ನೀನೆನ್ನ ಬದುಕಿಗೆ ಬಂದುದೇ ವಿಚಿತ್ರ
ಯಾವ ಜನುಮದ ಫಲವೋ, ಒಲವೋ
ಒಂದು ಜನುಮಕೆ ಬಂದು
ನರ-ನಾರಿಯನು ಸೆಳೆದು ಕೊಳ್ಳುವಂತೆ
ಯಾವ ಬಂಧನವಿಲ್ಲದೆಯೆ
ಒಂದು ಇನ್ನೊಂದಕೆ ಮಿಡುಕುವ ಜೀವರಸವಾಗಿ
ಭವಬಂಧಕೆ ಒಳಪಡಿಸುವ ಸೆಳೆತ……
ಹಿಂದೊಮ್ಮೆ ಒಂದು ಸಲ, ಒಂದು ಚಣ
ನಿನ್ನನ್ನು ನೋಡಿದ ನೆಪಕೆ ಅರ್ಥವಿರಲಿಲ್ಲ….
ನಿನ್ನ ಸಖ್ಯದ, ಮತ್ತೆಕಾಣುವ ಬಯಕೆ-
ಇರಲೇ ಇಲ್ಲ….
ಮನಸಿಗೆ ನಿನಂಚಲೂ ಇಲ್ಲ-
ಅನಿರೀಕ್ಷಿತ….
ಮೊನ್ನೆ ನಿನ್ನ ದರ್ಶನ
ದಿಂದ
ನನ್ನ ಬದುಕಿನ ಬಣ್ಣ ಬದಲಾಗಿ
ಆದೆ ನೀನೆನ್ನ ಬಾಳ ಸಹಭಾಗಿ.
*****


















