Home / Jaanakitanayaananda

Browsing Tag: Jaanakitanayaananda

ಏಕೆ? ಕಣ್ಣಂಚಲಿ ಕಂಬನಿ ಹೊರಸೂಸಿ ಕಣ್ಣಬಟ್ಟಲುಗಳು ತುಂಬಿ ಬಂದಿಹವು| ಯಾವುದೋ ಎದೆಯಾಳದ ನೋವ ಹೊರಹಾಕಲು ಹೃದಯ ತಳಮಳಿಸುತಿಹುದು|| ಹಳೆಯ ಪ್ರೇಮದನುಭವದ ಸಿಹಿಕಹಿನೆನಪು, ನನ್ನ ನೆನಪಿಸಿಯೊಮ್ಮೊಮ್ಮೆ ದುಃಖವನು ತಂದಿಡುವುದು|| ಅಂದು ನಿನ್ನಂತರಂಗವ ಅರ...

ಕರುಣೆ ತೋರು ನೀನೆನಗೆ ನನ್ನ ಬಾಳ ಏಳಿಗೆಗೆ | ದಾರಿದೀಪವಾಗೆನಗೆ ನನ್ನ ಬಾಳ ಈ ಹಾದಿಗೆ || ಗುರುನೀನೇ ಗುರಿತೋರಿಸು ನೀನೇ ಇನ್ನಾರಿಹರೆನಗೆ ನೀನಲ್ಲದೀಬಾಳಿಗೆ| ಬದುಕ ಬವಣೆಯ ಬಿಡಿಸು ಬಾಳ ಮಹಿಮೆಯ ತಿಳಿಸು|| ಏಕೆ ಮತ್ತೆ ಮತ್ತೆ ಪುನರಪಿಸುವೆವೋ ಕಾಣೆ...

ದೇವ ಕರುಣಿಸು ನನಗೊಂದು ಕುಡಿಯ| ಜನ್ಮನೀಡಿ ಈ ಜನ್ಮವ ಪಾವನವಾಗಿಸುವೆನು| ಅಮ್ಮನೆಂದೆನಿಸಿಕೊಂಡೊಮ್ಮೆ ಆ ಮಮತೆಯನು ಸವಿಯುವೆನು|| ಆ ಹಸುಗೂಸು ಮಡಿಲಲಿ ಮಲಗಿ ಪುಟ್ಟ ಕಾಲಲಿಂದ ಒದೆಯುವುದ ನಾ ಕಲ್ಪಿಸಿ, ಅದರ ಬರುವಿಕೆಗಾಗಿ ಕಾದಿರುವೆ ಕಾತರಿಸಿ | ದಯೆ...

ದೇವಾ ನಿನ್ನ ನಾಮಾಮೃತವ ಸದಾ ಸವಿಯುತಲಿದ್ದರೆ ಹಸಿವು ಎನಿಸುವುದಿಲ್ಲಾ | ಸಮಯ ಸವೆಯುವುದೇ ತಿಳಿಯುವುದಿಲ್ಲಾ|| ಚಿತ್ತದೊಳು ನಿನ್ನನ್ನಿರಿಸಿ ಮನದಿ ನಿನ್ನ ಸ್ಮರಿಸಿ ನಿತ್ಯ ಕೆಲಸ ಪ್ರಾರಂಭಿಸೆ ಯಾವ ವಿಘ್ನಗಳಿಲ್ಲ| ತಿನ್ನುವ ಅನ್ನವನು ನೀನಿತ್ತ ಪ್ರ...

ಮಲಗು ಮುದ್ದಿನ ಕಣ್ಮಣಿ ಮಲಗು ಪ್ರೀತಿಯ ಚಿನ್ಮಯಿ| ಮಲಗೂ ಮಲಗೆನ್ನ ಅರಗಿಣಿ ಜೋಗುಳವ ಹಾಡುತಲಿ ತಂಪೆಲರ ಬೀಸುತಲಿದೆ ತಂಗಾಳಿ || ನಿದಿರೆಯು ನಿನ್ನನು ಕರೆದೊಯ್ಯುವಳು ಚಂದ್ರನ ಜೊತೆಗೂಡಿ ಆಟವನಾಡುವಳು| ಬಣ್ಣಬಣ್ಣದಗೊಂಬೆಗಳ ಕೊಡುವಳು ಮುಗಿಲ ಜೋಕಾಲಿ ...

ಹೋಗುವುದಾದರೆ ಹೋಗು ನಿನ್ನ ತವರಿಗೆ, ನಿನ್ನ ಸಂತೋಷ ವಿನೋದಕೆ| ಮತ್ತೆ ಹಾಗೆ ನಿನ್ನ ಸಂಭ್ರಮ, ಸಡಗರಕೆ ನೀನು ತವರಿಗೆ ಕಳುಹಿಸಿ ನಾನು ಖುಷಿಪಡುವೆ ಒಳಗೊಳಗೆ|| ಅಲ್ಲಿ ನಿನ್ನ ಅಮ್ಮ ನಿನಗೆ ಕೈ ತುತ್ತ ಬಡಿಸಿದರೆ… ಇಲ್ಲಿ ಬ್ರಹ್ಮಚಾರಿಯಾಗಿ ನಾ...

ಗೆಳೆತಿ ನನ್ನ ಪ್ರೀತಿಯ ನಿನ್ನ ಗೆಳೆತಿಗೆ ಪರಿಚಯಿಸುವೆಯಾ?| ನನ್ನ ಹೃದಯದ ಮಾತುಗಳ ಅವಳ ಹೃದಯಕೆ ನೀ ಮುಟ್ಟಿಸುವೆಯಾ|| ಸದಾ ನನ್ನ ಜೊತೆಗಿರುವೆ ನನ್ನೆಲ್ಲಾ ಆಸೆಗಳ ಅರಿತಿರುವೆ| ಅವಳ ನಾನೆಷ್ಟು ಪ್ರೀತಿಸುವೆ ಎಂದು ನೀ ತಿಳಿದಿರುವೆ| ಆದರೂ ಅದೇಕಿಷ್...

ಹದಿನಾರರ ಹರೆಯದೋಕುಳಿಯಲ್ಲಿ ಕಾಲ ಜಗಮಘ| ಬದುಕು ಹರ್ಷಮಯ ಜಗವು ವರ್ಣಮಯ|| ಮನದ ಮಾತಿಗಿಂತ ರೂಪ ಆರ್ಕಷಣೆಗೇ ಒಲವು| ಬುದ್ಧಿ ಮಾತಿಗಿಂತ ಹೃದಯದ ಮಾತಿಗೆ ಸೆಳವು| ಎಲ್ಲಾ ಅಂದುಕೊಂಡಂತೆ ಆದ್ದದೇ ಆದರೆ ಶೃಂಗಾರವೀಕಾಲ|| ಸ್ನೇಹ ಜೊತೆಯಲಿ ಪ್ರೀತಿ ತಾನಾಗ...

ಹರಿಯೇ ನೀನು ನಂಬಿದವರ ಕೈಯ ಬಿಡವನಲ್ಲವೆಂದು | ತಿಳಿದು ನಾನು ಅಚಲವಾಗಿ ನಿನ್ನ ನಂಬಿರುವೆನು || ಏನೇ ಕಷ್ಟ ಬಂದರೂನು ನಿನ್ನ ನೆನೆದು ನೀಗಿ ಬಿಡುವೆನು|| ಮತ್ತೆ ಮತ್ತೆ ಬಿಡದೆ ನನ್ನಪಾಪ ಬೆನ್ನ ಹತ್ತಿಬಂದರೂನು ನಿನ್ನ ಜಪಿಸಿ| ಎಲ್ಲ ಕರ್ಮವನು ಕಳೆಯ...

ಹೇಗೆ ತಾನೇ ಸಹಿಸಲಿ? ಹೇಗೆ ತಾನೇ ಮರೆಯಲಿ|| ಆ ನಿನ್ನ ದೇಶಪ್ರೇಮದ ಕೆಚ್ಚದೆಯ ಕಿಚ್ಚ ಸುಟ್ಟ ಆ ಕಡುವೈರಿಯ ಅಟ್ಟಹಾಸವ || ಅಂದು ನೀನು ಸೈನ್ಯ ಸೇರಿದ ದಿನ ಊರೆಲ್ಲಾ ನಿನ್ನ ದೇಶಪ್ರೇಮ ಕಂಡು ಸಂಭ್ರಮಿಸಿ ಕುಣಿದಾಡಿದಾಕ್ಷಣ| ನಿನ್ನ ಶಾಲೆಗೆ ಕರೆಸಿ ಗೌ...

1...910111213...17

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...