ಅವರು ಪ್ರೇಮಿಗಳು, ತಮ್ಮ ಪ್ರೇಮದ ಅಮರತೆಯ ಸೂಚಿಸಲು ವೃಕ್ಷದ ಮೇಲೆ ಹೃದಯವನ್ನು ಕೊರೆದು ಅದನ್ನು ಛೇದಿಸುವ ಬಾಣವನ್ನು ಬರೆದು ತಮ್ಮ ಹೆಸರನ್ನು ಕೆತ್ತಿದರು. ವೃಕ್ಷದ ಮೇಲೆ ಅವರ ಕಣ್ಣು ಹಾಯಿದಾಗ ಮರಕುಟಕ ಕೊಕ್ಕಿನಿಂದ ಕೊಕ್ಕಿ ಕೊಕ್ಕಿ ಗೂಡ ಕಟ್ಟಿ ತನ್ನ ಇನಿಯನಿಗಾಗಿ ಕಾಯುತಿತ್ತು. ಹಕ್ಕಿಯ ಮುಂದೆ ಅವರ ಪ್ರೀತಿಗೆ ಪರಾಭವವಾಯಿತು.
*****