ಮಾತ್ರಿಯೋಷ್ಕಿ

ಮಾತ್ರಿಯೋಷ್ಕಿ ಮಾಸ್ಕೋದ
ಬೀದಿ ಬೀದಿಯ ಗೊಂಬೆ
ಗೊಂಬೆಯೊಳಗೊಂದು ಗೊಂಬೆ
ಒಂದರೊಳಗೊಂದು ಆದಷ್ಟು ಕುಬ್ಜ
ಆದರೂ ಕುಲುಕಾಟ ಒಳಗೊಳಗೆ
ಗೊರ್ಬಚೇವ್ನ ಗೊಂಬೆ
ಅದರೊಳಗೆ ಬ್ರೇಜ್ನೇವನ ಗೊಂಬೆ
ಒಳಗೆ ಕ್ರುಶ್ಚೇವನ ಗೊಂಬೆ
ಮತ್ತೂ ಒಳಗೆ ಸ್ಟಾಲಿನನ ಗೊಂಬೆ
ತೊಗಲುಗೊಂಬೆಯ ಆಟ

ಈಗ ಭಾರತದ ಗೊಂಬೆ
ನರೇಂದ್ರಮೋದಿಯ ನಯವಂತಿಕೆಯ ಗೊಂಬೆ.
ವಾಜಪೇಯಿಯ ವಿಜಯದ ನಗೆ ಉಸುರುವ ಗೊಂಬೆ
ಮನಮೋಹನರ ಮುತ್ಸದ್ಧಿ ಗೊಂಬೆ
ಚಂದ್ರಶೇಖರರ ಚುರುಕು ಗೊಂಬೆ
ಮತ್ತೂ ಒಳಗೆ ಇಂದಿರಮ್ಮನ ಇಂಗದ
ಮುಖಕಾಂತಿಯ ಬೊಂಬೆ
ಮತ್ತೂ ಒಳಗೆ ಗರ್ಭದಲ್ಲಿ ಜಬರದಸ್ತ
ಜವಾಹರರ ಗೊಂಬೆ

ಸಾಹಿತ್ಯದಲ್ಲೂ ಅದೇ ಗೊಂಬೆಯಾಟ
ಮಾತ್ರಿಯೋಷ್ಕಿ ಮಾಯಾಮಾಟ
ಭೈರಪ್ಪನವರ ಗೊಂಬೆ
ಅದರೊಳಗೆ ಕುವೆಂಪುರವರ ಗೊಂಬೆ
ಒಳ ಗವಿಯಲಿ ಪಂಪ ಕವಿಯ ಗೊಂಬೆ
ಮೂಲಬಿಂಬ ವ್ಯಾಸ ಮಹರ್‍ಷಿಯ ಗೊಂಬೆ
ಅದೇ ಗೊಂಬೆ ತದ್ರೂಪದ ಬಿಂಬ
ವ್ಯತ್ಯಾಸಗೊಂಡ ಆಕಾರವೆಂಬುದಷ್ಟೇ ಭಿನ್ನತೆ
ಮಾತ್ರಿಯೋಷ್ಕಿ ಮಾಂತ್ರಿಕ ಕಲೆ
ಜಗತ್ತಿನೊಳಗೆ ಅದರದೇ ಬಲೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೧೫
Next post ಮುಸ್ಸಂಜೆಯ ಮಿಂಚು – ೧೩

ಸಣ್ಣ ಕತೆ

  • ಕೇರೀಜಂ…

    ಮಂಜೇಲ್ಮುಂಜೇಲಿ ಯೆದ್ಬೇಗ್ನೇ ಕೇರ್ಮುಂದ್ಗಡೆ ಸಿವಪ್ಪ ಚೂರಿ, ಕತ್ತಿ, ಕುಡ್ಗೋಲು, ಯಿಳ್ಗೆಮಣೆ, ಕೊಡ್ಲಿನ... ಮಸ್ಗೆಲ್ಗೆ ಆಕಿ, ಗಸ್ಗಾಸಾ... ನುಣ್ಗೆ ತ್ವಟ್ವಟ್ಟೇ... ನೀರ್ಬಟ್ಗಾಂತಾ, ಜ್ವಲ್ಸುರ್ಗಿಗ್ಯಾಂತಾ, ಅವ್ಡುಗಚ್ಗೊಂಡೂ ಮಸೆಯತೊಡ್ಗಿದ್ವನ... ಕಟ್ದಿ ತುರ್ಬು,… Read more…

  • ಕರಾಚಿ ಕಾರಣೋರು

    ಮಳೆಗಾಲ ಆರಂಭವಾಯಿತೆಂದರೆ ಕುಂಞಿಕಣ್ಣ ಕುರುಪ್ಪನ ಏಣೆಲು ಗದ್ದೆಗೆ ನೇಜಿ ಕೆಲಸಕ್ಕೆ ಹೋಗಲು ಕಪಿಲಳ್ಳಿಯ ಹೆಂಗಸರು, ಗಂಡಸರು ತುದಿಗಾಲಲ್ಲಿ ಕಾಯುತ್ತಿರುತ್ತಾರೆ. ವರ್ಷವಿಡೀ ವಿಪ್ರರ ಮತ್ತು ವಿಪ್ರಾತಿವಿಪ್ರರ ಆಡಿಕೆ ತೋಟಗಳಲ್ಲಿ… Read more…

  • ಎರಡು ರೆಕ್ಕೆಗಳು

    ಪಶ್ಚಿಮದಲ್ಲಿ ಸೂರ್ಯ ಮುಳುಗುತ್ತಿದ್ದ ಆಕಾರದ ತುಂಬ ಒಂಥರಾ ಕೆಂಬಣ್ಣ ತುಂಬಿಕೊಂಡಿತ್ತು. ಆ ಸಂಜೆಯಲ್ಲಿ ತಣ್ಣನೆಯ ಗಾಳಿ ಆ ಭಾವನೆ ಬಂಡೆಯ ಕೋಟೆಯ ಮೇಲೆ ಹಾಯ್ದು ಹೋಯಿತು. ಎತ್ತರದ… Read more…

  • ವರ್ಗಿನೋರು

    ಆಗ್ಲೇ ವಾಟು ವಾಲಿತ್ತು. ಯೆಷ್ಟು ವಾಟು ವಾಲ್ದ್ರೇನು? ಬಳ್ಳಾರಿ ಬಿಸ್ಲೆಂದ್ರೆ ಕೇಳ್ಬೇಕೇ? ನಡೆವ... ದಾರ್ಗೆ ಕೆಂಡ ಸುರ್ದಂಗೆ. ನೆಲಂಭೋ ನೆಲಾ... ಝಣ ಝಣ. ‘ಅಲ್ಗೆ’ ಕಾದಂಗೆ. ಕಾಲಿಟ್ರೆ… Read more…

  • ಮನೆ “ಮಗಳು” ಗರ್ಭಿಣಿಯಾದಾಗ

    ಮನೆ ಮಗಳು "ಸೋನಿ" ಉಡಿ ತುಂಬುವ ಸಮಾರಂಭ. ಬೆಳಗಾವಿ ಜಿಲ್ಲೆಯ ಸದಲಗಾ ಪಟ್ಟಣದ ಪೀರ ಗೌಡಾ ಪಾಟೀಲ ಹಾಗೂ ಅವರ ತಮ್ಮ ಮಹದೇವ ಪಾಟೀಲರಿಗೆ ಎಲ್ಲಿಲ್ಲದ ಸಂಭ್ರಮವಾಯಿತು.… Read more…