ಮತ್ತೊಮ್ಮೆ ಬನ್ನಿ

ಗುಂಡ ಪ್ಯಾರಾಚೂಟ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ಗಿರಾಕಿಯೊಬ್ಬ ಪ್ಯಾರಾಚೂಟ್ ಕೊಳ್ಳಲು ಬಂದ. ಪ್ಯಾರಾಚೂಟ್ ಕುರಿತು ಮಾಹಿತಿ ನೀಡಿದ ಕೊನೆಯಲ್ಲಿ ಗಿರಾಕಿ ಕೇಳಿದ. "ವಿಮಾನದಿಂದ ದುಮುಕುವಾಗ ನಾವು ಹಾಕಿಕೊಂಡ ನಿಮ್ಮ ಪ್ಯಾರಾಚೂಟ್ ಆನ್ ಆಗದಿದ್ದರೆ ಏನು...

ಉಚಿತ

ತಿಮ್ಮನ ಮನೆ ಹಸು ತುಂಬಾ ಹುಷಾರಿಲ್ಲದೇ ಸಾಯುವ ಪರಿಸ್ಥಿತಿ ತಲುಪಿತು. ತಿಮ್ಮ ತಿರುಪತಿ ತಿಮ್ಮಪ್ಪನಿಗೆ ಹರಕೆ ಹೊತ್ತು ಹಸು ಬದುಕಿದರೆ ಹಸುವನ್ನು ಮಾರಿ ಬರುವ ಹಣವನ್ನು ಹುಂಡಿಗೆ ಹಾಕುವುದಾಗಿ ಹರಕೆ ಹೊತ್ತು. ಹರಕೆ ಫಲವೆಂಬಂತೆ...

ನೀನೂ

ತಿಮ್ಮ ಊರಿಗೆ ಹೊರಟಾಗ ರಾತ್ರಿಯಾಗಿತ್ತು. ಯಾವುದೇ ಬಸ್ಸು ಇರದ ಕಾರಣ ಆಟೋ ಮಾಡಿಕೊಂಡು ಹೊರಟ, ಊರು ತಲುಪಿದ ನಂತರ ಛಾರ್ಜ ಎಷ್ಟು ಎಂದು ಕೇಳಿದಾಗ ಆಟೋದವನು "ನೂರು ರೂಪಾಯಿ" ಎಂದನು. ಆಟೋ ಡ್ರೈವರ್‌ಗೆ ತಿಮ್ಮ...

ಅಪರೂಪ

ಗುಂಡ ಆಗುಂಬೆಗೆ ಪ್ರವಾಸಕ್ಕೆ ಹೋಗಿದ್ದ. ಸುತ್ತಲಿನ ಎಲ್ಲಾ ಪ್ರೇಕ್ಷಣೀಯ ಸ್ಥಳ ನೋಡಿದ ನಂತರ ಊಟಕ್ಕಾಗಿ ಹೋಟೆಲ್‌ಗೆ ಹೋಗಿದ್ದ. ಊಟದ ಜೊತೆಗೆ ಮೊಟ್ಟೆ ತರಿಸಿದ. ಊಟದ ನಂತರ ಮೊಟ್ಟೆ ಬಿಲ್ ನೋಡಿ ಗುಂಡ ಬೆಚ್ಚಿ ಬಿದ್ದು....

ಸೈಕಲ್ ಏನಾಯ್ತು?

ಮೇಷ್ಟ್ರು ಪಾಠ ಮಾಡುತ್ತಿದ್ದಾಗ "ಹಿಮ ಪ್ರದೇಶವೊಂದರಲ್ಲಿ ಹುಡುಗನೊಬ್ಬನಿಗೆ ವಿಪರೀತ ಜ್ವರ ಬಂದಿತ್ತು. ಹುಡುಗನು ಸೈಕಲ್‌ನಲ್ಲಿ ಹೋಗುತ್ತಿದ್ದಾಗ ಜ್ವರ ಜಾಸ್ತಿಯಾಗಿ ಹುಡುಗನು ಸತ್ತು ಹೋದನು." ತಿಮ್ಮ ಕೇಳಿದ "ಸಾರ್ ಸೈಕಲ್ ಏನಾಯಿತು?" *****

ಸತ್ತವರು ಯಾರು?

ಶೀಲಾ ಮತ್ತು ಮಾಲಾ ಅವಳಿ ಮಕ್ಕಳು. ಜ್ವರ ಬಂದ ಶೀಲಾಳು ಸತ್ತು ಹೋದಳು. ಮಾಲಾ ಸಂತೆಗೆ ಹೋದಾಗ ಪರಿಚಿತರೊಬ್ಬರು ಕೇಳಿದ್ರು" "ಮೊನ್ನೆ ಸತ್ತಿರುವುದು ಯಾರು? ನೀನಾ ನಿನ್ನಕ್ಕನಾ?" *****

ಕೊನೆಯ ಪುಟ

ತಿಮ್ಮ ತನ್ನ ಹೆಂಡತಿಗೆ ಹೇಳಿದ "ಅತ್ಯಂತ ದುಃಖಕರವಾದ ಕೊನೆಯ ಪುಟಗಳಿರುವ ಪುಸ್ತಕವೊಂದನ್ನು ನಾನಿವತ್ತು ನೋಡಿದೆ." ತಿಮ್ಮನ ಹೆಂಡತಿ ಹೇಳಿದಳು "ಹೌದು ಅದು ಯಾವ ಪುಸ್ತಕ?" ತಿಮ್ಮ ಹೇಳಿದ ನನ್ನ "ಬ್ಯಾಂಕ್ ಪಾಸ್ ಪುಸ್ತಕ" *****

ಕೇಳಿದ್ದೇನು?

ಅಪರಿಚಿತನೊಬ್ಬ ತಮ್ಮನ ಬಳಿ ಹೇಳಿದ "ನಾನು ಕೇಳಿದ್ದು ಯಾವ ಅಂಗಡಿಯಲ್ಲೂ ಸಿಗುತ್ತಿಲ್ಲ... ಇದೆಂಥ ಊರು..?" ತಿಮ್ಮ ಅಚ್ಚರಿಯಿಂದ ಕೇಳಿದ "ಅದೇನನ್ನು ಕೇಳಿದೆ ನೀನು?" ಅಪರಿಚಿತ ಹೇಳಿದ "ಸಾಲ" *****
cheap jordans|wholesale air max|wholesale jordans|wholesale jewelry|wholesale jerseys