ಯಕ್ಷಿಗಳೂ ತಾಳೆಮರಗಳೂ

ಯಕ್ಷಿಗಳು ಹನ್ನೆರಡು ತಾಳೆಮರ ಹನ್ನೆರಡು ಮರಕ್ಕೊಂದರಂತೆ ಸುಖವಾಗಿದ್ದುವು ಆಹ! ಸುಖವಾಗಿದ್ದುವು ಎಲ್ಲಿಯ ತನಕ ಭಾರೀ ಬಿರುಗಾಳಿ ಹೊಡೆತಕ್ಕೆ ಒಂದು ಮರ ಕಿತ್ತು ಬೀಳುವ ತನಕ ಅಹ! ಕಿತ್ತುಬೀಳುವ ತನಕ ಯಕ್ಷಿಗಳು ಹನ್ನೆರಡು ತಾಳೆಮರ ಹನ್ನೊಂದು...

ಕಾಳಗ

ಇರಿಯಲೆಂದೆ ಕಟ್ಟಿದ ಚಾಕು ಇರಿಯದಿರುವುದೆ ಎದುರಾಳಿಯ ಎದೆಹೊಕ್ಕು ಇರಿದು ತಣಿಯಬೇಕು ರಕ್ತದ ಮಡುವಿನಲ್ಲಿ ಮನುಕುಲದ ರೋಷ ಕಾಯಿಸಿದ ಉಕ್ಕು ಹತ್ತು ಹೇಂಟೆಗಳರಸ ಇನ್ನೆಷ್ಟೋ ಮರಿಗಳ ಮೂಲಪುರುಷ ಇಡಿಯ ಬಯಲನ್ನೆ ಅವಲೋಕಿಸಿ ನಿಂತಿದೆ ಹೇಗೆ ಕತ್ತೆತ್ತಿ...

ಎಲ್ಲಿ ಹೋದಳು ಕತೀಜ?

ಎಲ್ಲಿ ಹೋದಳು ಕತೀಜ, ನನ್ನ ಮಗಳು ಮೀನು ತರುತ್ತೇನೆಂದು ಹೋದವಳು ಬೇಗನೆ ಬರುವೆ ಎಂದವಳು? ಸಂಜೆಯಾಯಿತು ಕೊನೆಯ ಬಸ್ಸೂ ಹೊರಟು ಹೋಯಿತು ಏನು ನೋಡುತ್ತ ನಿಂತಳೊ ಏನೊ- ಸಂತೆಯ ದೀಪಗಳಲ್ಲಿ ಹೊಳೆಯುವ ಬಣ್ಣದ ಲಂಗ...

ಕಾಮತರ ಹೋಟೆಲು

ಹೋಟೆಲುಗಳೇಳುತ್ತವೆ ಹೊಟ್ಟೆಗಳ ಮೇಲೆ ಎದ್ದು ಪೇಟೆ ಪಟ್ಟಣಗಳನ್ನು ಆಕ್ರಮಿಸಿಬಿಡುತ್ತವೆ! ಆದರೆ ನಮ್ಮೂರ ಕಾಮತರ ಹೋಟೆಲು ಮಾತ್ರ ಬೆಳೆದೂ ಬೆಳೆಯದಂತಿದೆ ಇದು ವಸ್ತುಗಳ ಸ್ಥಿತಿಸ್ಥಾಪಕ ಗುಣದಲ್ಲಿ ನನ್ನ ನಂಬಿಕೆಯನ್ನು ಹೆಚ್ಚಿಸಿದೆ ಎಲ್ಲಾ ಕಳೆದು ಹೋಯಿತು ಎಂದಾಗ...

ಕಾರಡ್ಕ

ಕೆಲವು ಸ್ಥಳಗಳ ಹೆಸರುಗಳಿಗೆ ಹಸಿಹುಲ್ಲಿನ ವಾಸನೆ ಮತ್ತು ಈಗ ತಾನೆ ಮಳೆನಿಂತ ಮಣ್ಣಿನ ತೇವಗಳಿರುತ್ತವೆ. ಅಪರಾಹ್ನದ ಇಳಿಬಿಸಿಲಲ್ಲಿ ಮನೆಮುಂದಿನ ಪಾರದರ್ಶಕ ತೋಡಿನಲ್ಲಿ ಕಲ್ಲಿನ ಪಲ್ಲೆಗಳು ಏಡಿಗಳಂತೆ ಮಲಗಿರುವುದನ್ನು ನೆನಪಿಗೆ ತರುತ್ತದೆ. ಪಶ್ಚಿಮದಲ್ಲಿ ಹೊಳೆವ ಸಮುದ್ರದ...

ಫಕೀರಪ್ಪನ ಕತೆ

ಯಾರೂ ಹೇಳಬಲ್ಲರು ಕತೆಗಳನ್ನು. ಆದರೆ ಫಕೀರಪ್ಪನ ಶೈಲಿಯೇ ಬೇರೆ. ಹೇಗೆ ಕೇಳುಗರ ಅಸಕ್ತಿಯನ್ನು ಕೆರಳಿಸಬೇಕು. ಎಲ್ಲಿ ತಡೆಹಿಡಿಯಬೇಕು, ಯಾವಾಗ ವೀಳಯದೆಲೆಗೆ ಎಷ್ಟು ಮೆಲ್ಲಗೆ ಸುಣ್ಣ ಸವರಬೇಕು -ಇದೆಲ್ಲ ಅವನೊಬ್ಬನಿಗೇ ಗೊತ್ತು. ರಾತ್ರಿ ಸರಿಯುತ್ತಿದ್ದಂತೆ ಕತೆಯನ್ನು...

ಕುಂಬಳೆಯ ನಿಲ್ದಾಣ

ಕುಂಬಳೆಯೆಂಬ ನಿಲ್ದಾಣ ಅದು ಬಹಳ ದೊಡ್ದದೇನಲ್ಲ ಮದರಾಸು ಮೈಲು ಜಯಂತಿ ಜನತಾ ಅಲ್ಲಿ ನಿಲ್ಲುವು- ದಿಲ್ಲ. ಇತರ ಗಾಡಿಗಳು ತುಸು ಹೊತ್ತು ತಂಗುವುವು ಜನ ಇಳಿಯುವರು ಹತ್ತುವರು ಎಲ್ಲಿಂದೆಲ್ಲಿಗೊ ಹೋಗುವರು ಕಣ್ಣು ತೆರೆಯುವುದರೊಳಗೆ ಐನೂರು...

ಮರಳಿ ಈ ಚೌಕದಲಿ ನಿಂತು

ಲೋಟ ಮೇಲೇರುವುದು ಲೋಟ ಕೆಳಗಿಳಿಯುವುದು ಒಂದರಿಂದಿನ್ನೊಂದಕ್ಕೆ ಧುಮುಕುವುದು ಭೋರ್ಗರೆವ ಜಲಪಾತ ಪಾರದರ್ಶಕ ಗ್ಲಾಸುಗಳಲ್ಲಿ ತುಂಬಿ ಹರಿಯುವುದು ಗುಳ್ಳೆಯೆಬ್ಬಿಸಿ ಮೂಗಿನ ಹೊಳ್ಳೆಯೆಬ್ಬಿಸಿ ಆದ್ದರಿಂದಲೆ ಅವರಿಗೆ ಹೊಳ್ಳರೆಂದು ಹೆಸರು ಕಳ್ಳರಿಗೆ ಸುಳ್ಳರಿಗೆ ಹುಳ್ಳರಿಗೆ ಎಲ್ಲಿರಿಗೆ ಪ್ರಿಯವಾದವರು ಕಡಿಯೆ...

ಗ್ರಾಮ ಒಂದು ಭೇಟಿ

ಯಾರಿಗೆ ಯಾರು ಬರಕೊಟ್ವ ಉಂಬಳಿ ಈ ಗದ್ದೆ ಬಯಲು ಮನೆ ಮಠ ಅ ಮುದುಕ ಹೊದ್ಡ ಕಂಬಳಿ ? ಎರಡು ತಲೆಮಾರಿಗಿಂತ ಹಿ೦ದಿಲ್ಲದ ಇತಿಹಾಸ ಆದರೂ ಗುಡ್ಡದ ಕೆಂಗಣ್ಣ ದೇವತೆ ಎಲ್ಲವನ್ನೂ ನೊಡಿದೆ ಪಶ್ಚಿಮದ...

ವಿಧಿ

ಹೇಳಿರಲಿಲ್ಲಿವೆ ನಾನು ನಿಮಗೆ ಅವನಿರುವುದೆ ಹಾಗೆ ಅವನ ಕೆಣಕಬೇಡಿರಿ ಎಂದು ಅವನೇನು ಹುಚ್ಚನಲ್ಲ ಹೆಡ್ಡನೂ ಅಲ್ಲ ಪ್ರೀತಿಯ ನೆಪದಲ್ಲಿ ತಲೆ ಸಡಿಲಾದವನಲ್ಲ ವಂಶಪಾರಂಪರ್ಯವಲ್ಲ ಅವನ ಪೂರ್ವಜರಲ್ಲಿ ಹೀಗೆ ಯಾರಿಗೂ ಇದ್ದಿರಲಿಲ್ಲ ಅವನಷ್ಟಕ್ಕೆ ಬಿಟ್ಟರೆ ಅವನು...
cheap jordans|wholesale air max|wholesale jordans|wholesale jewelry|wholesale jerseys