ಕಾಡು, ನದಿ, ಬೆಟ್ಟಗಳು
ವಾಸ್ತವದಲ್ಲಿ ಯಾರ ಆಸ್ತಿ?
ಬೆವರಿಳಿಸಿ ದುಡಿವಾಗ
ಹುಟ್ಟಿದ ಉಸ್ಸೆಂಬ
ನಿಟ್ಟುಸಿರಿನ ಶಬ್ದದಲಿ
ನಾನು ಗುರುತಿಸುತ್ತೇನೆ
ಯಾವನು ಗುಲಾಮ
ಯಾರು ಯಜಮಾನ?
ವಿದೇಶಿ ಸರಕುಗಳಿಗೆ
ಮಾರುಕಟ್ಟೆ ಒದಗಿಸಲು
ಬಲಿಯಾದ ನನ್ನವರು
ಅಸಹಾಯಕ ಬಂಧಿಗಳು.
*****