ಗುಂಡ ಆಗುಂಬೆಗೆ ಪ್ರವಾಸಕ್ಕೆ ಹೋಗಿದ್ದ. ಸುತ್ತಲಿನ ಎಲ್ಲಾ ಪ್ರೇಕ್ಷಣೀಯ ಸ್ಥಳ ನೋಡಿದ ನಂತರ ಊಟಕ್ಕಾಗಿ ಹೋಟೆಲ್‌ಗೆ ಹೋಗಿದ್ದ. ಊಟದ ಜೊತೆಗೆ ಮೊಟ್ಟೆ ತರಿಸಿದ. ಊಟದ ನಂತರ ಮೊಟ್ಟೆ ಬಿಲ್ ನೋಡಿ ಗುಂಡ ಬೆಚ್ಚಿ ಬಿದ್ದು.

ನಂತರ ಕೇಳಿದ “ಏನು ಇಲ್ಲಿ ಮೊಟ್ಟೆ ಅಪರೂಪವೇ?”

ಅದಕ್ಕೆ ಹೋಟೆಲ್ಲಿನವ ಹೇಳಿದ. “ಇಲ್ಲಾ ಗಿರಾಕಿಗಳೇ ಅಪರೂಪ…”
*****