ಇಂದೇಕೋ ಕವಿತೆ ಬರೆಯುವ ಹುಚ್ಚು
ಒಳಗಿನದೆಲ್ಲ ಹೊರಬರಬಹುದೇ ಎಂಬ ನಚ್ಚು
ಅವಿತಿಡಲಿ ಎಷ್ಟು ದಿನ
ಜೀರ್ಣವಾಗದ ಈ ಅನ್ನ
ಕಾಡುತ್ತದೆ ಒಳಗೊಳಗೇ
ಹಿಂಡಿ ಜೀವವನ್ನ
ಅತ್ತ ಅರಗುವುದೂ ಇಲ್ಲ.
ರಕ್ತಗತ, ಇತ್ತ ಹೊರ
ಬರುವುದೂ ಇಲ್ಲ
ಮುಗಿಸಿ ತನ್ನ ಸುತ್ತ
ಬರಲೇ ಬೇಕು ತಾಳಿ
ಇನ್ನೆಲ್ಲಿದೆ ದಾರಿ
ಮೂಡುತ್ತದೆ ಕವಿತೆ ಕಾಯಿರಿ.
*****


















