
ಉಕ್ಕಿ ಹೊರ ಬರಲು ಯತ್ನಿಸುವ ಕಣ್ಣೀರಿಗೆ ಅಡ್ಡಗಟ್ಟಿ ಅಣೆಕಟ್ಟು ಕಟ್ಟಿ, ನಿಟ್ಟುಸಿರುಗಳ ನುಂಗಿ, ಹಸಿರಿನುಸಿರಿಗೆ ಹಂಬಲಿಸಿ, ಹಳದಿ ಕಾಯಿಲೆ ಓಡಿಸಿದ ಜೀವ ಸೂತ್ರ ಸ್ವತಂತ್ರ. ಮುಚ್ಚಿರುವ ಮುಸುಕಿನ ಅಡಿಯಲಿ ಹಿಡಿದಿಟ್ಟ ಬಿಗಿಯುಸಿರು ಸ್ವತಂತ್ರ ಕೋಗ...
ಕಡೆದು ನಿಲ್ಲಿಸಲಿಲ್ಲ ನಾನು ಗಾಳಿ ಗೋಪುರದ ಗೋಡೆ, ಕಂಬಗಳ ನೆಲ ಮುಗಿಲ ಗಾಳಿಯಲ್ಲಿ ಕಟ್ಟಲಿಲ್ಲ ನಾನು ತಾಜಮಹಲುಗಳ.. ಕನಸಿನ ಬುತ್ತಿ ಬಿಚ್ಚಲಿಲ್ಲ. ಸಾಮ್ರಾಜ್ಯಗಳ ನಾನು ಉರುಳಿಸಲಿಲ್ಲ. ಮತ್ತೆ ಎತ್ತರಕೆ ನಿಲ್ಲಿಸಲಿಲ್ಲ. ಮಹಲುಗಳ ಮಜಲುಗಳ ರಾಜರುಗಳ ...
ಜನಜಂಗುಳಿಯಲ್ಲಿ ಕಳೆದಿರುವ ಬದುಕಿನ ಜೊತೆಗಾರನಿಗೆ ಮತ್ತೆ ಮತ್ತೆ ಹುಡುಕುತ್ತೇನೆ, ಕೀವು ಸೋರುವ ಗಾಯಗಳಿಗೆ ಮತ್ತೆ ಮತ್ತೆ ತೊಳೆಯುತ್ತೇನೆ, ಮುಲಾಮು ಸವರುತ್ತೇನೆ, ಎಂದಿಗೂ ಒಂದಾಗದ ರೈಲು ಹಳಿಗಳಂತೆ ಕ್ಷಿತಿಜದಲ್ಲಿ ಎಂದಿಗೂ ಸೇರದ ನದಿಯ ಎರಡು ದಡಗಳ...
ನಾನು ಮನೆಯ ಕಸವೆಲ್ಲ ಗುಡಿಸಿ ಮೂಲೆಗೆ ಕೂಡುವ ಕಸಪರಿಕೆಯೇ? ಎಲ್ಲರೂ ದಾಟುತ್ತ ಇಲ್ಲ, ಕಾಲಿನಿಂದ ಹೊಸಕುತ್ತ ಮುಂದೆ ಸಾಗುವ ಮನೆಯ ಹೊಸ್ತಿಲೆ? ಒಡೆಯನ ಮರ್ಜಿಯಂತೆ ಬೆಳಕು ಬೇಕೆಂದಾಗ ಮನೆಗೆ ಬೆಳಕು ಕೊಡುವ ಬಲ್ಬು ಆಗಿರುವೆನೆ? ಕತ್ತಲೆ ಹಿನ್ನೆಲೆಯಾಗಿ...
ನಾ ಹುಟ್ಟಿ ಬೆಳೆದಂತಹ ಮಣ್ಣ ಗೋಡೆಯ ಮನೆಯ ವಿಶಾಲ ಅಂಗಳದಲಿ ಛಾವಣಿಯೇ ಇಲ್ಲದ ಹಾಳು ಗೋಡೆಗಳ ಮೇಲೆ ಬೆಳೆದಿರುವ ಹುಲ್ಲುಗರಿಕೆ- ದಯಾಮಯ ಅಲ್ಲಾಹ್‌ನ ಕರುಣೆ ನನ್ನ ಮೇಲಿದೆಯೇನೋ, ಕತ್ತಲೆಯ ಕೋಣೆಯಲಿ ಕೈದಿಯಾಗಬೇಕಿದ್ದ ನನಗೆ, ಛಾವಣಿಯಿಲ್ಲದ ಕೋಣೆಯಿಂದ ...
ಆಕಾಶದಿಂದ ಜಾರಿ ನಕ್ಷತ್ರ ಗುಂಪಿನಿಂದ ಕಳಚಿ ಬಿದ್ದ ಒಂಟಿ ನಕ್ಷತ್ರ, ರಾತ್ರಿ ಕತ್ತಲಲಿ ಉದುರುವ ಮಿಂಚು, ಹಗಲಿನಲ್ಲೇಕೆ ಹುಡುಕುವಿರಿ? ನೋವಿನ ಸುರಂಗದಿಂದ ಕಣ್ಣುಗಳ ಆಳಕ್ಕಿಳಿದು ಝಲ್ಲೆಂದು ಉದುರುವ, ಗಾಢ ಕತ್ತಲೆಯಲಿ ಜಾರುವ ಬೆಳಕಿನಕಿಡಿ ಮಿಂಚಿನ ...














