“ಮನೆಗೆ ಮಾತ್ರ ಕಿಟಕಿ ಇದೆ ನಮಗೆ ಕಿಟಕಿ ಇಲ್ಲ” “ನಮಗೂ ಕೂಡ ಕಿಟಕಿ ಇದೆ ನಿನಗದು ತಿಳಿದಿಲ್ಲ” “ನಮಗೆ ಕಿಟಕಿ ಎಲ್ಲಿ ಇದೆ?” “ಮನಸಿನಾಳದಲ್ಲಿ, ನೋಡಲಿಕ್ಕೆ ಬರದ ಹಾಗೆ ಎದೆಯ ಗೂಡಿನಲ್ಲಿ” ...
ನಾನು ನೋಡಿ, ತಾರೆಗಳಿಗೆ ತಮ್ಮ ಪಾಡಿಗೆ ಮಿನುಗಿ ಮಿಂಚೋದಕ್ಕೆ ಧಾರಾಳವಾಗಿ ಬಿಡ್ತೇನೆ ಪ್ರತಿ ಅಮಾವಾಸ್ಯೆಗೂ ಅವರುಗಳಿಗೇ ಇಡೀ ಆಕಾಶ ಬಿಟ್ಟುಕೊಡ್ತೇನೆ. ಆದರೆ ಆ ಸ್ವಾರ್ಥಿ ಸೂರ್ಯ ಬಂದಾ ಅಂದರೆ ಆಯ್ತು ಇಡೀ ಆಕಾಶ ಅವನಿಗೇ ಬೇಕು. ಅವನು ಇಟ್ಟಾ ಕಾಲ...
೧ ಈ ಪೇಟೆಗೊಂದು ಒಳಚರಂಡಿ ವ್ಯವಸ್ಥೆ ಬೇಕೆ ಬೇಡವೆ ಹೇಳಿ, ಹೋಟೆಲು ಕಸಾಯಿಖಾನೆಗಳಿಂದ ಹರಿಯುವ ಕೊಚ್ಚೆ ರೋಡಿನ ಮೇಲೆ ಹಪ್ಪುಗಟ್ಟುತ್ತದೆ. ಜರಿಯಬೇಕೆ ಇಲ್ಲಿ, ಸಂಜೆಗೆ ಹಾಯಾಗಿ ವಾಯು ಸೇವನೆಗೆ ಅಡ್ಡಾಡುವ ನಮ್ಮ ಮಂಡಿ? ೨ ಹಾಗೇನೆ ಒಂದು ಸಾರ್ವಜನಿಕ ಮ...
ಎನ್ನ ಸತ್ಯಳಮಾಡಿ, ನಿತ್ಯವ ತೋರಿ, ತತ್ವವೆಂಬುದನರುಹಿದಿರಿ. ಮತ್ಸರವ ಹಿಂಗಿಸಿದಿರಿ. ಆಸೆರೋಷವನೆ ಹಿಂಗಿಸಿದಿರಿ. ಮಾತುಮಥನವನೆ ಕೆಡಿಸಿದಿರಿ. ವ್ಯಾಕುಳವನೆ ಕೆಡಿಸಿ, ಜ್ಯೋತಿಯ ಬೆಳಗ ತೋರಿದಿರಯ್ಯ ಚನ್ನಮಲ್ಲೇಶ್ವರನು ಅಪ್ಪಣಪ್ರಿಯ ಚನ್ನಬಸವಣ್ಣಾ. *...
ಹೆಮ್ಮೆಗೋ safety ಗೋ ಕನ್ನಡಿ ಬೀರು ತಂದರೂ ಒಳಗಡೆಯೆಲ್ಲು ಕಚಡಾ ತುಂಬಿ ಮತ್ತೆ ಕನ್ನಡಿ ಹಿಡಿದು ಮೇಕಪ್ ಮಾಡುವ, ತಲೆದಿಂಬು ಕೆಳಗೆ ಆಭರಣ ಇಡುವ, ಇವಳ ಕೆಲಸ ನೋಡಿ ನೋಡಿ ಒಣ ಧೀಮಾಕಿನ ಹೆಣ್ಣಾಗಬೇಡ ಎಂದು ಗೋಗರೆದೂ ಗೋಗರೆದೂ ಸುಸ್ತಾಗುತ್ತಿದ್ದೇನೆ....
ಯಾರು ಕಲಿಸಿದರು ಗೆಳತಿ ಹಾಡುವುದ ಹೇಳೆ ನನಗಿಷ್ಟು ಕಲಿಸುವೆಯ ಹಾಡಿನ ಲೀಲೆ ಮರಗಳಲಿ ಕುಳಿತಿರುವೆ ಕಾಣದಾ ಕೊಂಬೆಯೊಳು ಸುಖ ದುಃಖದಿಂ ದೂರ ನೆಲದಿಂದ ಮೇಲೆ ಸಿಹಿಕಹಿಗಳೊಳಗಿನಿತು ಬೆರೆಯದೇ ಶುದ್ಧ ಸಲಿಲದ ರೀತಿ ಇಹುದು ನಿನ್ನಯ ಗಾನ ಹುಟ್ಟು ಸಾವುಗಳ ನ...
ಹುಲಿಯಣ್ಣಾ ಹುಲಿಯಣ್ಣಾ ಕಾಡಿಗೆ ನೀನೇ ಹಿರಿಯಣ್ಣ! ಆದರು ನೀನು ಕಾಡಲ್ಲೇ ಇರು ಊರಿನೊಳಗೆ ಬರಬೇಡಣ್ಣ! ಹುಲಿಯಣ್ಣಾ ಹುಲಿಯಣ್ಣಾ ಎಂಥಾ ಮೀಸೆ ನಿನಗಣ್ಣ! ಎಂಥಾ ಬಾಯಿ ಎಂಥಾ ಹಲ್ಲು ಎಂಥಾ ಗರ್ಜನೆ ನಿನದಣ್ಣ! ಹುಲಿಯಣ್ಣಾ ಹುಲಿಯಣ್ಣಾ ಫಳ ಫಳ ಗಾಜಿನ ಕಣ್ಣ...
ಚಂದಮಾಮ ಚಕ್ಕುಲಿಮಾಮ ಅಮವಾಸ್ಯೆಯ ಕತ್ತಲಲ್ಲಿ ನಮ್ಮನ್ನು ಬಿಟ್ಟು ಎಲ್ಲಿಗೆ ಹೋಗಿದ್ದೆ, ಯಾಕೆ ಹೋಗಿದ್ದೆ? ಕೇಳೋ ಕಳ್ಳ ಮುದ್ದಿನ ಮಳ್ಳಾ, ಸೂರ್ಯಾನೂರಿಗೆ ಹೋಗಿದ್ದೆ ಬೆಳದಿಂಗಳು ಹೊತ್ಕೊಂಡು ಬರ್‍ಲಿಕ್ಕೆ. *****...
(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...
ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...
ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...






