತಿಯ ಮನವ ಮರೆತ ಮಾನವಾ ||೧|| ದೇವನೊಂದು ಸೃಷ್ಟಿಸಿರಲು ನೀನೆ ಬೇರೆ ಗೈಯುವೇ ನಿನ್ನ ನೀನು ಕಾಯ್ದುಕೊಳಲು ನಿನಗೆ ನೀನೆ ಸಾಯುವೇ ||೨|| ನಡೆದು ದುಡಿದು ತಿನ್ನು ಬಾಳೊ ಕೈಕಾಲ್ಗಳ ಬಳಸುತ ...

ಅರವಿಂದ ಅರವಿಂದ ನಂದನದ ಕಂದ ಎಲ್ಲರೆದೆ ಬೆಳಗಿಸುವ ಹೃದಯಾರವಿಂದ ಬಾಲ್ಯವನು ಕಳೆದದ್ದು ಬಿಳಿಯ ದೇಶದಲಿ ಯೌವನವು ಬೆಳಗಿದ್ದು ಭಾರತಕೆ ಮರಳಿ ಚಿಕ್ಕಂದಿನಿಂದಲೇ ಮೇಧಾವಿತನವು ಅಚ್ಚರಿಯ ಮೂಡಿಸಿತು ಅಂತಃಚೇತನವು ತಂದೆ ಬಿಳಿಯರ ರೀತಿ ತಾಯಿ ಭಾರತ ಗರತಿ ...

ತೋಟಗಾರನು ನೀರನ್ನೆರೆಯುತ ಸಸಿಯನು ಸಲಹಿದ ಮನವಿಟ್ಟು ಸಸಿಯು ಸ್ಥಳಾಂತರ ಹೊಂದುತ ಬೆಳೆಯಿತು ಬೆಳೆಸಿದ ಆತನ ನೆನಪಿಟ್ಟು ಯಾವ ಯುವುದೋ ನೀರನು ಕುಡಿಯುತ ಗಿಡವದು ಬೆಳೆಯಿತು ಮರವಾಗಿ ಮಾಲಿಯು ಕಂಡನು ತನ್ನಯ ಗಿಡವನು ಪ್ರೇಮದಿ ತಬ್ಬಿದ ಬೆರಗಾಗಿ ಗುರುತ...

ಬಿಳಿಸೀರೆ ಮುತ್ತೈದೆ ನಿನಗೇನು ಬಂದೈತೆ ಮನೆ ಬಿಟ್ಟು ಹೊರಗೇ ಹೋಗ್ತಿ ಯಾಕೆ ನಿನ್ನಿಂದ ಮನಿಚೆಂದ ಮನಿಬಾಳು ಆನಂದ ಪರದೇಶಿ ಮಾಡ್ಬಿಟ್ಟು ಹೋಗ್ತಿ ಯಾಕೆ ಆಕಾಶಕ್ಕೆ ಚಂದ್ರಾಮಾ ಭೂಷಣಾಗಿ ಹೊಳಿವಂತೆ ಈ ಮನಿಯ ನೀನೇs¸ ಬೆಳಗುವಾಕೆ ಗ್ಯಹಲಕ್ಷ್ಮಿ ನೀ ಹೋದ...

ಮಣ್ಣು ಮಣ್ಣೆಂದು ಹಳಿದರೆ ಬಂತೆ ಎಲ್ಲಿಂದ ಮರ ಹುಟ್ಟಿ ಬೆಳೆಯಿತಯ್ಯಾ ಸಾವು ಸಾವೆಂದು ಅಂಜೀಕೆ ಯೇಕೆ ಜೀವವು ಹುಟ್ಟಿದೆ ಸಾವಿನಿಂದಯ್ಯ || ನಿದ್ದೆ ಮಬ್ಬಂತಾ ಗೊಣಗುವಿಯಾಕೆ ನಿದ್ದೇನೆ ಇಲ್ದಂಥ ಎಚ್ಚರೆಂತು ದೌರ್ಬಲ್ಯ ದೌರ್ಬಲ್ಯ ಎಂದೇಕೆ ಕೊರಗುವಿ ದೆ...

ಎಲ್ಲಿಂದ ಬರ್ತೀಯೊ ಯಾವ ಗಳಿಗೆ ಬರ್ತೀಯೊ ಯಾವ್ಮಾತ್ನಾಗೆ ಹೊಳಿತಿಯೊ ತಿಳಿಯದಲ್ಲಾ ಹೊರಗೆಲ್ಲ ಹುಡುಕಿದ್ದೆ ಹುಡುಹುಡುಕಿ ದಣಿದಿದ್ದೆ ಯಾವಾಗ್ಲೋ ಒಳಬಂದು ಕುಂತಿಯಲ್ಲಾ ||೧|| ಹೆಣದಾಗೆ ಚೈತನ್ಯ ಮೈತುಂಬಿ ನಿಂತಂಗೆ ತುಂಬ್ಕೊಂಡೆ ಬಂದಿತ್ತು ಯಾವ್ದೋ ಶ...

1...1617181920...28

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...