Home / Shrinivasa KH

Browsing Tag: Shrinivasa KH

ಸೂರ್ಯ ನೋಡು ಸಂಜೆಯಾಗ್ತಿದ್ಹಾಂಗೆ ಹೋಗಿ ಮಲಕ್ಕೊಂಡುಬಿಡ್ತಾನೆ ಬೆಳಿಗ್ಗೆ ಹೊತ್ತಿಗೆ ಮುಂಚೆ ಎದ್ದು ಬಿಡ್ತಾನೆ ನೀನೂ ಹಾಗೇ ಮಾಡ್ಬೇಕು ಪುಟ್ಟು ಪ್ಲೀಸ್ ಅರ್‍ಲಿ ಟು ಬೆಡ್ ಎಂಡ್ ಅರ್‍ಲಿ ಟು ರೈಸ್ *****...

ಅಮಾವಾಸ್ಯೆಯ ದಿನ ಈ ಚಂದ್ರ ಸಾಮೀ ಗುಟ್ಟಾಗಿ ಏನ್ಮಾಡ್ತಾನಂತೇ ಗೊತ್ತಾ? ಗೊತ್ತು ಕತ್ತಲಲ್ಲೇ ಸೂರ್ಯನ್ಮನೆಗೇ ಹೋಗಿ ಬೆಳದಿಂಗಳ ಕದೀತಾನಂತೆ ನಮ್ಮಮ್ಮಾನೇ ಹೇಳ್ದುಳು. *****...

ನಿನಗೆ ಸೂರ್ಯನಷ್ಟೆ ಮರ್ಯಾದೆ ಬೇಕೂ ಅಂದ್ರೆ ಹದಿನೈದು ದಿವಸ ಹಾಗೇ ಹದಿನೈದು ದಿವಸ ಹೀಗೆ ಹುಣ್ಣಿಮೆಗೊಂದು ದಿನ ಹಸನ್ಮುಖ ಅಮಾವಾಸ್ಯೆಗೆ ಮಂಗಮಾಯ ಇದೆಲ್ಲಾ ಚಾಳೀ ಮೊದಲು ಬಿಟ್ಟುಬಿಡಬೇಕೂ ಚಂದ್ರ. *****...

ಚಂದ್ರ ನಿನಗೆಷ್ಟು ಸಾರಿ ಹೇಳೋದು ಬೇಡ ಹಗಲು ಹೊತ್ತಿನಲ್ಲಿ ಆಕಾಶಕ್ಕೆ ಕಾಲಿಡಬೇಡ ಮೊನ್ನೆ ತ್ರಯೋದಶಿಯ ದಿನ ನನಗೆ ಅದು ನೀನು ಅಂತಲೇ ತಿಳಿಯಲಿಲ್ಲ ನೋಡು.  ಬಿಳಿಚಿಕೊಂಡು ಒಂದು ಮೋಡದ ತುಂಡಿನಂತೆ ಕಾಣುತ್ತಿದ್ದೆ ಎಲ್ಲೋ ಮೂಲೇಲಿ ಹೇಳೋರು ಕೇಳೋರು ಇಲ...

ನನಗೆ ನೀನೂ ಒಂದೇ ಅವನೂ ಒಂದೇ ನಿಮ್ಮ ಜಗಳ ಬೇಡಾಂತಾನೆ ನಿಮ್ಮ ನಿಮ್ಮ ಇಷ್ಟದಂತೆ ಒಬ್ಬನಿಗೆ ಹಗಲು, ಇನ್ನೊಬ್ಬನಿಗೆ ರಾತ್ರಿ ಹಿಸೆ ಮಾಡಿಕೊಟ್ಟಿದ್ದೀನಿ ನೀವುಗಳು ಅಂದುಕೊಂಡಿರೋದು ಈ ಹಗಲು ರಾತ್ರಿಯೆಲ್ಲ ನಿಮ್ಮಿಂದ ಆದ್ರೆ ದಯವಿಟ್ಟು ತಿಳಕೊಳ್ಳಿ ಅದ...

ಸೂರ್ಯ ನೋಡು ನಿನ್ಹಾಗಲ್ಲ ಎಷ್ಟು ಜಾಣ ಕತ್ತಲಾಗೋದರ ಒಳಗೆ ಮನೆಗೆ ಸೇರ್‍ಕೋಳ್ತಾನೆ ಒಂದು ದಿನಾನು ಲೇಟ್ ಮಾಡೋದಿಲ್ಲ ಕತ್ತಲಾದ ಮೇಲೆ ಒಂದು ಕ್ಷಣವು ಆಕಾಶದಲ್ಲಿರೋದಿಲ್ಲ. *****...

ಕಿಟಕಿಯಲ್ಲಿ ಹಣಕಿದ್ದು ಹನಿಮೂನ್ ಗಂಡು ಹೆಣ್ಣನ್ನ ಕದ್ದು ನೋಡೋಕಲ್ಲ ಮಾರಾಯರೆ, ಹೇಳ್ತಿನಿ ಕೇಳಿ ಹೋದದ್ದು ಪಾಪ, ಬೆತ್ತಲೆ ಮಲಗಿದ್ದವರಿಗೆ ಬೆಳದಿಂಗಳ ಹೊದಿಕೆ ಹೊದಿಸೋಕೆ. *****...

ಸೂರ್ಯ ದೇವರೇ, ಇಲ್ಲ ಸ್ವಲ್ಪ ಕೇಳಿ ಇಷ್ಟ ಬಂದ್ಹಾಗೆ ಹನಿಮೂನ್ ಮಾಡೋದು, ಕಷ್ಟಪಟ್ಟು ಹೊಸದಾಗಿ ಮದುವೆಯಾದ ಹೆಣ್ಣು ಗಂಡಿನ ಪಾಳಿ, ಆದರೆ ಈ ಚಂದ್ರಂಗ್ಯಾಕೇಂತ, ರಾತ್ರೆ ಅವರ ಕಿಟಕಿಯಲ್ಲಿ ಹೋಗಿ ಹಣಕೋ ದುಷ್ಟ ಚಾಳಿ? ನೀವಾದರೂ ಸ್ವಲ್ಪ ಬುದ್ಧಿ ಹೇಳಿ ...

ಪಾಪ ಆ ಸೂರ್ಯ ಒಂದೇ ಒಂದು ದಿನ ಕೆಲಸ ತಪ್ಸಲ್ಲ; ಬೆಳಕು ಹರೀತಿದ್ದ ಹಾಗೆ ಹಾಜರು, ಒಂದು ನಿಮಿಷ ಲೇಟ್ ಮಾಡಲ್ಲ ಪರದೇಶಿ ಎಷ್ಟು ಒಳ್ಳೇ ಮನುಷ್ಯ ನೀನಿದೀಯ ನೋಡು ಚಂದ್ರ, ಒಳ್ಳೇ ದರವೇಶಿ ಒಂದೊಂದು ದಿನ ಒಂದೊಂದು ವೇಷ ಎಲ್ಲೋ ಹುಣ್ಣಿಮೆ ಗಿಣ್ಣಿಮ್ಮೆಗೊ...

ಸೂರ್ಯ ನೋಡು ಶಿಸ್ತಿನ ಸಿಪಾಯಿ ಕತ್ತಲಾಗುತ್ತಲೂ ಮಲಗಿ ಹೊತ್ತಿನಂತೆ ಎದ್ದು ಹೊರಟು ಬಿಡುತ್ತೆ ಸವಾರಿ ನೀನಿದೀಯಾ ನೋಡು ಚಂದ್ರ, ರಾತ್ರಿಯೆಲ್ಲಾ ಪೋಲಿ ಸುತ್ತಿ ಬೆಳಗಾದ ಮೇಲೆ ಪತ್ತೆ ಇಲ್ಲದಾಂಗೆ ಎಲ್ಲೋ ಹೋಗಿ ಸಂಜೆವರೆಗೂ ಬಿದ್ದುಕೊಳ್ತೀಯಾ, ಶುದ್ಧ ...

1...1415161718...24

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...