ಯೌವನವೆಂದರೇ ಹೀಗೆ
ಹೂ ಬಿಟ್ಟ ಮರದ ಹಾಗೆ
ಹುಚ್ಚು ಹುರುಪು
ನೂಕು ನುಗ್ಗಲು
ಕಾಯನ್ನು ಹಿಸುಕಿ ಹಣ್ಣು
ಮಾಡುವ ಒಕ್ಕಲು
ಸಮಯವಿಲ್ಲ ಯಾವುದಕ್ಕೂ
ಧಾವಿಸುತ್ತಿರು ಮುಂದೆ
ಕೈ ಜಾರಿ ಹೋದೀತು
ತಡಮಾಡಿದರೆ ನಿಲ್ಲದಿರು
ಹಿಂದೆ ನೋಡದಿರು ಧಾವಿಸು
ಹಿಡಿ, ಸುಖಪಡು, ವಿಜೃಂಭಿಸು
ಇದೇ ಸೂತ್ರ ಇಲ್ಲ
ಯಾವ ಸಂಕೋಚ.
*****