
೧ ಕವಿತೆಯೆಂದರೆ ಚಂದ್ರನ ಮೇಲಿನ ಕಪ್ಪು ಕಲೆ ನಿಶೆಯ ನಿದ್ದೆಗೆಡಿಸುವ ಉಷೆ ಬಾನಿನ ಅಗಾಧತೆ ಭಾನುವಿನ ಪ್ರಖರತೆ ೨ ಕವಿತೆಯೆಂದರೆ ರಕ್ತದೊಳಗಣ ಕೆಂಪುಕಣ ತಲೆಯೊಳಗಣ ಜ್ಞಾನಗಣ ಕೈಯಲ್ಲಿಯ ಕಸಬರಿಗೆ ೩ ಕವಿತೆಯೆಂದರೆ ಭೋಗದ ಪ್ರತಿಫಲನ ಮಿರುಗುವ ಮಕಮಲ್ಲಿನ...
ಗೆಳೆಯ ರಹೀಮನ ಮನೆಯಲ್ಲಿ ಕುಟ್ಟಿದ ಮೆಹಂದಿಗೆ ಹಪಾಹಪಿಸಿ ಕಾಡಿ ಬೇಡಿ ಇಸಿದುಕೊಳ್ಳುತ್ತಿದ್ದೆ. ಕೈಬಣ್ಣ ಕೆಂಪಗಾದಷ್ಟು ಗುಲಾಬಿ ಅರಳುತ್ತಿತ್ತು ಮನದಲ್ಲಿ. ಪತ್ರ ಹೊತ್ತು ತರುವ ಇಸೂಬಸಾಬ್ ಬಂದಾಗಲೆಲ್ಲಾ ಚಾ ಕುಡಿದೇ ಹೋಗುತ್ತಿದ್ದ.. ಅಂಗಳದ ತುಂಬೆಲ...
ಮೈತುಂಬಾ ಮಸಿ ಮೆತ್ತಿದರೂ ತೊಳೆದು ಬರಬಲ್ಲರು ಅವರು ಕೇಳಲುಬಾರದು ಮಸಿಯ ಮೂಲಕ್ಕೆ ಕಾರಣ ಅವರು ಮೇಲ್ಪಂಕ್ತಿಯ ಊಟಕ್ಕೆ ಕುಳಿತವರು. ಬಿಳಿಮೈಯ ಮಾತಿಗೆ ಬಸವನ ಗೋಣು ಎಂಜಲೆಲೆಗೆ ಮೈ ಉಜ್ಜಿಕೊಂಡವರು ಇವರು. ಕರಿಮೈಯ ಮಾರನ ಮನೆಯ ದೀಪದ ಬೆಳಕಿಗೆ ಯಾವ ಬಣ್...
ಬಿಳಿಮಲ್ಲಿಗೆಯ ಕಂಪು ಕೊಳೆತು ನಾರುವುದು ಗಾಳಿಗಂಧ ಆಡದ ಕಡೆಯಲ್ಲಿ ತುರುಕಿ ಬಲವಂತ ಮುಚ್ಚಿ ಹೊರತೋರದಂತೆ ಅದುಮಿ ಇಟ್ಟು ಬಿಟ್ಟರೆ. ಕೊಳೆಯದಂತಿಡಬೇಕು, ಕೆಡದಂತಿರಬೇಕು. ಮಲ್ಲಿಗೆ ಅರಳುವುದು ಎಲರ ಅಲೆಯೊಳಗೆ ತೇಲಿ ಪರಿಮಳ ಸಾಲೆಯಾಗಿ ಪರಮಲೋಕವನ್ನೇ ಕ...
ನಗು ಬಿತ್ತುವುದು ಅವಳಿಗೆ ಕಷ್ಟವೇನಲ್ಲ. ನೆತ್ತರು ಬಸಿದ ಬಿಳಿಚಿದ ಮೊಗದಲ್ಲೂ ಮಲ್ಲಿಗೆ ಅರಳಿಸುತ್ತಾಳೆ. ‘ಅಮ್ಮಾ,, ಬಸಳೇ ಸೊಪ್ಪು ತಂದಿ, ಏಗಟ್ಟೇ ಮುರ್ಕಂಡ ಬಂದಿನ್ರಾ ತಾಜಾನೇ ಇತು.. ಬರ್ರಾ ಬ್ಯಾಗೆ, ಬಿಚಲು ನೆತ್ತಿಗೆ ಬಂದ್ರೇ ಮತ್ತೇ ತಿರುಗುಕ...
ಹತ್ತಾರು ರೂಪಾಯಿಗೆ ಸಿಗುವ ಇವು ಸೀದಾ ಸಾದಾ ಬಳೆಗಳು ಬರಿಯ ಬಳೆ ತೊಟ್ಟ ಕೈಗಳಲ್ಲಿ ದೇವ ದೇವಿಯರ ಕೂಡ ಯಕ್ಷ, ವಾನರರೂ ಹೇಗೆಲ್ಲಾ ಗಟ್ಟಿಗೊಳುತ್ತಾರೆ. ನೀರೆತ್ತುವ ಅದೇ ಕೈಗಳು ನೀರುಕ್ಕಿಸಿದವು, ನೀರು ಬಸಿದವು ಕೂಡ ಬಾನಿಗೆ ಹೋಯ್ದ ನೀರಲ್ಲಿ ಪಕ್ಕನೆ...
ಬೀದಿ ಗುಡಿಸುವ ಆ ಹುಡುಗಿ ಬಯಲಲ್ಲಿ ಬುಟ್ಟಿ ಕಟ್ಟುವ ಪಾರಿಜಾತ ಬೆಳ್ಳಂಬೆಳಿಗ್ಗೆ ಕಣ್ಣ ತುಂಬೆಲ್ಲಾ ಕನಸು ಹೊತ್ತು ಕಸವ ರಸ ಮಾಡುತ್ತಾ ಪಾದಕ್ಕೆ ಚುಚ್ಚಿದ ಪಿಂಗಾಣಿ ಗಾಜುಗಳ ಮೆಲ್ಲಗೆ ಸವರಿ, ಮುಖ ಕಿವಿಚಿ ಸರಕ್ಕನೇ ಎಳೆದು ಬಿಡುತ್ತಾಳೆ. ಅವಳ ಮನ ದ...
ಒಲೆಗಳು ಬದಲಾಗಿವೆ ಹೊಸ ರೂಪ, ಆಡಂಬರದ ಬಿಂಕ ಬಿನ್ನಾಣ ಮೈತೆತ್ತು ಉರಿ ಬದಲಾಗಿದೆಯೇ? ಜ್ವಾಲೆಗೆ ಹಳದಿ ಕೆಂಪು ಮಿಶ್ರಿತ ಹೊಳಪು ಕಂದಿದೆಯೇ? ಕಳೆಕುಂದಿದರೆ ಬೇಯಿಸುವ ಕೈಗಳು ಕೆಲಸ ಕಳೆದುಕೊಳ್ಳುತ್ತದೆ ಕೈಬಳೆಯ ನಿಟ್ಟುಸಿರ ಗಾಳಿಯೂ ದೀರ್ಘವಾಗುತ್ತದೆ...
ಅದೇ ಆ ಕೆಂಪುಮಣ್ಣಿನ ಗದ್ದೆಯ ತುಂಬಾ ಪ್ರತಿಸಲದಂತೆ ಈ ಸಲವೂ ಹೊಸ ಬೀಜಗಳದ್ದೇ ಬಿತ್ತು. ಮೋಹನ ರಾಗದ ಮಾಲಿಕೆಗಳ ಜೊತೆ ತರವೇಹಾರಿ ತಳಿಬೀಜಗಳ ಊರಿಹೋಗುವ ಆತನಿಗೋ ಪುರಸೊತ್ತಿಲ್ಲದ ದಣಿವು. ಸೀಮೆಗೆ ತಕ್ಕಂತಿರುವ ಮಣ್ಣಿನ ಹದಕ್ಕೆ ಬೀಜ ಹಾಕುವುದೇನು ಸಾ...
ಮಾವಿನ ಮಿಡಿ ಎಲ್ಲಿ ಸಿಗುತ್ತೋ? ಕಾಯುತ್ತಿದ್ದೆ. ಉಪ್ಪಿನ ಕಾಯಿಯ ಮಿಡಿ ಈ ಸಲಕ್ಕೆ ಹಾಕಿಡಬೇಕು. ಅದೇ ಮೊನ್ನೆ ಹಸಿಹಸಿರು ಮಿಡಿ ಗುಲಗುಂಜಿಗೆ ಸ್ವಲ್ಪವೇ ದೊಡ್ಡದು ಪೇಟೆ ಅಂಚಿಗೆ ನನಗೆ ಬೇಕಾದದ್ದು ಅವನೊಬ್ಬನಲ್ಲಿ ಮಾತ್ರ ಸುರಿದುಕೊಂಡಿದ್ದ. ಏರುಪೇರ...














