
ತನ್ನ ಕೈಯಿಂದಲೇ ಪ್ರಕೃತಿ ಸೃಷ್ಟಿಸಿ ತೆಗೆದ ಹೆಣ್ಣಮುಖ ನಿನ್ನದು. ನೀ ನನ್ನ ಪ್ರೇಮಕ್ಕೆ ಸ್ವಾಮಿ ಸತಿ ಎರಡೂ. ಹೆಣ್ಣ ಕೋಮಲ ಹೃದಯ ಇದ್ದರೂ ನಿನಗಿಲ್ಲ ಹುಸಿ ಹೆಣ್ಣ ಚಂಚಲತೆ. ಹೆಣ್ಣಿಗಿಂತಲು ಹೊಳಪುಗಣ್ಣು ಹುಸಿಯಿರದ ನಡೆ; ತಾವು ನೋಡುವ ವಸ್ತುವನ್ನೆ...
ನೀನೆನ್ನ ಬದುಕಿಗೆ ಬಂದುದೇ ವಿಚಿತ್ರ ಯಾವ ಜನುಮದ ಫಲವೋ, ಒಲವೋ ಒಂದು ಜನುಮಕೆ ಬಂದು ನರ-ನಾರಿಯನು ಸೆಳೆದು ಕೊಳ್ಳುವಂತೆ ಯಾವ ಬಂಧನವಿಲ್ಲದೆಯೆ ಒಂದು ಇನ್ನೊಂದಕೆ ಮಿಡುಕುವ ಜೀವರಸವಾಗಿ ಭವಬಂಧಕೆ ಒಳಪಡಿಸುವ ಸೆಳೆತ…… ಹಿಂದೊಮ್ಮೆ ಒಂದು...
ಬಾವಿಕೆರೆ ಹೊಳೆಹಳ್ಳ ಕುಂಟೆಕಾಲುವೆ ನೀರ ಕುಡಿಕುಡಿದು ಸಾಕುಸಾಕಾಯಿತೆನಗೆ ಯಾವ ಹೊಂಡದೊಳಿಳಿದು ಎಷ್ಟು ಈಂಟಿದರು ಸಹ ತೀರಲಾರದ ತೃಷೆಯು ಒಳಗೆ ಒಳಗೆ ಒಮ್ಮೆ ಕುಡಿದರೆ ಸಾಕು ತಿರುಗಿ ತೃಷೆ ತಾನೆಂದು ಸುಳಿಯಬಾರದು ಜೀವಶುಕದ ಮುಂದೆ ಒಮ್ಮೆಯಾದರು ಇಂಥ ಅ...
ಏ ಬಕಾಸುರ ಕಾಲ! ಸಿಂಹದುಗುರುಗಳನ್ನು ಮೊಂಡಾಗಿಸುವೆ, ಭೂಮಿ ತನ್ನ ಸಂತತಿಯನ್ನೆ ನುಂಗುತಿದೆ ನಿನ್ನಿಂದ, ವ್ಯಾಘ್ರದ ಬಾಚಿ ಹಲ್ಲನ್ನು ಕಿತ್ತೆಸೆವೆ ನೀನು, ಪ್ರಾಚೀನ ಫೀನಿಕ್ಸನ್ನೆ ರಕ್ತದಲಿ ಕುದಿಸುವೆ, ಹರ್ಷದುಃಖಗಳನ್ನು ಓಡುತ್ತಲೇ ಎಲ್ಲ ಋತುಗಳಿಗೆ...













