Home / Kannada Poetry

Browsing Tag: Kannada Poetry

ಆರುಣಿಯ ನೋಡಿದಿರಾ ನಮ್ಮ ಮುದ್ದು ಆರುಣಿಯ ಗುರುಗಳ ನೆಚ್ಚಿನ ಮೆಚ್ಚಿನ ಆರುಣಿ ಗುರುಪತ್ನಿಯ ಅತಿ ಪ್ರೀತಿಯ ಆರುಣಿ ಗುರುಧಾಮದ ಕಣ್ಮಣಿ ಆರುಣಿ ಹಸುಗಳ ಮೇಯಿಸುವ ಆರುಣಿ ಹೂಗಳ ಹೆಕ್ಕುವ ಆರುಣಿ ವೇದಗಳನೋದುವ ಆರುಣಿ ಸೌದೆಯನೊಡೆಯುವ ಆರುಣಿ ಮೊದಲು ಮಾತಾ...

ಎಷ್ಟೊಂದು ಸುಲಭ ಇದು ಸುಳ್ಳು ಹೇಳುವುದು ನಾನೇ ನಿನ್ನನ್ನು ಕರೆದು ನೀನೇ ಕರೆದೆ ಎನ್ನುವುದು. ಆಸೆ ತುಂಬಿಟ್ಟುಕೊಂಡು ಏನೂ ಬೇಡ ಎನ್ನುವುದು ಹಸಿವೆಗೆ ಬೇಯುತ್ತಾ ಉಂಡಂತೆ ನಟಿಸುವುದು, ಕೊನೆಗೆ ದಾಹವಾದರೂ ಉಗುಳು ನುಂಗುವುದು ಈ ಸುಳ್ಳು ನಿಷ್ಪಾಪಿ ನ...

ಎಷ್ಟಾದರೂ ನಾನು ನಿನ್ನ ಗುಲಾಮ ತಾನೆ ? ಕಾಯುವೆನು ನಿನ್ನ ಬಿಡುವಿಗೆ, ನಿನ್ನ ಇಚ್ಛೆಗೆ; ನನ್ನ ಕಾಲ ಅಮೂಲ್ಯವೇನಲ್ಲ ಪ್ರಭು, ನೀನೆ ಕಾರ್ಯವೊಂದನು ನನಗೆ ಆದೇಶಿಸುವವರೆಗೆ. ನಿನಗಾಗಿ ಕಾಯುತ್ತೆ ಗಡಿಯಾರ ನೋಡುತ್ತ ಕೊನೆಯಿರದ – ಗಂಟೆ –...

ನೀನು ದಯಾಮಯ ಕರುಣಾಸಾಗರ ಕ್ಷಮಾಗುಣ ಸಂಪನ್ನ, ನಾನು ನಿನ್ನ ಶರಣ ಚರಣದಾಸ, ನಿನ್ನಂತೆಯೇ ಕ್ಷಮಯಾಧರಿತ್ರಿ. ನೀ ನನಗೆ. ಕೊಟ್ಟ ಸುಖಕೆ ನಿನ್ನ ದಯೆ ಎಂದು ವೆಂದಿಸಿದೆ. ನೀ ಕೊಟ್ಟ ಕಷ್ಟ ಕೋಟಲೆಗೆ ನಿನ್ನ ದೂರದೆ ಕರ್ಮ ನನ್ನದೆಂದು ನಿಂದಿಸಿ ನನ್ನನೇ ನಿ...

ಆಡಿಸು ನನ್ನ ಜಾಡಿಸು ನನ್ನ ಒದ್ದಾಡಿಸು ನೀ ನನ್ನ ಜಾಲಾಡಿಸು ಕೊಳಕನ್ನ ಓ ಜಲಗಾರ ಬೇಯಿಸು ನನ್ನ ಕಾಯಿಸು ನನ್ನ ಕುದಿಯಿಸು ನೀ ನನ್ನ ಬೇರಾಗಿಸು ಎಲ್ಲಾ ಕಶ್ಮಲವನ್ನ ಓ ಮಡಿವಾಳ ಒಣಗಿಸು ನನ್ನ ಒಡೆಯಿಸು ನನ್ನ ಉರಿಯಿಸು ನೀ ನನ್ನ ತೆಗೆ ನನ್ನಿಂದಲು ತುಸ...

ಅಮೃತಶಿಲೆಯಲಿ ಕಡೆದ ಚಿನ್ನಲೇಪನವಿರುವ ರಾಜಸ್ಮಾರಕ ಮೀರಿ ಬಾಳುವುದು ಈ ಕಾವ್ಯ, ಕಾಲದ ಹೊಲಸು ಪಾಚಿ ಮೆತ್ತಿರುವ ಸ್ಮಾರಕವ ಮೂದಲಿಸಿ ಹೊಳೆವೆ ನೀ ಕವಿತೆಯಲಿ ಬಲುಭವ್ಯ ಯುದ್ಧದಲಿ ಎಲ್ಲ ವಿಗ್ರಹ ಮಣ್ಣಿಗುರುಳುವುವು, ಬುಡಮೇಲು ಮಾಡುವುವು ಭವ್ಯ ಕಟ್ಟಡಗ...

ನಲವತ್ತು ವರ್ಷಗಳ ಅನಂತರ ಭೇಟಿಯಾದರು ಪರಮಾಪ್ತ ಗೆಳೆಯರು ಬಾಲ್ಯ ಯೌವನ ನೆನೆಸಿಕೊಂಡು ಮನಸಾರೆ ನಕ್ಕರು. “ನಮ್ಮ ಸಹಪಾಠಿ ರೂಪ, ಈಗ ಎಲ್ಲಿದ್ದಾಳೋ ಪಾಪ” ವಿಷಾದದನಗೆ ನಕ್ಕ ಮೊದಲ ಮುದುಕ. “ಅಡುಗೆ ಮನೇಲಿದಾಳೆ ಆ ನನ್ನ ರೂಪ &#82...

ಯಃ ಪಶ್ಯತಿ ಸ ಪಶ್ಯತಿ ಯಾರು ಕಾಣುವರು ಅವರು ಕಾಣುವರು ಕಾಣುವವನೇ ಮಹಾಮತಿ ಮಹಾ ಸೌಧದ ಸ್ಥಪತಿ ಮಹಾ ತಪಸ್ಸಿನ ಯತಿ ಒಂದೆ ಕಣಾ ಇಬ್ಬರ ಚೇತನ ಅವನಂತಿದ್ದರು ಇವನಂತಿದ್ದರು ಯಃ ಪಶ್ಯತಿ ಸ ಪಶ್ಯತಿ ಬಿರುಗಾಳಿಯ ಅತಿ ಮೆಲುಗಾಳಿಯ ಇತಿ ಒಂದೆ ಕಣಾ ಎರಡರ ಚೇ...

ಇಂದೇಕೋ ಕವಿತೆ ಬರೆಯುವ ಹುಚ್ಚು ಒಳಗಿನದೆಲ್ಲ ಹೊರಬರಬಹುದೇ ಎಂಬ ನಚ್ಚು ಅವಿತಿಡಲಿ ಎಷ್ಟು ದಿನ ಜೀರ್ಣವಾಗದ ಈ ಅನ್ನ ಕಾಡುತ್ತದೆ ಒಳಗೊಳಗೇ ಹಿಂಡಿ ಜೀವವನ್ನ ಅತ್ತ ಅರಗುವುದೂ ಇಲ್ಲ. ರಕ್ತಗತ, ಇತ್ತ ಹೊರ ಬರುವುದೂ ಇಲ್ಲ ಮುಗಿಸಿ ತನ್ನ ಸುತ್ತ ಬರಲೇ ...

ಸತ್ವ ದಯಪಾಲಿಸುವ ಸತ್ಯದಾಭರಣ ಪಡೆದು ಸೌಂದರ್ಯ ಅದೆಷ್ಟು ಮೆಚ್ಚಾಗುವುದು! ಸುಂದರ ಗುಲಾಬಿ ಹೂ ಮೊದಲಿಗಿಂತಲು ಚಂದ ಅದರೊಳಗೆ ಹುದುಗಿದ ಸುಗಂಧ ಬಲದಿಂದ. ಕಣಗಿಲೆಯ ಹೂವೂ ಗುಲಾಬಿ ಹೂವಿನ ದಟ್ಟ ಕೆಂಪುಬಣ್ಣವ ಪಡೆದು, ಮುಳ್ಳ ಜೊತೆ ನೇತಾಡಿ ಬೇಸಿಗೆಯ ಉಸ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....