ಸರಿದೀತೇ ಕಾರಿರುಳು?

ಸರಿದೀತೇ ಕಾರಿರುಳು ಈ ದೇಶದ ಬಾಳಿಂದ? ಸುರಿದೀತೇ ಹೂ ಬೆಳಕು ಈ ಭೂಮಿಗೆ ಬಾನಿಂದ? ಅಲುಗಾಡಿದ ಛಾವಣಿ ಮೇಲೆ ಬಿರುಕಾಗಿವೆ ಗೋಡೆಗಳು, ನಡುಗುತ್ತಿದೆ ಕಾಲಡಿ ನಲವೇ ಗುಡುಗುತ್ತಿವೆ ಕಾರ್ಮುಗಿಲು, ಕೆಳಸೋರಿದೆ ಮಳೆಧಾರೆಯು ಹರಕಲು ಸೂರಿಂದ,...

ಪ್ರೀತಿಯೇ ಬೆಟ್ಟವಾದವನು

ಬಿಸಿಲು ಸುಟ್ಬು ಬಿರುಕು ಬಿಟ್ಟು ಮಳೆಯ ನೀರನೆ ಕುಡಿದು ಹಸಿರು ತೊಟ್ಟ ಕಲ್ಲುಬೆಟ್ಟ ನನ್ನಪ್ಪ ಒಡಲು ಮೆಟ್ಟಿ ಸುತ್ತುಗಟ್ಟಿ ಮೇಯುವ ದನ ಕರು ಕುರಿಗಳಿಗೆ ಹಸಿರು ಹುಲ್ಲು ಕೊಟ್ಟ ಕಲ್ಲುಬೆಟ್ಟ ನನ್ನಪ್ಪ ತೊಡೆಯ ಸಂದಿಯಲಿ...

ಬಾನಿಂದೇನೋ ಇಳಿಯುತಿದೆ

ಬಾನಿಂದೇನೋ ಇಳಿಯುತಿದೆ ಬುವಿಯೆದೆಯೊಳಕ್ಕೆ ಕಲ್ಪನೆ ಏನನೊ ಸೇರಿಸಿದೆ ಕಾಣುವ ದೃಶ್ಯಕ್ಕೆ ನದಿಯೆದೆಯಲ್ಲಿ ಮುಗಿಲಿನ ಕವಿತೆ ಹುಣ್ಣಿಮೆ ಇರುಳಲ್ಲಿ, ಬಾನಿನ ಹಾಡು ಮೂಡಿತು ಹೇಗೆ ಭೂಮಿಯ ಶ್ರುತಿಯಲ್ಲಿ? ನೋಟಕೆ ಶ್ರವಣಕೆ ತಿಳಿಯದ ಏನೋ ಕಾಡಿದೆ ಎದೆಯಲ್ಲಿ...

ನಚ್ಚಿನ ಸೋದರಿ

ನಚ್ಚಿನಾ ಸೋದರಿಯೆ ಕಡುಜಾಣೆ ನೀನಮ್ಮ ಸ್ವಚ್ಛವಾಗಿದೆ ಮನವು ಮುದವಾಯಿತಮ್ಮ ಅಚ್ಯುತಾನಂತದೊಳು ಎನಿಬರೆನಿಬರು ಉಂಟೊ? ಸಚ್ಚರಿತ ಮಾನವರು ಶೀಲ ಸುಗುಣಾನ್ವಿತರು ನಿನ್ನ ನುಡಿ ಹಿತವಿಹುದು ನಿನ್ನ ನಡೆ ಸೊಗವಿಹುದು ನಿನ್ನ ಶ್ರಾವ್ಯದ ಗಾನ ಮಧುರವಾಗಿಹುದು ಬಿನ್ನಾಣ...

ಅದೇ ಕವಿತೆ

ಅದೇ ಕವಿತೆ ಹರಿತ ಕತ್ತಿಯಂತೆ ಸ್ವಾತಿ ಮುತ್ತಿನಂತೆ ಚಿತ್ತಿ ಮಳೆಯಂತೆ ಕರಾವಳಿ ಲಗ್ನದಂತೆ ಬದಲಾಗದ ವ್ಯವಸ್ಥೆಯಂತೆ. * ಅದೇ ಕವಿತೆ, ಅದೇ ಕಪ್ಪಿಟ್ಟ ಮುಖ ಬಡಿದಾಡೋ ಕೈ ಕಾಲು, ಉರಿಯುತ್ತಿರುವ ಕಣ್ಣುಗಳು ಮುಳುಗಡೆಯಾಗಿರುವ ಊರು...

ಬಟ್ಟೆಯಲ್ಲ ಬಣ್ಣವಲ್ಲ

ಬಟ್ಟೆಯಲ್ಲ ಬಣ್ಣವಲ್ಲ ಬೆಳಕಿನ ಈಟಿ ಹಾರಲಿ ಈ ಧ್ವಜ ಎಲ್ಲಾ ತಡೆಗಳ ಮೀಟಿ. ಈ ಧ್ವಜ ಶತಸಾವಿರ ಭುಜ ಎತ್ತಿ ಹಿಡಿದ ಜ್ಯೋತಿ ಸಾವಿರ ಬಗೆ ಜೀವನಕೆ ನೆರಳನಿತ್ತ ಕೀರ್ತಿ ಇತಿಹಾಸಕು ಹಿಂದೆ ವಾಲ್ಮೀಕಿಗು...

ಈ ಗುಬ್ಬಿಗಾರು ಜೊತೆ?

ಸೊಟ್ಪ ಕಾಲಿನ ಪುಟ್ಟ ಗುಬ್ಬಿ ಖುಷಿ ಕೊಡುತ್ತಿತ್ತು ಸ್ವರ್ಗದಂತೆ ಮರೆಸುತಿತ್ತು ಅಪ್ಪ ಅಮ್ಮರನ್ನೇ ಇಪ್ಚವಾಗಿತ್ತು ದೇವರು; ಪೂಜೆಯಂತೆ ಸಾಕ್ಷಾತ್ಕಾರವಾಗಿತ್ತು ಬೆಳಕಿನಂತೆ ಹತ್ತಿರವಿತ್ತು ಬಂಧು ಬಳಗದಂತೆ ಅಂಗಳದಲಿತ್ತು ತುಳಸಿ ದಳದಂತೆ ಕಳೆದು ಹೋದವೆ ಹಿಂಡು ಒಂಟಿ...

ನನ್ನೀ ಬಾಳಿನ ಪೂಜಾ ಪಾತ್ರೆಯ

ನನ್ನೀ ಬಾಳಿನ ಪೂಜಾ ಪಾತ್ರೆಯ ನಿನ್ನಡಿಗಿಡುವೆನು ದೇವ; ಬರಿದಾಗಿರುವೀ ಪಾತ್ರೆಯ ತುಂಬಿ ತುಳುಕಲಿ ಭಕ್ತಿಯ ಭಾವ ದಾರಿ ತಿಳಿಯದೆ ಗುರಿಯನರಿಯದೆ ಅಲ್ಲಸಲ್ಲದಕೆ ದುಡುಕಿ, ತಂದು ತುಂಬಿದೆ ಮನದ ಬಿಂದಿಗೆ ಕೊಳೆತ ಹಣ್ಣುಗಳ ಹುಡುಕಿ. ಈಗ...

ಗೆಳತಿ

ತೊಳೆದ ಮುತ್ತಿನ ಹೆಸರೆ? ಹೊಳೆವ ರತ್ನದ ಹೆಸರೆ? ಥಳಥಳಿಸಿ ಮೆರೆಯುತಿಹ ತಾರೆಗಳ ಹೆಸರೆ? ಕಳಿತ ಫಲಗಳ ಹೆಸರೆ? ಚಿಗಿತ ಲತೆಗಳ ಹೆಸರೆ? ಕೊಳದೊಳಗೆ ಬಳುಕುತಿಹ ಕಮಲಗಳ ಹೆಸರೆ? ಸುರಿವ ಮಧುವಿನ ಹೆಸರೆ? ಹರಿವ ನದಿಗಳ...

ಕೆಂಪು ಬಸ್ಸು ನಾ…

ನನ್ನ ಬಣ್ಣ ಕೆಂಪು; ಅದಕ್ಕೆಂದೆ ಸಂಪು? ಸರ್ವರಿಗೆಂದೆ ತಂಪು; ಒನಪು, ವೈಯಾರ, ಥಳಕು ಬಳಕು ಕೈಕುಲುಕು! ಹಳ್ಳ ದಿನ್ನಿ ಊರು ಕೇರಿ ಹಾರಿ; ಹಗಲಿರುಳೂ ಸಾಗಿ, ಚಳಿ ಮಳೆ ಗಾಳಿಗೆ ಮಾಗಿ, ನಿತ್ಯ ದುಡಿವೆ...