ಏ ಬಕಾಸುರ ಕಾಲ! ಸಿಂಹದುಗುರುಗಳನ್ನು
ಮೊಂಡಾಗಿಸುವೆ, ಭೂಮಿ ತನ್ನ ಸಂತತಿಯನ್ನೆ
ನುಂಗುತಿದೆ ನಿನ್ನಿಂದ, ವ್ಯಾಘ್ರದ ಬಾಚಿ ಹಲ್ಲನ್ನು
ಕಿತ್ತೆಸೆವೆ ನೀನು, ಪ್ರಾಚೀನ ಫೀನಿಕ್ಸನ್ನೆ
ರಕ್ತದಲಿ ಕುದಿಸುವೆ, ಹರ್ಷದುಃಖಗಳನ್ನು
ಓಡುತ್ತಲೇ ಎಲ್ಲ ಋತುಗಳಿಗೆ ಬಡಿಸುವೆ;
ಸುವಿಶಾಲ ಲೋಕದ ಅಂದ ಚೆಂದಗಳನ್ನು
ಚಿಂದಿಗೂಳಿಸಲು ಏನೆ ಮಾಡು ನೀ ಒಪ್ಪುವೆ;
ಆದರೀ ಕೀಳು ಅಪರಾಧವನು ಮಾಡದಿರು
ನನ್ನವನ ಮಧುಮುಖವ ಸೋಕದಿರು ನಿನ್ನ ಸುಡು-
ಗಳಿಗೆ ಚಾಣಗಳಿಂದ, ಅಲ್ಲಿ ಗೆರೆ ಕೊರೆಯದಿರು
ಬರುವ ಪೀಳಿಗೆಗೆ ಸವಿ ಮಾದರಿಯ ಉಳಿಯಬಿಡು
ಮುದಿ ಕಾಲ ನೀ ಏನೆ ಮಾಡು, ಈ ಕವಿತೆಯಲಿ
ನನ್ನ ಪ್ರಿಯ ಉಳಿವ ಚಿರಕಾಲ ಯೌವನದಲಿ.
*****
ಮೂಲ: ವಿಲಿಯಂ ಷೇಕ್ಸ್‌ಪಿಯರ್
Sonnet 19
Devouring Time blunt thou the Lion’s paws
Related Post
ಸಣ್ಣ ಕತೆ
-
ದಾರಿ ಯಾವುದಯ್ಯಾ?
ಮೂವತೈದು ವರ್ಷಗಳ ನಂತರ ಅಮಲ ನಿನ್ನೂರಿಗೆ ಬರುತ್ತಿದ್ದೇನೆ ಅಂತ ಫೋನ ಮಾಡಿದಾಗ ಮೃಣಾಲಿನಿಗೆ ಆಶ್ಚರ್ಯ ಮತ್ತು ಆತಂಕ ಕಾಡಿದವು. ಬರೋಬ್ಬರಿ ಮೂವತ್ತೈದು ವರ್ಷಗಳ ಹಿಂದೆ ವಿಶ್ವವಿದ್ಯಾಲಯದ ಕ್ಯಾಂಪಸ್… Read more…
-
ವ್ಯವಸ್ಥೆ
ಮಗಳ ಮದುವೆ ಪಿಕ್ಸ್ ಆಗಿದ್ದರಿಂದ ದೊಡ್ಡ ತಲೆ ಭಾರ ಇಳಿದಂತಾಗಿತ್ತು. ಮದುವೆ ಮುಂದಿನ ತಿಂಗಳ ಕೊನೆಯ ವಾರವೆಂದು ದಿನಾಂಕವನ್ನೂ ನಿಗದಿಪಡಿಸಲಾಗಿತ್ತು. ಗಂಡಿನವರ ತರಾತುರಿಗೆ ಒಪ್ಪಲೇಬೇಕಾದ ಪರಿಸ್ಥಿತಿ ನನ್ನದು.… Read more…
-
ಮೃಗಜಲ
"People are trying to work towards a good quality of life for tomorrow instead of living for today, for many… Read more…
-
ಎರಡು ಮದುವೆಗಳು
ಮುಂಗಾರು ಮಳೆಗಳು ಸರಿಯಾಗಿ ಬಾರದೇ ಭುವನೇಶ್ವರದ ಹಳ್ಳಿಯ ಜನರಲ್ಲಿ ಒಂದು ರೀತಿಯ ಕಳವಳವಾಗಿತ್ತು. ಮಳೆ ಬಂದರೆ ಬೆಳೆ, ಬೆಳೆ ಆದರೆ ಬಾಳು ಎಂದು ಬದುಕುತ್ತಿದ್ದ ಅವರಿಗೆ ಏನು… Read more…
-
ಯಾರು ಹೊಣೆ?
"ಧಡ್....... ಧಡಲ್........ ಧಡಕ್" ಗಾಡಿ ನಿಂತಿತು. ಹೊರಗೆ ಮೋರೆಹಾಕಿ ನೋಡಿದೆ. ಕತ್ತಲು ಕವಿದಿತ್ತು. ಚುಕ್ಕೆಗಳು ಪಕಪಕ ಕಣ್ಣು ಬಿಡುತ್ತಿದ್ದವು. ಮೂಡಲ ಗಾಳಿ "ಸಿಳ್" ಎಂದು ಬೀಸುತ್ತಿತ್ತು. ನಾನು… Read more…